More

    ದಾವೂದ್ ಇಬ್ರಾಹಿಂ ಸಹಚರ ಅಬ್ದುಲ್ ಮಜೀದ್ ಕುಟ್ಟಿ ಬಂಧನ

    ನವದೆಹಲಿ: ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿ 1997ರ ಗಣರಾಜ್ಯೋತ್ಸವ ದಿನ ಬಾಂಬ್​ ಸ್ಪೋಟ ನಡೆಸಿದ್ದ ಪ್ರಕರಣದ ಸಂಚುಕೋರ ಅಬ್ದುಲ್ ಮಜೀದ್ ಕುಟ್ಟಿಯನ್ನು ಗುಜರಾತಿನ ಉಗ್ರ ನಿಗ್ರಹ ದಳ (ಎಟಿಎಸ್​) ಜಾರ್ಖಂಡ್​ನ ಜೆಮ್ಶೆಡ್​ಪುರದಲ್ಲಿ ಭಾನುವಾರ ಬಂಧಿಸಿದೆ.

    ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಪಾಕಿಸ್ತಾನದ ಐಎಸ್​ಐ ಪರವಾಗಿ ಮಜೀದ್ ಕುಟ್ಟಿ ಬಾಂಬ್​ ಸ್ಫೋಟ ನಡೆಸಿದ್ದ. ಇದಕ್ಕೆ ಸಂಬಂಧಿಸಿ ಸ್ಫೋಟಕಗಳನ್ನು ದಾವೂದ್ ಕಳುಹಿಸಿಕೊಟ್ಟಿದ್ದ ಎಂಬುದು ದೃಢಪಟ್ಟಿದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವ ಎಟಿಎಸ್ ವಿಶೇಷ ಕಾರ್ಯಾಚರಣೆ ನಡೆಸಿದ ಕುಟ್ಟಿಯನ್ನು ಬಂಧಿಸಿದೆ.

    ಇದನ್ನೂ ಓದಿ:  ಜೆಡಿಯುಗೆ ಹೊಸ ಸಾರಥಿ- ನಾಯಕತ್ವದಿಂದ ಹಿಂದೆ ಸರಿದ್ರು ನಿತೀಶ್ ಕುಮಾರ್ !

    ಇದಕ್ಕೂ ಮೊದಲು, ನವೆಂಬರ್​ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ದಾವೂದ್ ಇಬ್ರಾಹಿಂಗೆ ಸೇರಿದ ಆರು ಆಸ್ತಿಗಳನ್ನು ಹರಾಜಿನ ಮೂಲಕ ಸರ್ಕಾರ ಮಾರಾಟ ಮಾಡಿದೆ. ದಾವೂದ್ ಇಬ್ರಾಹಿಂನ ಹಿರೀಕರ ಮನೆ 11 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಇತರೆ ಆಸ್ತಿಗಳು 11.58 ಕೋಟಿ ರೂಪಾಯಿಗೆ ಮಾರಾಟವಾಗಿತ್ತು ಎಂದು ವರದಿಯಾಗಿತ್ತು. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ‘ಇದೇನು ಜಾದೂ ಮಾಡ್ತಾ ಇದ್ದೀರಿ ರಾಹುಲ್ ಜೀ !’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts