More

    ಕನ್ನಡದಲ್ಲೂ ಬರುತ್ತಿದೆ ಐಶ್ವರ್ಯಾ ರೈ ನಟನೆಯ ಪೊನ್ನಿಯಿನ್​ಸೆಲ್ವಂ: ಚಿತ್ರದ ಬಗ್ಗೆ ಪತಿ ಅಭಿಷೇಕ್​ ಹೇಳಿದ್ದು ಹೀಗೆ

    ಮುಂಬೈ: ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವಂ ಭಾಗ1 ಚಿತ್ರದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

    ಕೆಲ ವರ್ಷಗಳ ನಂತರ ಬ್ರೇಕ್​ ಪಡೆದು ಮತ್ತೆ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವ ಬಾಲಿವುಡ್​ ತಾರೆ ಐಶ್ವರ್ಯಾ ರೈ ಅವರೊಂದಿಗೆ ವಿಕ್ರಮ್​ ಹಾಗೂ ಕಾರ್ತಿ ಕೂಡ ನಟಿಸುತ್ತಿದ್ದಾರೆ.

    ಸದ್ಯ ಈ ಚಿತ್ರದ ಪೋಸ್ಟರ್​ ಭಾರೀ ಸದ್ದು ಮಾಡುತ್ತಿದ್ದು, ರಾಣಿ ನಂದಿನಿ ಪಾತ್ರದಲ್ಲಿ ಐಶ್ವರ್ಯಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಐಶ್ವರ್ಯಾ ರಾಣಿಯಂತೆಯೇ ಕಾಣಿಸುತ್ತಿದ್ದು, ಪತಿ ಅಭಿಷೇಕ್​ ಬಚ್ಚನ್ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ತನ್ನ ಪತ್ನಿ ಐಶ್ವರ್ಯಾರನ್ನು ಹಾಡಿಹೊಗಳಿದ್ದಾರೆ.

    ಪೋಸ್ಟರ್​ ಹಂಚಿಕೊಂಡಿರುವ ಅಭಿಷೇಕ್​​ ತನ್ನ ಪತ್ನಿಯ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. ಇನ್ನು ಅಭಿಮಾನಿಗಳು ಸಹ ಐಶ್ವರ್ಯಾ ಲುಕ್​​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸುಂದರವಾದ ರಾಣಿ ನಂದಿಯನ್ನು ಭೇಟಿಯಾಗಿ ಎಂದು ಅಭಿಷೇಕ್​ ಬರೆದುಕೊಂಡಿದ್ದಾರೆ. ಸೆಪ್ಟಂಬರ್​ 30 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ತಮಿಳು, ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲೂ ತೆರೆಗೆ ಬರಲಿದೆ. (ಏಜೆನ್ಸೀಸ್​)

    18 ದಿನದಲ್ಲಿ 8 ಬಾರಿ ತಾಂತ್ರಿಕ ದೋಷ: ನೋಟಿಸ್​ ನೀಡಿದ ಡಿಜಿಸಿಎಗೆ ಸ್ಪೈಸ್​​ಜೆಟ್​​ ಪ್ರತಿಕ್ರಿಯೆ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts