More

    ಅಲ್ಲಾ ದೇಶದ ಸ್ಥಿತಿ ಗಂಭೀರವಾಗಿದೆ, ನಿಮ್ಮ ಕೈಯಲ್ಲಿ ಮಾಡೋಕೆ ಆಗೋದು ಇಷ್ಟೇನಾ?; ಜೂ. ಬಚ್ಚನ್​ಗೆ ನೆಟ್ಟಿಗರ ಪ್ರಶ್ನೆ

    ಮುಂಬೈ: ದೇಶಕ್ಕೆ ದೇಶವೇ ಕರೊನಾಘಾತದಿಂದ ತತ್ತರಿಸಿದೆ. ಆಕ್ಸಿಜನ್ ಸೇರಿ ಅಗತ್ಯ ವಸ್ತುಗಳ ಕೊರತೆ ಎದುರಾಗಿದೆ. ಇಂಥ ಸಂದರ್ಭದಲ್ಲಿ ಬಾಲಿವುಡ್​ ನಟ ಜೂ. ಅಭಿಷೇಕ್ ಬಚ್ಚನ್​ಗೆ ಟ್ವಿಟರ್​ನಲ್ಲಿ ನೆಟ್ಟಿಗರೊಬ್ಬರು ನೇರಾ ನೇರಾ ಪ್ರಶ್ನೆ ಎಸೆದಿದ್ದಾರೆ. ನಿಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದಿದ್ದಾರೆ. ಆ ಪ್ರಶ್ನೆಗೆ ಸ್ವತಃ ಅಭಿಷೇಕ್ ಸಹ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಸಿನಿಮಾ ಮತ್ತು ರಾಜಕೀಯಕ್ಕೆ ಶಾಶ್ವತ ಗುಡ್ ​ಬೈ ಹೇಳಿದ ರಮ್ಯಾ! ಇನ್ನೆಂದೂ ಬಣ್ಣದ ಲೋಕಕ್ಕೆ ಬರಲ್ಲ ಎಂದ ಮೋಹಕ ತಾರೆ

    ಅಷ್ಟಕ್ಕೂ ಆಗಿದ್ದೇನೆಂದರೆ, ಅಭಿಷೇಕ್ ಬಚ್ಚನ್ ತಮ್ಮ ಟ್ವಿಟರ್ ಖಾತೆಯಿಂದ ‘ಎಲ್ಲರಿಗೂ ನನ್ನ ವರ್ಚುವಲ್ ಅಪ್ಪುಗೆ. ರೀ ಟ್ವಿಟ್ ಮಾಡಿ ಮತ್ತು ಪ್ರೀತಿಯನ್ನು ಹಂಚಿ. ಇಂಥ ಹೊತ್ತಲ್ಲಿ ಇದು ತುಂಬ ಮುಖ್ಯವಾದದ್ದು. ಮಾಸ್ಕ್​ ಧರಿಸಿ’ ಎಂದು ಟ್ವಿಟ್ ಮಾಡಿದ್ದರು. ಈ ಟ್ವಿಟ್​ಗೆ ಪ್ರತಿಯಾಗಿ ಪೂಜಾ ಎಂಬುವವರು, ‘ಜನ ಆಸ್ಪತ್ರೆಗಳಲ್ಲಿ ಬೆಡ್​ ಸಿಗದೆ, ಆಕ್ಸಿಜನ್ ಇಲ್ಲದೆ ಒದ್ದಾಡುತ್ತಿದ್ದಾರೆ. ಈ ಹೊತ್ತಲ್ಲಿ ನಿಮ್ಮ ಹಗ್​ ಯಾರನ್ನೂ ತಲುಪುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದರು.

    ಇದನ್ನೂ ಓದಿ: ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಅಭಿಷೇಕ್, ಮೇಡಂ, ನಾನು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದೇನೆ ಎಂದ ಮಾತ್ರಕ್ಕೆ ಏನೂ ಮಾಡುತ್ತಿಲ್ಲ ಅಂತ ಅರ್ಥವಲ್ಲ. ನಾವೆಲ್ಲರೂ ನಮ್ಮ ಕೈಲಾದಷ್ಟು ಮತ್ತು ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಪರಿಸ್ಥಿತಿ ತುಂಬ ದುಃಖಕರವಾಗಿದೆ, ಆದ್ದರಿಂದ ಸ್ವಲ್ಪ ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಹರಡುವುದು ಈ ಸಮಯದಲ್ಲಿ ಅಗತ್ಯವೆನಿಸಿತು ಎಂದಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts