More

    ಅದೆಷ್ಟು ಭ್ರಷ್ಟ ಅಧಿಕಾರಿ?: ಮನೆಯಲ್ಲಿತ್ತು ರಾಶಿ ಹಣ, ಈಗ ಬ್ಯಾಂಕ್​ ಲಾಕರ್​ ತೆರೆದ ಅಧಿಕಾರಿಗಳಿಗೆ ಶಾಕ್​!

    ಹೈದರಾಬಾದ್​: ತೆಲಂಗಾಣದ ಕೇಸರ ಮಂಡಲದ ತಹಸೀಲ್ದಾರ್​ ಎರ್ವ ಬಾಲರಾಜ್​ ನಾಗರಾಜು ವಿರುದ್ಧ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ ತಹಸೀಲ್ದಾರ್​ ಬ್ಯಾಂಕ್​ ಲಾಕರ್​ನಲ್ಲಿ 57.6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

    ಆಗಸ್ಟ್​ 14ರಂದು ಎಸಿಬಿ ಅಧಿಕಾರಿಗಳ ಎ.ಎಸ್​. ರಾವ್​ ನಗರದಲ್ಲಿರುವ ತಹಸೀಲ್ದಾರ್​ ಗೆಸ್ಟ್​ ಹೌಸ್​ ಮೇಲೆ ದಾಳಿ ಮಾಡಿ, ಇಬ್ಬರು ರಿಯಲ್​ ಎಸ್ಟೇಟ್​ ಡೀಲರ್​ಗಳಿಂದ ತಹಸೀಲ್ದಾರ್​ ಲಂಚ ಪಡೆಯುತ್ತಿದ್ದ ವೇಳೆ ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದರು. ಇದು ಇತ್ತೀಚೆಗೆ ನಡೆದ ಬಹುದೊಡ್ಡ ದಾಳಿ ಆಗಿತ್ತು. ಈ ವೇಳೆ ತಹಸೀಲ್ದಾರ್​ ಗೆಸ್ಟ್​ಹೌಸ್​ನಲ್ಲಿ 1 ಕೋಟಿ 10 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ, ಕಾರಿನಲ್ಲಿ 8 ಲಕ್ಷ ರೂ. ಸೀಜ್​ ಮಾಡಲಾಗಿತ್ತು.

    ಇದಲ್ಲದೆ ಮನೆಯನ್ನು ಹುಡುಕಾಡಿದಾಗ ಹೆಚ್ಚುವರಿಯಾಗಿ 27 ಲಕ್ಷ ರೂ. ಹಣ ಮತ್ತೆ ಪತ್ತೆಯಾಗಿತ್ತು. ತಹಸೀಲ್ದಾರ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಎಸಿಬಿ ತನ್ನ ದಾಳಿಯನ್ನು ಮುಂದುವರಿಸಿತು. ಇದರ ಭಾಗವಾಗಿ ಇಂದು ತಹಸೀಲ್ದಾರ್​ಗೆ ಸಂಬಂಧಿಸಿದ ಬ್ಯಾಂಕ್​ ಲಾಕರ್​ ಅನ್ನು ಓಪನ್​ ಮಾಡಿದಾಗ ಬರೋಬ್ಬರಿ 57.6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಲಾಕರ್​ ತಹಸೀಲ್ದಾರ್​ ಸಂಬಂಧಿ ಜಿ.ಜೆ. ನರೇಂದರ್​ ಹೆಸರಿನಲ್ಲಿತ್ತು.

    ಇದನ್ನೂ ಓದಿ: ಕಂಪನಿಯೊಂದರ ಮೇಲೆ ದಾಳಿ ಮಾಡಿದ ಎಸಿಬಿಗೆ ಸಿಕ್ತು ರಾಶಿ ರಾಶಿ ಹಣ: ಅದೆಲ್ಲವೂ ಭ್ರಷ್ಟಾಚಾರದ ರಾಣಿಗೆ ಸೇರಿದ್ದು!

    ಅದೆಷ್ಟು ಭ್ರಷ್ಟ ಅಧಿಕಾರಿ?: ಮನೆಯಲ್ಲಿತ್ತು ರಾಶಿ ಹಣ, ಈಗ ಬ್ಯಾಂಕ್​ ಲಾಕರ್​ ತೆರೆದ ಅಧಿಕಾರಿಗಳಿಗೆ ಶಾಕ್​!

    ಈಗಾಗಲೇ ತಹಸೀಲ್ದಾರ್​ ಬಂಧಿಯಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಕೇಸರ ಮಂಡಲದ ದಯಾರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ 28 ಎಕರೆ ಜಮೀನು ವಿವಾದದಲ್ಲಿತ್ತು. ಗ್ರಾಮದ ಕೆಲವರು ಕೋರ್ಟಿನಲ್ಲಿ ದಾವೆ ಹೂಡಿ ತಮ್ಮ ಪರವಾಗಿ ಮಾಡಿಕೊಂಡಿದ್ದರು. ಆದಾಗ್ಯೂ, ರಿಯಲ್​ ಎಸ್ಟೇಟ್​ ಡೀಲರ್​ಗಳ ಪರವಾಗಿ ಜಮೀನು ಮಾಡಿಕೊಡುವುದಾಗಿ ಹೇಳಿ ಅವರಿಗೆ ತಹಸೀಲ್ದಾರ್ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.​ ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. (ಏಜೆನ್ಸೀಸ್​)

    ಇದನ್ನೂ ಓದಿ: ಇನ್ನೇನು ಬಸ್​ ಹತ್ತಬೇಕೆನ್ನುವಷ್ಟರಲ್ಲಿ ಪತಿ ಕಣ್ಣೆದುರಲ್ಲೇ ದುರಂತ ಅಂತ್ಯಕಂಡ ಗರ್ಭಿಣಿ ನರ್ಸ್​!

    VIDEO| ಬರೋಬ್ಬರಿ 1 ಕೋಟಿ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts