More

    ಶಾಲಾ ಪಠ್ಯಗಳ ಸಿಲೆಬಸ್ ಕಡಿತ: ಸಚಿವ ಸುರೇಶ್ ಕುಮಾರ್ ಇಂಗಿತ

    ಬೆಂಗಳೂರು: ಕರೊನಾ ವೈರಸ್​ ಹಾವಳಿಯಿಂದ ನಿಗದಿತ ಅವಧಿಯಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುವ ಸಾಧ್ಯತೆಗಳು ಕ್ಷೀಣಿಸಿರುವುದರಿಂದ ಪಠ್ಯಗಳ ಸಂಖ್ಯೆಯನ್ನು ಕಡಿತ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ಸಚಿವರು, ಶೈಕ್ಷಣಿಕ ಅವಧಿಗೆ ಅನುಕೂಲವಾಗುವಂತ ಪಠ್ಯಕ್ರಮ ರೂಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು.

    ಇದನ್ನೂ ಓದಿ ಲಾಕ್​ಡೌನ್​ನಿಂದಾಗಿ ಏರಿದೆ ನಿರುದ್ಯೋಗ ಪ್ರಮಾಣ, ಆದರೆ ಕೆಲಸಕ್ಕೆ ಜನರೇ ಸಿಗುತ್ತಿಲ್ಲ

    ಪ್ರಸಕ್ತ ಶೈಕ್ಷಣಿಕ ಸಾಲು ಆರಂಭವಾಗುವ ಬಗ್ಗೆ ಈಗಲೇ ನಿರ್ಣಯ ಮಾಡುವುದು ಅಸಾಧ್ಯ. ಹೀಗಾಗಿ 1ರಿಂದ 10ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿಯಾಗಿರುವ ಪಠ್ಯಗಳನ್ನು ಗುರುತಿಸುವ ಕೆಲಸವನ್ನು ಆರಂಭಿಸಬೇಕು. ಎಷ್ಟು ದಿನ ತರಗತಿಗಳು ನಡೆಯುತ್ತವೆ ಎಂಬುದನ್ನು ಲೆಕ್ಕ ಹಾಕಿ ಅದಕ್ಕೆ ತಕ್ಕಂತೆ ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಪಠ್ಯಗಳನ್ನು ರೂಪಿಸಬೇಕು. ಅನಗತ್ಯ ಹಾಗೂ ಪುನಾರಾವರ್ತಿತ ಪಠ್ಯಗಳನ್ನು ಕೈಬಿಟ್ಟು ಅಗತ್ಯ ಪಠ್ಯಗಳನ್ನು ಮಾತ್ರ ಉಳಿಸಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಹೇಳಿದರು.

    ಕೋವಿಡ್-19 ಕುರಿತ ಪಠ್ಯ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಾಂಕ್ರಾಮಿಕ ರೋಗವಾಗಿರುವ ಕರೊನಾ ವೈರಸ್​ ಸೋಂಕು ಕುರಿತು ಪಠ್ಯಗಳನ್ನು ತಯಾರಿಸುವ ಕ್ರಿಯಾ ಯೋಜನೆ ರೂಪಿಸಿ, ಈ ಪಠ್ಯದಲ್ಲಿ ವೈರಸ್​ ಬಗ್ಗೆ ಮಾಹಿತಿ, ಸೋಂಕು ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ವಯೋಮಾನಕ್ಕೆ ಸಹಜವಾಗಿ ಆಕರ್ಷಕವಾಗಿ ಬರೆದು ಪಠ್ಯ ತಯಾರಿಸಿ, ಈ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿ ಎಂದರು.

    ಇದನ್ನೂ ಓದಿ  ಕೇರಳದಲ್ಲಿ ಈಗ ಇರುವ ಆ್ಯಕ್ಟಿವ್ ಕರೊನಾ ವೈರಸ್ ಕೇಸ್​ ಕೇವಲ 30!

    ಮಕ್ಕಳವಾಣಿ ಯೂ-ಟ್ಯೂಬ್ ಚಾನೆಲ್ ಇಡೀ ರಾಷ್ಟ್ರದ ಗಮನ ಸೆಳೆದಿದೆ. 1ರಿಂದ 10ನೇ ತರಗತಿವರೆಗೆ ವಿಷಯವಾರು, ಅಧ್ಯಾಯವಾರು ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಬೋಧನೆ ಚಿತ್ರೀಕರಿಸಿ ಯೂಟೂಬ್​ಗೆ ಅಪ್​ಲೋಡ್​ ಮಾಡಿ ಎಂದು ಸಚಿವರು ಸೂಚಿಸಿದರು.

    ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಆಯುಕ್ತ ಡಾ. ಕೆ.ಜೆ. ಜಗದೀಶ್, ಎಸ್ಎಸ್ ಕೆ ಯೋಜನಾ ನಿರ್ದೇಶಕ ಡಾ. ಎಂ.ಟಿ. ರೇಜು, ಪಿಯು ಇಲಾಖೆ ನಿರ್ದೇಶಕಿ ಕನಗವಲ್ಲಿ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

    ಏರ್​ಲಿಫ್ಟ್​ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವವರಿಗೆ ಕ್ವಾರಂಟೈನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts