More

    ವಸತಿಗಾಗಿ 38 ದಿನದ ಹೋರಾಟ, ಸ್ಪಂದನೆ ಇಲ್ಲದಿರುವುದು ಖಂಡನಾರ್ಯ

    ಸಿಂಧನೂರು: ತಾಲೂಕಿನ ಬೂದಿವಾಳ ಕ್ಯಾಂಪಿನಲ್ಲಿ ನಡೆಸಿರುವ ಹೋರಾಟ 38 ನೇ ದಿನಕ್ಕೆ ಮುಂದುವರಿದರು ಜಿಲ್ಲಾಧಿಕಾರಿ, ತಾಲೂಕು ಆಡಳಿತ ಮತ್ತು ಸ್ಥಳೀಯ ಶಾಸಕರು ಸ್ಪಂದಿಸದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ರಾಜ್ಯ ಅಧ್ಯಕ್ಷ ಡಿ.ಎಚ್.ಪೂಜಾರಿ ತಿಳಿಸಿದರು.

    ಇದನ್ನೂ ಓದಿ: ವಸತಿಗಾಗಿ ನಿವಾಸಿಗಳ ಪಾದಯಾತ್ರೆ

    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೋರಾಟ ಪ್ರಾರಂಭದ ದಿನಗಳಲ್ಲಿ ತಹಸೀಲ್ದಾರ್ ಅರುಣ ದೇಸಾಯಿ, ಡಿವೈಎಸ್ಪಿ, ಸರ್ಕಲ್ ಇನ್ಸಪೆಕ್ಟರ್ ನಮ್ಮೊಂದಿಗೆ ಚರ್ಚಿಸಿ ಎರಡು ದಿನಗಳೊಳಗೆ ಸಮಸ್ಯೆ ಬಗೆಹರಿಸಲು ಭರವಸೆ ನೀಡಿದ್ದರು.

    ಆದರೆ ಹೋರಾಟ 38 ದಿನ ಕಳೆದರು, ಕೊಟ್ಟ ಭರವಸೆ ಹುಸಿಯಾಗಿದೆ. ಸರ್ವೆ ನಂ-67ರಲ್ಲಿ 2ಎಕರೆ 10ಗುಂಟೆ ಸರ್ಕಾರಿ ಜಮೀನಿನಲ್ಲಿ ವಾಸಿಸುವ 45 ಕುಟುಂಬಗಳು 94 ಸಿ ಅಡಿಯಲ್ಲಿ ಅರ್ಜಿ ಹಾಕಿದ್ದರೂ ಸಹ ಹಕ್ಕು ಪತ್ರ ವಿತರಿಸಿಲ್ಲ.

    ಸರ್ವೆ ನಂ 44 ರ 2 ಎಕರೆ 20 ಗುಂಟೆಯಲ್ಲಿ ಮಾತ್ರ ಸರ್ವೆ ನಡೆಸಲಾಗಿದೆ. ಫಲಾನುಭವಿಗಳ ಬಡಾವಣೆ ನಕಾಶೆ ತಯಾರಿಸದೆ, ಹತ್ತು ಹಲವು ನೆಪ ಹೇಳುತ್ತಿದ್ದಾರೆ. ಈಗಾಗಲೇ ಜನತಾ ನಿವೇಶನಗಾಗಿ ಮೀಸಲಿಟ್ಟ ಜಾಗದ ಕುರಿತು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

    150 ಫಲಾನುಭವಿಗಳ ಅರ್ಜಿಯನ್ನು ಸೋಮಲಾಪುರ ಪಂಚಾಯತಿಯಲ್ಲಿ ವಸತಿ ರಹಿತ ಫಲಾನುಭವಿಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಎಂದು ತಿಳಿ ಹೇಳಿದರು ಕೇವಲ 44 ಜನರನ್ನು ಮಾತ್ರ ಸೇರ್ಪಡೆ ಮಾಡಿದ್ದಾರೆ.

    ಹಾಗೆ ವಸತಿ, ಭೂಮಿ, ಹೊಂದಿದ ನೂರಾರು ನಕಲಿ ಫಲಾನುಭವಿಗಳ ಪಟ್ಟಿಯನ್ನು ವಸತಿ ರಹಿತ ಫಲಾನುಭವಿಗಳ ಪಟ್ಟಿಯಲ್ಲಿ ಕಾನೂನು ಬಾಹಿರವಾಗಿ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದರು.

    ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ತಾಲೂಕು ಅಧ್ಯಕ್ಷ ರಮೇಶ್ ಪಾಟೀಲ್ ಬೇರ್ಗಿ, ತಾಲೂಕು ಉಪಾಧ್ಯಕ್ಷ ಚಿಟ್ಟಿಬಾಬು, ಸದಸ್ಯರಾದ ಎಂ.ಗಂಗರಾಜ ಹಂಚಿನಾಳ ಕ್ಯಾಂಪ್, ಪರಶುರಾಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts