More

    ಪರೀಕ್ಷೆ ವೇಳಾಪಟ್ಟಿ ವಿರುದ್ಧ ಎಬಿವಿಪಿ ಪ್ರತಿಭಟನೆ

    ಶಿವಮೊಗ್ಗ: ಕುವೆಂಪು ವಿವಿ ಪದವಿ ಕಾಲೇಜುಗಳ 4 ಮತ್ತು 6ನೇ ಸೆಮಿಸ್ಟರ್ ಆರಂಭವಾಗಿ ಎರಡು ತಿಂಗಳೇ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿರುವುದ ಅವೈಜ್ಞಾನಿಕ. ಕೂಡಲೇ ಈ ವೇಳಾಪಟ್ಟಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ಸೆಮಿಸ್ಟರ್ ಆರಂಭವಾಗಿ ಎರಡು ತಿಂಗಳು ಮಾತ್ರ ಕಳೆದಿರುವುದರಿಂದ ಪಠ್ಯದ ಭೋದನೆ ಪೂರ್ಣವಾಗಿಲ್ಲ. ಆದರೆ ವಿವಿ ಸೆ.8ರಿಂದ 22ರವರೆಗೆ ಪರೀಕ್ಷೆ ನಿಗದಿಪಡಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಸೆಮಿಸ್ಟರ್ ಅವಧಿಯ ಪಠ್ಯ ಬೋಧನೆಗೆ ಇನ್ನೂ ಒಂದು ತಿಂಗಳು ಬೇಕೆಂದು ಉಪನ್ಯಾಸಕರೇ ಹೇಳುತ್ತಿದ್ದಾರೆ. ಆದರೆ ವಿವಿಯಿಂದ ಪರೀಕ್ಷೆ ವೇಳಾಪಟ್ಟಿ ಹೊರಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಪಠ್ಯಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದೇ ಇರುವುದರಿಂದ ದಾವಣಗೆರೆ ವಿವಿಯಲ್ಲಿ ಪರೀಕ್ಷೆ ಮುಂದೂಡಲಾಗಿದೆ. ಕುವೆಂಪು ವಿವಿಯಲ್ಲೂ ಇದೇ ಮಾದರಿ ಅನುಸರಿಸಬೇಕೆಂದು ಒತ್ತಾಯಿಸಿದರು.
    ಕುವೆಂಪು ವಿವಿಯಲ್ಲಿ ಇದುವರೆಗೆ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿತ್ತು. ಅಂಕಪಟ್ಟಿ ಶುಲ್ಕ ಮಾತ್ರ ವಸೂಲಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೂ ಪರೀಕ್ಷಾ ಶುಲ್ಕ ಪಡೆಯಲಾಗುತ್ತಿದೆ. ಕುಲಪತಿಗಳು ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲದೇ ಹೋದರೆ ವಿದ್ಯಾರ್ಥಿಗಳು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಬಿವಿಪಿ ಕಾರ್ಯಕರ್ತರು ಎಚ್ಚರಿಸಿದರು.
    ಎಬಿವಿಪಿ ಶಿವಮೊಗ್ಗ ತಾಲೂಕು ಸಂಚಾಲಕ ಪಿ.ದರ್ಶನ್, ಕಾರ್ಯಕರ್ತರಾದ ರೋಹಿತ್, ಮಾಲತೇಶ್, ರವಿ, ಮದನ್, ಮಾಲತೇಶ ಮುಂತಾದವರು ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts