More

    ಮಧ್ಯಪ್ರದೇಶ ಚುನಾವಣೆ; 75 ವರ್ಷಗಳಲ್ಲಿ ಬೇರೆಯವರು ಮಾಡದಿರುವುದನ್ನು ನಾವು ಮಾಡಿದ್ದೇವೆ: ಅರವಿಂದ್ ಕೇಜ್ರಿವಾಲ್​

    ಭೋಪಾಲ್: ಕಳೆದ 75 ವರ್ಷಗಳಲ್ಲಿ ಬೇರೆಯವರು ಮಾಡದಿದ್ದ ಕೆಲಸವನ್ನು ಆಮ್​ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮಾಡಿ ತೋರಿಸಿದೆ ಎಂದು ಎಎಪಿ ಮುಖ್ಯಸ್ಥ, ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

    ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸೆವ್ದಾ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಕ್ರಿವಾಲ್​, ಕಳೆದ 10 ವರ್ಷಗಳಲ್ಲಿ ದೆಹಲಿಯಲ್ಲಿ ನಾವು ಮಾಡಿರುವ ಅಭಿವರದ್ದಿ ಬೇರೆ ಯಾರು ಮಾಡಿಲ್ಲ ಎಂದಿದ್ದಾರೆ.

    ನಮ್ಮ ಪಕ್ಷ ಸಂಪೂರ್ಣ ಪ್ರಾಮಾಣಿಕವಾಗಿದ್ದು, ನಮ್ಮಲ್ಲಿರುವುದು ಕಟ್ಟಾ ದೇಶಭಕ್ತರು. ಹತ್ತು ವರ್ಷಗಳ ಹಿಂದೆ ನಮಗೆ ದೆಹಲಿಯಲ್ಲಿ ಆಡಳಿತ ನಡೆಸಲು ಅವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ನಾವು ಕಳೆದ 75 ವರ್ಷಗಳಲ್ಲಿ ಯಾರು ಮಾಡದೇ ಇರುವ ಅಭಿವೃದ್ದಿ ಕಾರ್ಯಗಳನ್ನು ಮಾಡಿ ತೋರಿಸಿದ್ದೇವೆ.

    ಇದನ್ನು ಓದಿ: ಈ ದಿನದಂದು ರಿಲೀಸ್​ ಆಗಲಿದೆ ಸಲಾರ್​ ಟ್ರೇಲರ್; ಹೊರಬಿತ್ತು ಮೇಜರ್​ ಅಪ್​ಡೇಟ್

    ದೆಹಲಿಯಲ್ಲಿನ ಶಿಕ್ಷಣ ಮಾದರಿಯಿಂದಾಗಿ ರೈತರ, ಕೂಲಿ ಕಾರ್ಮಿಕರ ಮಕ್ಕಳು ಇಂದು ಇಂಜಿನಿಯರ್​, ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡವರ ಮಕ್ಕಳು ಐಐಟಿ ಖರಗ್​ಪುರದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯ.

    ನಿಮಗೆ ನಿಂದನೆ, ಹಗರಣಗಳು, ಕೊಳಕು ರಾಜಕೀಯ ಬೇಕೆನ್ನಿಸಿದರೆ ಅವರಿಗೆ ಮತ ನೀಡಿ. ನಿಮಗೆ ಉತ್ತಮ ಶಾಲೆ, ಉಚಿತ ವಿದ್ಯುತ್​, ಆಸ್ಪತ್ರೆಗಳು ಬೇಕಾದರೆ ನೀವು ನಮಗೆ ಮತ ನೀಡಿ. ಹಿಂದೆ ಇದ್ದ ಸರ್ಕಾರಗಳು ಖಜಾನೆಯಲ್ಲಿ ಹಣವಿಲ್ಲ. ನಾವು ನಷ್ಟದಲ್ಲಿದ್ದೇವೆ ಎಂದು ಹೇಳಿದಗ್ದರು. ಆದರೆ, ನಾನು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಡೀ ದೇಶದಲ್ಲೇ ಯಾವುದಾದರು ಸರ್ಕಾರ ಲಾಭದಲ್ಲಿದ್ದರೆ ಅದು ದೆಹಲಿ ಸರ್ಕಾರ ಮಾತ್ರ ಎಂದು ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

    ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts