More

    ಅಭಿನಯ ಕಾರ್ಯಾಗಾರ ಸಮಾರೋಪ

    ಕೋಟ: ಅಭಿನಯವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಲು ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕ. ನಾಟಕ ಅಥವಾ ಯಾವುದೇ ಸಾಹಿತ್ಯ ಪ್ರಕಾರಗಳು ಸಮಾಜವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಾಗದಿದ್ದರೂ ವೀಕ್ಷಕರಲ್ಲಿ ಒಂದು ಸಾಮಾಜಿಕ ಎಚ್ಚರ ಹುಟ್ಟುಹಾಕುತ್ತದೆ ಎಂದು ಹಿರಿಯ ಚಿಂತಕ ಹಾಗೂ ನಾಟಕಾರ ಪ್ರೊ.ಉಪೇಂದ್ರ ಸೋಮಯಾಜಿ ಅಭಿಪ್ರಾಯಪಟ್ಟರು.

    ಸಾಲಿಗ್ರಾಮ ಗುಂಡ್ಮಿಯ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಇತ್ತೀಚೆಗೆ ಚೇರ್ಕಾಡಿಯ ಕೋಟ ಶಿವರಾಮ ಕಾರಂತ ಸಾಂಸ್ಕೃತಿಕ ಸಂಘಟನೆ(ಕೋಶಿಕಾ) ವತಿಯಿಂದ ಒಂದು ತಿಂಗಳ ಕಾಲ ನಡೆಸಿದ ಅಭಿನಯ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

    ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಮಾತನಾಡಿ, ನಾಟಕಾಭಿನಯದಲ್ಲಿ ಸೂಕ್ಷ್ಮಸಂವೇದನೆಗಳಿರುತ್ತವೆ. ಪಾತ್ರಗಳಿಗೆ ತಕ್ಕ ಭಾವಾಭಿವ್ಯಕ್ತಿಯ ಜತೆಗೆೆ ಧ್ವನಿಯ ಏರಿಳಿತ, ನಟನೆಯ ಸೂಕ್ಷ್ಮತೆಗಳನ್ನು ತರಬೇತಿ ಪಡೆದ ನಟರು ಮಾತ್ರ ಅಭಿವ್ಯಕ್ತಿಸಲು ಸಾಧ್ಯ ಎಂದರು.

    ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಶುಭಹಾರೈಸಿದರು. ಕೋಶಿಕಾದ ಗೀತಾ ಸಾಮಂತ್, ಭಗವತಿ ಎಂ, ಹಿರಿಯ ನಟ ರಾಮಕೃಷ್ಣ ಉಪಸ್ಥಿತರಿದ್ದರು. ಭಗವತಿ ಎಂ. ಸ್ವಾಗತಿಸಿದರು. ರಾಮಚಂದ್ರ ಐತಾಳ ವಂದಿಸಿದರು. ವೈಕುಂಠ ಹೇರ್ಳೆ ನಿರೂಪಿಸಿದರು. ನಂತರ ಕೋಶಿಕಾ ಕಲಾವಿದರಿಂದ ರೋಹಿತ್ ಎಸ್.ಬೈಕಾಡಿ ನಿರ್ದೇಶನದಲ್ಲಿ ರಾಮಚಂದ್ರ ದೇವ ರಚಿಸಿದ ಕುದುರೆ ಬಂತು ಕುದುರೆ ನಾಟಕ ಪ್ರದರ್ಶನ ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts