More

    ಶಿಗ್ಗಾಂವಿ ಏತ ನೀರಾವರಿ ಯೋಜನೆಗೆ 300 ಎಕರೆ ಭೂಸ್ವಾಧೀನ

    ಹಾನಗಲ್ಲ: ಶಿಗ್ಗಾಂವಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸುಮಾರು 9 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಿದ್ದು, ಈ ಕುರಿತಂತೆ ರೈತರೊಂದಿಗೆ ರ್ಚಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ತಾಲೂಕಿನ ರೈತರೊಂದಿಗೆ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಅವರು, ಶಿಗ್ಗಾಂವಿ ತಾಲೂಕಿನ ನಾಗನೂರು ಗ್ರಾಮದ ಬಳಿಯ ಏತ ನೀರಾವರಿ ಯೋಜನೆಗೆ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ರೈತರ ಭೂಮಿ ಸ್ವಾಧೀನ ಕೈಗೊಳ್ಳಬೇಕಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿ ನೀಡುತ್ತಿರುವ ರೈತರೊಂದಿಗೆ ಭೂಮಿಯ ದರ ನಿಗದಿಗೊಳಿಸುವ ಕುರಿತು ರ್ಚಚಿಸಲಾಗಿದೆ. ಎಲ್ಲ ರೈತರೂ ಸಹಮತ ವ್ಯಕ್ತಪಡಿಸಿದ್ದಾರೆ. ಸರ್ಕಾರ ನಿಗದಿಪಡಿಸಿರುವ ದರವನ್ನು ರೈತರಿಗೆ ತಿಳಿಸಲಾಗಿದೆ. ಇನ್ನಷ್ಟು ಹೆಚ್ಚಿನ ದರ ಕೊಡಿಸುವುದಾಗಿ ಭರವಸೆ ನೀಡಿದ್ದೇವೆ ಎಂದರು.

    ರೈತರು ಒಪ್ಪಿಗೆ ಸೂಚಿಸಿದರೆ ತಕ್ಷಣ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಆದಾಗ್ಯೂ ಮತ್ತೊಂದು ಬಾರಿ ರೈತರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಹಾನಗಲ್ಲ ತಾಲೂಕಿನ 30 ರೈತರ ಭೂಮಿ ಯೋಜನೆಗೆ ಒಳಗೊಳ್ಳಲಿದೆ. ಈ ಯೋಜನೆಗೆ ಶಿಗ್ಗಾಂವಿ, ಹಾವೇರಿ ಮತ್ತು ಹಾನಗಲ್ಲ ತಾಲೂಕಿನ ರೈತರ ಸುಮಾರು 300 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಇದರಿಂದ ಮೂರು ತಾಲೂಕಿನ ರೈತರ ಸಾವಿರಾರು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ ಎಂದು ಶೆಟ್ಟೆಣ್ಣವರ ವಿವರಿಸಿದರು.

    ನೀರಾವರಿ ಅಭಿವೃದ್ಧಿ ಯೋಜನೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇವೆ. ಏತ ನೀರಾವರಿ ಮೂಲಕ ನೀರು ನಿಲ್ಲಿಸಿದರೆ, ಮೂರು ತಾಲೂಕಿನ ರೈತರ ಭೂಮಿ ಮುಳುಗಡೆಯಾಗುತ್ತವೆ. ಅದಕ್ಕೂ ಮೊದಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ರೈತರು ಕೂಡಲೆ ತೀರ್ಮಾನ ಕೈಗೊಳ್ಳದಿದ್ದರೆ, ಯೋಜನೆ ಕಾಮಗಾರಿ ವಿಳಂಬವಾಗುತ್ತದೆ. ಅದಕ್ಕಾಗಿ ರೈತರನ್ನು ಒತ್ತಾಯಿಸುತ್ತಿದ್ದೇವೆ. ಯೋಜನೆಗೆ ಹಣದ ಕೊರತೆಯಿಲ್ಲ. ರೈತರಿಂದ ಭೂಮಿ ಪಡೆದು, ಕೂಡಲೆ ಹಣ ಪಾವತಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    ಸಭೆಯಲ್ಲಿ ತಾಲೂಕಿನ ಕೂಡಲ, ಹರವಿ, ವರ್ದಿ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts