More

    ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವಕನ ಪುಂಡಾಟ

    ಹೊಳೆಹೊನ್ನೂರು: ಸರ್ಕಾರಿ ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುವ ವಿಚಾರದಲ್ಲಿ ಪ್ರಯಾಣಿಕ ಹಾಗೂ ಕಂಡಕ್ಟರ್ ಮಧ್ಯೆ ಮಾತಿಗೆ ಮಾತು ಬೆಳೆದು ಪ್ರಕರಣ ಠಾಣೆಯ ಮೆಟ್ಟಿಲೇರಿ ರಾಜಿ ಸಂಧಾನದಲ್ಲಿ ಅಂತ್ಯವಾಗಿದೆ.
    ಸೋಮವಾರ ಚಿತ್ರದುರ್ಗದಿಂದ ಶಿವಮೊಗ್ಗದ ಕಡೆ ಪ್ರಯಾಣಿಸುತ್ತಿದ ಸಾರಿಗೆ ಬಸ್‌ನಲ್ಲಿ ಚನ್ನಗಿರಿ ತಾಲೂಕಿನ ಮಾವಿನಕಟ್ಟೆಯಲ್ಲಿ ಪ್ರಯಾಣಿಕನೊಬ್ಬ ಬಸ್ ಹತ್ತಿದ್ದಾನೆ. ಕಂಡಕ್ಟರ್ ಬಸ್ ಟಿಕೆಟ್ ತೆಗೆದುಕೊಳ್ಳುವಂತೆ ತಿಳಿಸಿದರೂ ಯುವಕ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿ ವಾಗ್ವಾದ ನಡೆಸಿದ್ದಾನೆ. ಯುವಕನ ರಂಪಾಟ ಹೆಚ್ಚಾಗುತ್ತಿದಂತೆ ನಿರ್ವಾಹಕ ಬಸ್‌ನಲ್ಲಿದ್ದ ಯುವಕನೊಬ್ಬನಿಗೆ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಹೇಳಿದ್ದಾರೆ. ಕಂಡಕ್ಟರ್ ಹೇಳಿದಂತೆ ಯುವಕ ವಿಡಿಯೋ ಮಾಡಲು ಮುಂದಾಗಿದ್ದಾನೆ. ಟಿಕೆಟ್ ನಿರಾಕರಿಸಿದ ವ್ಯಕ್ತಿ ವಿಡಿಯೋ ಮಾಡದಂತೆ ಯುವಕನಿಗೆ ಹೇಳಿದ್ದಾನೆ. ಕಂಡಕ್ಟರ್ ಹೇಳಿದ್ದಾರೆ ನಾನು ವಿಡಿಯೋ ಮಾಡುತ್ತೇನೆಂದು ಹೇಳಿದ ಯುವಕ ವಿಡಿಯೋ ಮಾಡುವುದನ್ನು ಮುಂದುವರೆಸಿದ್ದಾನೆ. ಏಕಾಏಕಿ ವಿಡಿಯೋ ಮಾಡುತ್ತಿದ ಯುವಕನ ಮೇಲೆರಗಿದ ವ್ಯಕ್ತಿ ಮೊಬೈಲ್ ಕಿತ್ತುಕೊಂಡು ದಾಂಧಲೆ ನಡೆಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.
    ಅಷ್ಟಕ್ಕೆ ಸುಮ್ಮನಾಗದ ಆರೋಪಿ ತನ್ನೂರಿಗೆ -ೆÇÃನ್ ಮಾಡಿ ಒಂದಷ್ಟು ಸ್ನೇಹಿತರನ್ನು ಕರೆಸಿಕೊಂಡಿದ್ದಾನೆ. ಬೈಕ್‌ಗಳಲ್ಲಿ ಬಂದ ಯುವಕರು ಅರಹತೋಳಲು ಕೈಮರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ವಿಡಿಯೋ ಮಾಡುತ್ತಿದ್ದ ಯುವಕನನ್ನು ಥಳಿಸಿದ್ದಾರೆ. ಶಿವಮೊಗ್ಗದ ವರೆಗೆ ಎಲ್ಲಿಯೂ ಬಸ್ ನಿಲ್ಲಿಸದಂತೆ ತಾಕೀತು ಮಾಡಿ ಬಸ್‌ನಲ್ಲಿ ದಾಂಧಲೆ ನಡೆಸಿದ್ದಾರೆ. ಬಸ್‌ನಲ್ಲಿದ್ದ ಕೆಲವರು ಮೊಬೈಲ್‌ಗಳಲ್ಲಿ ವಿಡಿಯೋ ಮಾಡಲು ಮುಂದಾಗಿದ್ದಾರೆ. ವಿಡಿಯೋ ಮಾಡಲು ಮುಂದಾದ ಒಂದಿಬ್ಬರು ಯುವತಿಯರ ಮೊಬೈಲ್‌ಗಳನ್ನು ಕಸಿದುಕೊಂಡ ಯುವಕರ ಗುಂಪು ಬುದ್ಧಿ ಹೇಳಲು ಮುಂದಾದ ಸಹ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸೀನ್ ಕ್ರೀಯೆಟ್ ಮಾಡಿದ್ದಾರೆ. ಯುವಕರ ಕೈಯಿಂದ ಥಳಿಸಿಕೊಂಡ ಯುವಕ ದಾವಣಗೆರೆ ಮೂಲದ ಸಾರಿಗೆ ಬಸ್ ಸಿಬ್ಬಂದಿ ಎನ್ನಲಾಗುತ್ತಿದೆ.
    ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವಂತೆ ಕೂಗಾಡಿದ್ದಾರೆ. ಡ್ರೆÊವರ್ ಬಸ್‌ನ್ನು ನೇರವಾಗಿ ಹೊಳೆಹೊನ್ನೂರಿನ ಗಾಂಽ ವೃತ್ತದ ಮಾರ್ಗವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆ. ಬಸ್‌ನಲ್ಲಿ ಯುವಕರ ದಾಂಧಲೆಯಲ್ಲಿ ಒಂದು ಲಕ್ಷ ರೂ. ನಗದು ಹಾಗೂ ೨-೩ ಮೊಬೈಲ್‌ಗಳು ಕಳುವಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
    ಅಷ್ಟರಲ್ಲಾಗಲೆ ಪುಂಡಾಟ ನಡೆಸಿದ ಯುವಕರ ಮನೆಯವರಿಗೆ ವಿಷಯ ತಲುಪಿ ಪಾಲಕರು ಮುಖಂಡರೊAದಿಗೆ ಠಾಣೆಗೆ ದೌಡಾಯಿಸಿದ್ದಾರೆ. ಚನ್ನಗಿರಿ ಮೂಲದ ನಿವೃತ್ತ ಪೊಲೀಸ್ ಅಽಕಾರಿ ಸಮ್ಮುಖದಲ್ಲಿ ಯುವಕರು ಹಾಗೂ ಸಾರಿಗೆ ಸಿಬ್ಬಂದಿ ರಾಜಿ ಮಾಡಿಕೊಂಡು ಪೊಲೀಸರಿಗೆ ತಿಳಿಸಿ ಬಸ್‌ನ್ನು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕಳುವಾಗಿತ್ತು ಎನ್ನಲಾದ ಒಂದು ಲಕ್ಷ ರೂ. ಹಾಗೂ ಮೊಬೈಲ್‌ಗಳನ್ನು ಹಿಂದಿರುಗಿಸಿದರು ಎನ್ನಲಾಗುತ್ತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬಸ್‌ನಲ್ಲಿ ಶಿವಮೊಗ್ಗದ ಕಡೆ ಕಳಿಸಲಾಯಿತ್ತು. ಸಾರಿಗೆ ಬಸ್ ಮಧ್ಯಾಹ್ನದವರೆಗೂ ಗಾಂಽ ವೃತ್ತದಲ್ಲಿ ನಿಂತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts