More

    533 ಜನರಿಗೆ COVID19 ಕೊಟ್ಟವ ಒಬ್ಬನೇ- ಘಾನಾದ ಅಧ್ಯಕ್ಷರ ಕಳವಳ !

    ಅಕ್ರಾ: ಪಶ್ಚಿಮ ಆಫ್ರಿಕಾದ ರಿಪಬ್ಲಿಕ್ ಆಫ್ ಘಾನಾದಲ್ಲಿ ಒಬ್ಬನೇ ವ್ಯಕ್ತಿ 533 ಜನರಿಗೆ COVID19 ಸಂಪರ್ಕದಾರನಾಗಿ ಕಂಡುಬಂದಿದ್ದಾನೆ ಎಂದು ಘಾನಾದ ಅಧ್ಯಕ್ಷ ನಾನಾ ಅಕುಫೋ ಅಡ್ಡೋ ಕಳವಳ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ಸಾಕ್ಷ್ಯ: ಪಾತಕಿ ರವಿ ಪೂಜಾರಿ ಜತೆ ಸ್ನೇಹ ಆರೋಪ

    COVID19 ವೈರಸ್ ಸೋಂಕು ಹರಡಿದ ವ್ಯಕ್ತಿ ಕಾರ್ಮಿಕ. ಆತ ಘಾನಾದ ಟೆಮಾ ಎಂಬ ಬಂದರು ಪಟ್ಟಣದಲ್ಲಿ ಮೀನಿನ ಫ್ಯಾಕ್ಟರಿಯ ಕೆಲಸಗಾರ. ಕಳೆದ ತಿಂಗಳ ಆತನ ಸ್ವಾಬ್​ ಟೆಸ್ಟ್ ಮಾಡಿಸಿದ ಬಳಿಕ ಆತನಿಗೆ COVID19 ಸೋಂಕು ದೃಢಪಟ್ಟಿತ್ತು. ಹೀಗಾಗಿ ಅಲ್ಲಿನವರ ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 921 ಮಾದರಿಗಳ ಪರೀಕ್ಷೆ ಬಾಕಿ ಉಳಿದಿತ್ತು. ಅದರ ಫಲಿತಾಂಶವೂ ಬಂದಿದ್ದು, ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರಿಗೆ ಸೋಂಕು ತಗುಲಿದೆ ಎಂಬುದು ಖಾತ್ರಿಯಾಗಿದೆ ಎಂದು ಅಡ್ಡೋ ತಿಳಿಸಿದ್ದಾರೆ.

    ಇದನ್ನೂ ಓದಿ:  ಐಎಸ್​ಐಎಸ್ ಕಮಾಂಡರ್ ಜಿಯಾ ಉಲ್ ಹಕ್ ಸೇರಿ ಮೂವರು ಪ್ರಮುಖರು ಆಫ್ಘನ್​ನಲ್ಲಿ ಸೆರೆ

    ಫ್ಯಾಕ್ಟರಿಯಲ್ಲಿದ್ದ ಈ ಕಾರ್ಮಿಕನ ಸಂಪರ್ಕಕ್ಕೆ ಬಂದವರ ಪೈಕಿ 533 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರೆಲ್ಲರ ಸಂಪರ್ಕವೂ ಈತನೊಬ್ಬನೇ ಎಂಬುದು ಕಳವಳಕಾರಿ ವಿಚಾರ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಆದಾಗ್ಯೂ, ಟೆಸ್ಟಿಂಗ್​ ಮಾದರಿಯಲ್ಲಿ ಸುಧಾರಣೆ ತಂದಿರುವ ಕಾರಣ ಕೇಸ್​ಗಳ ಸಂಖ್ಯೆ ಹೆಚ್ಚಳವಾದಂತೆ ಕಾಣಬಹುದು. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದುವರೆಗೆ ಘಾನಾದಲ್ಲಿ 1.6 ಲಕ್ಷ ಟೆಸ್ಟ್​ಗಳನ್ನು ಮಾಡಿಸಲಾಗಿದೆ. ದೇಶಾದ್ಯಂತ ಒಟ್ಟು ಟೆಸ್ಟಿಂಗ್ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ ಎಂದು ಅಧ್ಯಕ್ಷ ಅಡ್ಡಾ ತಿಳಿಸಿದ್ದಾರೆ.

    ಇದನ್ನೂ ಓದಿ: VIDEO: “ಸಿಂಗಂ” ಸ್ಟಂಟ್​ ಪ್ರದರ್ಶಿಸಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯನ್ನೂ ಬಿಡಲಿಲ್ಲ ಕಾನೂನು!

    ಆದಾಗ್ಯೂ, ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಅನುಸರಿಸುವ ಮಾನದಂಡಗಳ ಕುರಿತು ಅವರು ಪ್ರತಿಕ್ರಿಯಿಸಲಿಲ್ಲ. ಇದುವರೆಗೂ ಘಾನಾದಲ್ಲಿ ಒಟ್ಟು 4,700 ಕೇಸ್​ಗಳು ಪತ್ತೆಯಾಗಿದ್ದು, ಈ ಪೈಕಿ 22 ಜನ ಮೃತಪಟ್ಟಿದ್ದಾರೆ. ಮಾರ್ಚ್​ ತಿಂಗಳಲ್ಲಿ ಈ ದೇಶದಲ್ಲಿ ಕರೊನಾ ವೈರಸ್ ತನ್ನ ಇರುವಿಕೆಯನ್ನು ಮೊದಲ ಬಾರಿಗೆ ತೋರಿಸಿತ್ತು. (ಏಜೆನ್ಸೀಸ್​)

    ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್​ಗಳಿಂದ ಕನ್ನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts