More

    ಸಾಧನೆ, ಪರಿಶ್ರಮದಿಂದ ಗುರಿ ಸಾಧನೆ: ಪ್ರೊ. ಪ್ರಭಾಕರ್ ಎಸ್. ಮಂಟುರೆ

    ಶಿಕಾರಿಪುರ: ವಿದ್ಯಾರ್ಥಿ ಜೀವನ ಎಂದರೆ ಅದು ಸಾಧನೆಯ ಕಾಲ. ಸಂಕಲ್ಪ ಮತ್ತು ಗುರಿ ತಲುಪಲು ಸಿದ್ಧತೆ ಮಾಡಿಕೊಂಡು ಸತತ ಅಭ್ಯಾಸ ಮಾಡಿದರೆ ವಿದ್ಯೆ ದೊರಕುತ್ತದೆ. ಈ ಸಮಯವನ್ನು ಉಪೇಕ್ಷೆ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಿರಾಳಕೊಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಪ್ರಭಾಕರ್ ಎಸ್. ಮಂಟುರೆ ಹೇಳಿದರು.
    ಶುಕ್ರವಾರ ಕುಮದ್ವತಿ ಮಹಾವಿದ್ಯಾಲಯದ 2023-24ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಎಕ್ಯೂಎಸಿ, ಸುಗಂಧ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸಾಧನೆ ಮತ್ತು ಪರಿಶ್ರಮ ನಮ್ಮ ಪ್ರತಿ ಹೆಜ್ಜೆಗೂ ಇದ್ದರೆ ಗೆಲುವು ಮತ್ತು ಯಶಸ್ಸು ನಮ್ಮನ್ನು ಅರಸಿಕೊಂಡು ಬರುತ್ತವೆ. ಸಂಸ್ಕಾರಯುತ ಮತ್ತು ಸಾಮಾಜಿಕ ಕಳಕಳಿಯ ಶಿಕ್ಷಣ ನಮ್ಮದಾಗಬೇಕು. ಸಮಯ ಪ್ರಜ್ಞೆ, ನಂಬಿಕೆಯಿಂದ ನಡೆದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ. ಕೇವಲ ಅವಶ್ಯಕತೆಗಾಗಿ ಓದದೆ ಜ್ಞಾನಾರ್ಜನೆಗಾಗಿ ಓದಿ. ಶಿಕ್ಷಕರಿಗೆ ಸಂವಹನ ಮತ್ತು ಸಂಪರ್ಕದ ಅಗತ್ಯವಿದೆ ಎಂದರು.
    ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಜಿ.ಎಸ್.ಶಿವಕುಮಾರ್ ಮಾತನಾಡಿ, ಶಿಕ್ಷಕ ವೃತ್ತಿ ಗೌರವಯುತವಾದುದು. ಹಲವು ವಿದ್ಯಾರ್ಥಿಗಳ ಜೀವನ ಬೆಳಗಿಸುತ್ತದೆ. ಅಧ್ಯಯನ ಇಲ್ಲದೆ ಅಧ್ಯಾಪನ ಸಾಧ್ಯವಿಲ್ಲ. ನೀವು ಹೆಚ್ಚು ಅಧ್ಯಯನಶೀಲರಾಗಿ ಎಂದು ಸಲಹೆ ನೀಡಿದರು.
    ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಡಳಿತ ಸಮನ್ವಯಾಧಿಕಾರಿ ಕೆ.ಕುಬೇರಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಆಂತರಿಕ ಹಾಗೂ ಬಾಹ್ಯ ಶಿಸ್ತು, ಸಮಯ ಪ್ರಜ್ಞೆ ಬಹಳ ಮುಖ್ಯ. ಶಿಕ್ಷಕರಾಗಲು ಬಯಸುವವರು ಸಾಧನೆ ಮಾಡುವ ಛಲವಿರಬೇಕು. ಉನ್ನತ ಹುದ್ದೆಯಲ್ಲಿದ್ದರೂ ಶಿಸ್ತು ಇರದಿದ್ದರೆ ಉತ್ತಮ ಪ್ರತಿಫಲ ಪಡೆಯಲು ಸಾಧ್ಯವಿಲ್ಲ ಎಂದರು. ಕಾಲೇಜಿನ ಬೋಧಕ, ಬೋಧಕೇತರ ವರ್ಗ, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು, ಪ್ರಥಮ ಹಾಗೂ ತೃತೀಯ ಸೆಮಿಸ್ಟರ್‌ನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts