More

    ಅಭಿಷೇಕ್​ ಅಂಬರೀಷ್​ ಅಭಿನಯದ ನಾಲ್ಕನೇ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ

    ‘ರೆಬಲ್​ ಸ್ಟಾರ್’ ಅಂಬರೀಷ್ ಮಗ ಅಭಿಷೇಕ್​ ಅಂಬರೀಷ್​, ‘ಮದಗಜ’ ಖ್ಯಾತಿಯ ಮಹೇಶ್​ ನಿರ್ದೇಶನದಲ್ಲಿ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಕೇಳಿಬಂದಿತ್ತು. ಅಂಬರೀಷ್​ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ ಘೋಷಣೆಯೂ ಆಗಿತ್ತು. ಈಗ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಆ ಒಂದು ಕೆಟ್ಟ ಬೈಗುಳ: 5 ವರ್ಷದ ಬಳಿಕ ವಿಜಯ್​ ದೇವರಕೊಂಡ ವಿರುದ್ಧ ಸೇಡು ತೀರಿಸಿಕೊಂಡ ಅನಸೂಯ!

    ಶನಿವಾರ, ಸುಮಲತಾ ಅಂಬರೀಷ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸುವುದರ ಜತೆಗೆ ಅವರಿಂದಲೇ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿಸಲಾಯಿತು. ಚಿತ್ರಕ್ಕೆ ಸದ್ಯಕ್ಕೆ ‘ಎಎ04’ ಎಂಬ ಹೆಸರನ್ನು ಇಡಲಾಗಿದೆ. ಚಿತ್ರವನ್ನು ರಾಕ್​ಲೈನ್​ ಪ್ರೊಡಕ್ಷನ್ಸ್​ ಸಂಸ್ಥೆಯಡಿ ರಾಕ್​ಲೈನ್​ ವೆಂಕಟೇಶ್​ ನಿರ್ಮಿಸುತ್ತಿದ್ದಾರೆ.

    ಅಭಿಷೇಕ್​ ಅಂಬರೀಷ್​ ಅಭಿನಯದ ನಾಲ್ಕನೇ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ

    ಈ ಚಿತ್ರದ ಕುರಿತು ಮಾತನಾಡುವ ಮಹೇಶ್​, ‘ಒಂಬತ್ತು ತಿಂಗಳ ಹಿಂದೆ ಅಭಿಷೇಕ್​ ಅವರ ಬಳಿ ಒಂದು ಕಥೆ ತೆಗೆದುಕೊಂಡು ಹೋಗಿದ್ದು. ಅದೊಂದು ಆಕ್ಷನ್​ ಥ್ರಿಲ್ಲರ್​ ಆಗಿದ್ದು, ಅವರು ಒಪ್ಪಿಗೆ ಕೊಟ್ಟರು. ಅದಕ್ಕಿಂತ ದೊಡ್ಡದೇನಾದರೂ ಮಾಡಬೇಕು ಅಂತಂದುಕೊಂಡಾಗ, ಈ ಕಥೆ ಸಿಕ್ಕಿತು. ಟಿ.ಕೆ. ದಯಾನಂದ್​ ಕೊಟ್ಟ ಕಥೆಗೆ ನಾನು ಚಿತ್ರಕಥೆ ಬರೆದಿದ್ದೇನೆ. ಈ ಕಥೆಯನ್ನು ರಾಕ್​ಲೈನ್​ ವೆಂಕಟೇಶ್​ ಅವರಿಗೆ ಹೇಳಿದಾಗ, ಅವರು ಖುಷಿಯಿಂದ ಒಪ್ಪಿ ಗ್ರೀನ್​ ಸಿಗ್ನಲ್​ ಕೊಟ್ಟರು’ ಎನ್ನುತ್ತಾರೆ ಮಹೇಶ್​.

    ಇದು ಸಾವಿರ ವರ್ಷದ ಹಿಂದಿನ ಕಥೆಯಂತೆ. ‘ಇದೊಂದು ಐತಿಹಾಸಿಕ ಚಿತ್ರ. ಒಂದು ಸಾವಿರ ವರ್ಷಗಳ ಹಿಂದಿನ ಕಥೆ ಇಲ್ಲಿದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಯಾವುದೇ ಘಟನೆಯನ್ನೂ ಆಧರಿಸಿದಲ್ಲ. ಕರ್ನಾಟಕದಲ್ಲೇ ಚಿತ್ರೀಕರಣ ನಡೆಯಲಿದೆ. ಹೆಚ್ಚಾಗಿ ಸೆಟ್​ಗಳನ್ನು ನಿರ್ಮಾಣ ಮಾಡಿ ಅದರಲ್ಲಿ ಚಿತ್ರೀಕರಣ ಮಾಡುತ್ತೇವೆ. ಈ ಚಿತ್ರದಲ್ಲಿ ಅಭಿಷೇಕ್​ ಅವರಿಗೆ ಏಳೆಂಟು ಗೆಟಪ್​ಗಳಿದ್ದು, ಆ ಪೈಕಿ ಈಗ ಬಿಡುಗಡೆಯಾಗಿರುವ ಗೆಟಪ್​ ಸಹ ಒಂದು’ ಎನ್ನುತ್ತಾರೆ ಮಹೇಶ್​.

    ಇದನ್ನೂ ಓದಿ: ಬಾಲಿವುಡ್​ನ ನಂಬರ್ 1 ನಟ ಯಶ್; ಕರಣ್ ಜೋಹರ್ ಪ್ರಶ್ನೆಗೆ ಶಾಹಿದ್ ಉತ್ತರ

    ಈ ಚಿತ್ರವನ್ನು ವರ್ಷದ ಕೊನೆಗೆ ಪ್ರಾರಂಭಿಸಲಾಗುವುದು ಎನ್ನುವ ಮಹೇಶ್​, ನವೆಂಬರ್​ ಹೊತ್ತಿಗೆ ಚಿತ್ರದ ಹೆಸರು ಅನಾವರಣಗೊಳಿಸಲಾಗುತ್ತದೆ ಎನ್ನುತ್ತಾರೆ.

    ಸಂಪ್ರದಾಯ ಮತ್ತು ಆಧುನಿಕತೆಯ ಸಂಘರ್ಷ: ‘ಡೊಳ್ಳು’ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts