More

    ವಿಶ್ವನಾಥನ್​ ಆನಂದ್​ ಜತೆಗೆ ಚೆಸ್​ ಆಡಲಿದ್ದಾರೆ ಆಮೀರ್​ ಖಾನ್​!

    ಮುಂಬೈ: ಆಮೀರ್​ ಖಾನ್​ ಮತ್ತು ಗ್ರಾಂಡ್​ಮಾಸ್ಟರ್​ ವಿಶ್ವನಾಥನ್​ ಆನಂದ್​ ಇಬ್ಬರೂ ಹಲವು ವರ್ಷಗಳ ಸ್ನೇಹಿತರು. ಕೆಲವು ಚೆಸ್​ ಟೂರ್ನಿಗಳನ್ನು ಜತೆಯಾಗಿ ಉದ್ಘಾಟಿಸಿದವರು. ತಮ್ಮ ಆಟದ ಮೂಲಕ ಕೆಲವು ಟೂರ್ನಿಗಳಿಗೆ ಚಾಲನೆ ನೀಡಿದವರು. ಇದೀಗ ವಿಶ್ವನಾಥನ್​ ಆನಂದ್​ ಮತ್ತು ಆಮೀರ್​ ಮತ್ತೆ ಜತೆಯಾಗಿ ಆಟ ಆಡಲು ಸಜ್ಜಾಗಿದ್ದಾರೆ.

    ಇದನ್ನೂ ಓದಿ: ನಟ ಸುಶಾಂತ್​ ಸಿಂಗ್ ಬಗೆಗಿನ ಚಲನಚಿತ್ರ ಬಿಡುಗಡೆಗೆ ತಡೆ ಇಲ್ಲ

    ಕರೊನಾ ವಿರುದ್ಧ ಹೋರಾಟಕ್ಕೆ ಧನಸಂಗ್ರಹಿಸಲು ‘ಚೆಕ್​ಮೇಟ್​ ಕೋವಿಡ್​’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ಜೂನ್​ 13ರಂದು ಮುಂಬೈನಲ್ಲಿ ನಡೆಯಲಿದೆ. ಆಮೀರ್​ ಖಾನ್​, ಸಾಜಿದ್​ ನಾಡಿಯಾಡ್ವಾಲ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆರಂಭಿಕ ಮ್ಯಾಚ್​ನಲ್ಲಿ ವಿಶ್ವನಾಥನ್​ ಆನಂದ್​ ಮತ್ತು ಆಮೀರ್​ ಖಾನ್​ ಆಡಲಿದ್ದಾರೆ.

    ಇದನ್ನೂ ಓದಿ: ಬಂಗಾಳಿ ಚಿತ್ರನಿರ್ದೇಶಕ, ಕವಿ ಬುದ್ಧದೇಬ್​ ದಾಸ್​ಗುಪ್ತ ನಿಧನ

    ಇನ್ನು, ಆಮೀರ್​ ಖಾನ್​ ಸದ್ಯ ‘ಲಾಲ್​ ಸಿಂಗ್​ ಚಡ್ಢಾ’ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯದಲ್ಲೇ ಕಾರ್ಗಿಲ್​, ಲಡಾಖ್​ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈಗಾಗಲೇ, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಕಾರ್ಗಿಲ್​ ಭಾಗದ ಚಿತ್ರೀಕರಣ ಮುಗಿಸಿ, ಈ ವರ್ಷ ಚಿತ್ರ ಬಿಡುಗಡೆ ಮಾಡುವ ಯೋಚನೆಯಲ್ಲಿ ಚಿತ್ರತಂಡವಿದೆ.

    ಮದುವೆಗೆ ಇಟ್ಟಿದ್ದ ಹಣ ಸಹಾಯಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts