More

    ಕುಪ್ಪೂರು ಶ್ರೀಗಳ ಸಾವಿನ ಪ್ರಕರಣ: ಡಾ.ವಿಜಯ ರಾಘವೇಂದ್ರ ವಿರುದ್ಧ ಎಫ್​ಐಆರ್​

    ತುಮಕೂರು: ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಹಾಗೂ ನಿಯಮ ಮೀರಿ ಚಿಕಿತ್ಸೆ ಕೊಟ್ಟ ಹಿನ್ನೆಲೆಯಲ್ಲಿ ಸಾವಿಗೆ ಸಾಯಿಗಂಗಾ ಖಾಸಗಿ ಆಸ್ಪತ್ರೆ ವೈದ್ಯ ಡಾ.ವಿಜಯ ರಾಘವೇಂದ್ರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    ಟಿಎಚ್​ಒ ಡಾ.ನವೀನ್ ಕೊಟ್ಟಿರುವ ದೂರಿನ ಹಿನ್ನೆಲೆ ಕರ್ನಾಟಕ ಎಪಿಡಮಿಕ್ ಆಕ್ಟ್ ಹಾಗೂ ಐಪಿಸಿ 304(ಎ) ಅಡಿ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಡಾ.ಯತೀಶ್ವರ ಶಿವಾಚಾರ್ಯ ಶ್ರೀಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದರೂ ಆರಂಭದಲ್ಲಿ ಚಿಕಿತ್ಸೆ ನೀಡಿದ್ದ ಸ್ಥಳೀಯ ವೈದ್ಯರು ಉದಾಸೀನತೆ ತೋರಿದ್ದರು. ಸ್ವಲ್ಪ ಎಚ್ಚೆತ್ತಿದ್ದರೂ ಶ್ರೀಗಳನ್ನು ಬದುಕಿಸಿಕೊಳ್ಳಬಹುದಿತ್ತು. ಸ್ಥಳೀಯ ವೈದ್ಯರ ನಿರ್ಲಕ್ಷ್ಯದಿಂದ ಶ್ರೀಗಳ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿತ್ತು ಎಂಬ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಸ್ವಾಮೀಜಿ ಅವರಲ್ಲಿ ಕರೊನಾ ರೋಗ ಲಕ್ಷಣಗಳನ್ನು ಗುರುತಿಸುವಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಸಾಯಿಗಂಗಾ ಖಾಸಗಿ ಆಸ್ಪತ್ರೆ ವೈದ್ಯ ವಿಜಯರಾಘವೇಂದ್ರ ವಿಫಲರಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಕಾರಣಕೇಳಿ ಜಿಲ್ಲಾ ಆರೋಗ್ಯ ಇಲಾಖೆ ಎರಡು ದಿನದ ಹಿಂದೆ ನೋಟಿಸ್ ಜಾರಿ ಮಾಡಿತ್ತು. ಇದೀಗ ಟಿಎಚ್​ಒ ಡಾ.ನವೀನ್ ಕೊಟ್ಟ ದೂರಿನ ಮೇರೆಗೆ ಬುಧವಾರ ಎಫ್​ಐಆರ್​ ದಾಖಲಾಗಿದೆ.

    ಸೆ.24ರಂದು ಜ್ವರದಿಂದ ಬಳಲುತಿದ್ದ ಡಾ.ಯತೀಶ್ವರ ಸ್ವಾಮೀಜಿ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಾಮೀಜಿ ಅವರಿಗೆ ಕರೊನಾ ಸೋಂಕು ಕೂಡ ದೃಢಪಟ್ಟಿತ್ತು, ಮಧುಮೇಹ ಸಮಸ್ಯೆಯೂ ಇತ್ತು. ಸೆ.25ರ ಬೆಳಗ್ಗೆ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಅಂದು ಬೆಳಗ್ಗೆ 11ಕ್ಕೆ ಆಂಬುಲೆನ್ಸ್​ನಲ್ಲಿ ಸಿದ್ಧಗಂಗಾ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ನೆಲಮಂಗಲ ಸಮೀಪ ಹೃದಯ ಸ್ತಂಭನವಾದ ಸ್ವಾಮೀಜಿ ಅವರನ್ನು ಹತ್ತಿರದ ಹರ್ಷ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಸ್ವಾಮೀಜಿ ಉಸಿರಾಟ ನಿಲ್ಲಿಸಿದ್ದರು.

    ಕುಪ್ಪೂರು ಮಠಕ್ಕೆ ಉತ್ತರಾಧಿಕಾರಿ ತೇಜಸ್​ ಆಯ್ಕೆ ಅಧಿಕೃತವಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟನೆ

    ಲಕ್ಷ್ಮೀ ಹೆಬ್ಬಾಳ್ಕರ್​ಗೆ ರಾತ್ರಿ ರಾಜಕೀಯ ಚೆನ್ನಾಗಿ ಗೊತ್ತು: ಬಿಜೆಪಿ ಮಾಜಿ ಶಾಸಕರ ವಿವಾದಾತ್ಮಕ ಹೇಳಿಕೆ

    ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ… ಮುಂದಾಗಿದ್ದು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts