More

    ಟ್ರಕ್​ ಚಾಲಕರಿಗೆ ಎಸಿ ಕ್ಯಾಬಿನ್​ ಕಡ್ಡಾಯ!

    ನವದೆಹಲಿ: ವಾಹನೋದ್ಯಮದ ಒಂದು ಮಹತ್ವದ ಬೆಳವಣಿಗೆಯಲ್ಲಿ, 2025 ಅಕ್ಟೋಬರ್​ 1ರಿಂದ ಉತ್ಪಾದಿಸಲಾಗುವ ಎಲ್ಲ ಎನ್​2 ಮತ್ತು ಎನ್​3 ವಾಣಿಜ್ಯ ವಿಭಾಗದ ಟ್ರಕ್​ಗಳಲ್ಲಿ ಚಾಲಕರಿಗೆ ಹವಾನಿಯಂತ್ರಿತ ಕ್ಯಾಬಿನ್​ ಕಡ್ಡಾಯಗೊಳಿಸಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

    ಚಾಲಕರಿಗೆ ಫ್ಯಾಕ್ಟರಿ-ಫಿಟ್ಟೆಡ್​ ಎಸಿ ಕ್ಯಾಬಿನ್​ಗಳನ್ನು ಅಳವಡಿಸುವಂತೆ ಅದು ಸೂಚಿಸಿದೆ. ಚಾಲಕರ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗುವ ಈ ಕ್ರಮದಿಂದ ಟಾಟಾ, ಅಶೋಕ್​ ಲೈಲ್ಯಾಂಡ್​ ಮತ್ತು ಮಹೀಂದ್ರಾ ಮುಂತಾದ ಟ್ರಕ್​ ಉತ್ಪಾದಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಜುಲೈ 10ರಂದು ಈ ಅಧಿಸೂಚನೆ ಹೊರಡಿಸಲಾಗಿದೆ.

    ಟ್ರಕ್ ಚಾಲಕರು ಸತತ ಸುದೀರ್ಘ ಅವಧಿಗೆ ವಾಹನ ಚಾಲನೆ ಮಾಡಬೇಕಾಗಿದ್ದು, ಕ್ಯಾಬಿನ್ ಬಿಸಿಯೇರುತ್ತದೆ. ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಇವರ ಯೋಗಕ್ಷೇಮ ಮುಖ್ಯ ಎಂದು ಮನಗಂಡಿರುವ ಸರಕಾರ ಇದು ವೆಚ್ಚದಾಯಕ ಎಂಬ ಆಕ್ಷೇಪಗಳ ನಡುವೆ ಈ ತೀರ್ಮಾನ ಕೈಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts