More

    ಪ್ರಿಯಕರನಿಗೆ ವಿಡಿಯೋ ವಾಟ್ಸ್​ಆ್ಯಪ್​ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ

    ಮೈಸೂರು: ಮಹಿಳೆಯೊಬ್ಬಳು ವಿಷ ಸೇವನೆಯ ವಿಡಿಯೋ ಮಾಡಿ ಅದನ್ನು ಪ್ರಿಯಕರನಿಗೆ ವಾಟ್ಸ್​ಆ್ಯಪ್​ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಟಿ.ಕೆ.ಲೇಔಟ್ ನಿವಾಸಿ ಶೀಲಾ(38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಶೀಲಾ ಕೆಲ ಕೆಲ ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಎರಡು ವಾಟ್ಸ್​ಆ್ಯಪ್​ ವಿಡಿಯೋ ವೈರಲ್​ ಆಗಿವೆ. ಒಂದು ವಿಡಿಯೋದಲ್ಲಿ ವಿಷ ಕುಡಿಯುತ್ತಿರುವುದು ಹಾಗೂ ಮತ್ತೊಂದು ವಿಡಿಯೋದಲ್ಲಿ ತನ್ನ ಮನದಾಳದ ನೋವನ್ನು ಶೀಲಾ ಹೊರಹಾಕಿದ್ದಾರೆ. ಇದನ್ನೂ ಓದಿ: ಪೈನಾಪಲ್​ನಿಂದಲೇ ಉಳಿಯಿತು ಗಂಭೀರವಾಗಿ ಗಾಯಗೊಂಡಿದ್ದ ಆನೆಯ ಜೀವ…!

    ವಿಡಿಯೋದಲ್ಲಿ ಏನಿದೆ?: ನಾನು ನಿನಗೆ ಮೋಸ ಮಾಡಿಲ್ಲ, ಮಾಡೋದು ಇಲ್ಲ. ನೀ ಮಸೇಜ್​ ಬ್ಲಾಕ್​ ಮಾಡಿದ ಮೇಲೆ ನೀನು ಮಾಡಿದ್ದ ಹಳೇಯ ಮಸೇಜ್​ಗಳನ್ನು ನೋಡುತ್ತಾ ಅಳುತ್ತಾ ಮಲಗಿದ್ದೆ. ನಾನು ಬೇರೊಬ್ಬನ ಜತೆಯಲ್ಲಿ ಚಾಟ್​ ಆಗಲಿ, ಬೇರೆ ಏನೇ ಆಗಲಿ ಮಾಡುತ್ತಿರಲಿಲ್ಲ. ಆದರೆ, ಈಗ ನೀನು ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದೀಯ. ನಂಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಂಗೇ ನೀನೆ ಸರ್ವಸ್ವ, ನೀನೆ ಎಲ್ಲ ಅಂದುಕೊಂಡಿದ್ದೆ. ಈಗ ನೀನು ನನಗೆ ಮೋಸ ಮಾಡುತ್ತಿರುವೇ ಹೊರತು ನಾನಲ್ಲ. ಇವತ್ತಿಗೆ ನನ್ನ-ನಿನ್ನ ಋಣ ಮುಗಿದು ಹೋಯಿತು. ಈ ಭೂಮಿ ಋಣನು ತೀರಿತು. ಕೆಟ್ಟ ಮಾತುಗಳು ಕೇಳಿ..ಕೇಳಿ ಸಾಕಾಗಿದೆ. ಬೇರೆ ಯಾರೇ ಅಂದಿದ್ದರು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ. ಮನಸಾರೆ ಗಂಡ ಅಂದುಕೊಂಡಿದ್ದ ನೀನೆ ಚುಚ್ಚಿ ಚುಚ್ಚಿ ಮಾತಾಡಿದ ಮೇಲೆ ಬದುಕಿದ್ದು ಏನು ಪ್ರಯೋಜನಾ? ನಿನ್ನ ಸ್ವಾರ್ಥಕ್ಕೆ, ನಿನ್ನ ಚುಚ್ಚು ಮಾತಿಗೆ ನನ್ನ ಎರಡು ಮಕ್ಕಳನ್ನು ಅನಾಥ ಮಾಡಿಬಿಟ್ಟೆ ಎನ್ನುತ್ತಾ ಅಳುತ್ತಲೇ ಮಾತು ಮುಗಿಸಿದ್ದಾಳೆ. ಮತ್ತೊಂದು ವಿಡಿಯೋದಲ್ಲಿ ವಿಷ ಕುಡಿಯುತ್ತಿರುವ ದೃಶ್ಯವಿದೆ.

    ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ

    ಆರೋಪಿ ಬಂಧನ
    ಆರೋಪಿ ವೆಂಕಟೇಶ್ ಎಂಬಾತನನ್ನು ಸದ್ಯ ಬಂಧಿಸಲಾಗಿದೆ. ವೆಂಕಟೇಶ್ ಹಾಗೂ ಶೀಲಾ ನಡುವೆ ವರ್ಷಗಳಿಂದ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇಬ್ಬರೂ ಸೇರಿ ಫರ್ನೀಚರ್ ಅಂಗಡಿ ತೆರೆದಿದ್ದರಂತೆ. ಹಣದ ವಿಚಾರಕ್ಕೆ ಇತ್ತೀಚೆಗೆ ಮನೆ ಬಾಗಿಲಿಗೆ ಬಂದು ವೆಂಕಟೇಶ್​ ಗಲಾಟೆ ಮಾಡಿದ್ದನಂತೆ. ಮನನೊಂದ ಶೀಲಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂ ಮುನ್ನ ವೆಂಕಟೇಶ್ ಜತೆ ವಾಟ್ಸ್​ಆ್ಯಪ್​ನಲ್ಲಿ ಚಾಟ್​ ಸಹ ಮಾಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವ ವಿಡಿಯೋ, ಫೋಟೋಗಳನ್ನು ಪ್ರಿಯಕರನಿಗೆ ಕಳುಹಿಸಿದ್ದಳು. ಈ ಸಂಬಂಧ ಸರಸ್ವತಿಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts