More

    ಆಗಸದಲ್ಲೇ ಮಗುವನ್ನು ಹೆತ್ತ ತಾಯಿ: ಕೊಲ್ಕತ್ತದಲ್ಲಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ಕೊಲ್ಕತ್ತ: ತುಂಬು ಗರ್ಭಿಣಿಯೊಬ್ಬಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿಯೇ ಹೆರಿಗೆಯಾಗಿರುವ ಘಟನೆ ಕೊಲ್ಕತ್ತ ಬಳಿ ನಡೆದಿದೆ. ವಿಮಾನವು ಇಂದು ಮುಂಜಾನೆ ಕೊಲ್ಕತ್ತದಲ್ಲಿ ತುರ್ತು ಭೂಸ್ಪರ್ಶ ಮಾಡಿರುವುದಾಗಿ ಮಾಹಿತಿ ಲಭಿಸಿದೆ.

    ದೋಹಾದಿಂದ ಬ್ಯಾಂಕಾಕ್​ಗೆ ತೆರಳುತ್ತಿದ್ದ ವಿಮಾನದಲ್ಲಿ ಥಾಯ್ಲೆಂಡ್​ನ 23 ವರ್ಷದ ಗರ್ಭಿಣಿ ಮಹಿಳೆ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯದಲ್ಲಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಮಾನದ ಸಿಬ್ಬಂದಿಗಳ ಸಹಾಯದಿಂದಾಗಿ ವಿಮಾನದಲ್ಲಿಯೇ ಹೆರಿಗೆಯಾಗಿದೆ. ಇಂದು ಮುಂಜಾನೆ 3 ಗಂಟೆಯ ಸಮಯಕ್ಕೆ ಕೊಲ್ಕತ್ತದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಲಾಗಿದ್ದು, ತಾಯಿ ಮತ್ತು ಮಗುವನ್ನು ಕೊಲ್ಕತ್ತದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

    “ದೋಹಾದಿಂದ ಬ್ಯಾಂಕಾಕ್​ಗೆ ಹೊರಟಿದ್ದ ಕ್ಯೂಆರ್​-830 ವಿಮಾನವು ಇಂದು ಮುಂಜಾನೆ 3.09ರ ಸಮಯಕ್ಕೆ ಕೊಲ್ಕತ್ತ ವಿಮಾನ ನಿಲ್ದಾಣದ ವೈದ್ಯಕೀಯ ಆದ್ಯತೆಯ ಲ್ಯಾಂಡಿಂಗ್​ನಲ್ಲಿ ಇಳಿದಿದೆ. ವೈದ್ಯಕೀಯ ಆದ್ಯತೆಯ ಲ್ಯಾಂಡಿಂಗ್​ಗಾಗಿ ಪೈಲೆಟ್​ ಎಸ್​ಒಎಸ್​ ಅನ್ನು ಕೇಳಿದ್ದರು. ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ. ಸದ್ಯ ತಾಯಿ ಮತ್ತು ಮಗುವಿಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಬ್ಬರು ಸುರಕ್ಷಿತವಾಗಿದ್ದಾರೆ.” ಎಂದು ಕೊಲ್ಕತ್ತದ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts