More

    ರಾಜ್ಯದಲ್ಲಿ ರಂಗೇರಿದೆ ಚುನಾವಣಾ ಅಖಾಡ: ಒಂದು ಮತಕ್ಕೆ 1 ಲಕ್ಷ ರೂಪಾಯಿ!

    ಬೆಂಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್​ ಚುನಾವಣೆ ರಂಗೇರಿದ್ದು, ಶತಾಯಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಜಿದ್ದಾಜಿದ್ದಿಗೆ ಬಿದ್ದಂತೆ ಮತಕ್ಕೂ ಬೆಲೆ ನಿಗದಿ ಮಾಡುತ್ತಿದ್ದು, ಮತಗಳ ಬೆಲೆ ಗಗನಮುಖಿಯಾಗಿದೆ.

    ಒಂದೊಂದು ಕ್ಷೇತ್ರದ ಬೇಡಿಕೆ ಒಂದೊಂದು ರೀತಿಯಲ್ಲಿವೆ. ಪ್ರತಿ ಮತಕ್ಕೆ 10 ಸಾವಿರ ರೂ.ನಿಂದ ಹಿಡಿದು 1 ಲಕ್ಷ ರೂ.ಗಳ ತನಕ ಆಮಿಷ ಒಡ್ಡಿರುವ ಪ್ರಕರಣಗಳು ಚುನಾವಣಾ ಅಖಾಡದಲ್ಲಿ ಕೇಳಿ ಬರುತ್ತಿವೆ.
    ಚುನಾವಣೆ ಖರ್ಚಿಗೆಂದು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಔದಾರ್ಯದಿಂದ ನೀಡುತ್ತಿದ್ದ ಹಣ ದುಬಾರಿಯಾಗುತ್ತಾ ಬಂದು, ಈಗ ಡಿಮಾಂಡ್​ ರೂಪ ಪಡೆದುಕೊಂಡಿದೆ. ಇಂತಿಷ್ಟು ಕೊಡಲೇಬೇಕು ಎಂದು ಪಟ್ಟು ಹಿಡಿದು ಕೇಳುವ ಮತದಾರರು ಒಂದು ಕಡೆಯಾದರೆ, ನಮಗೆ ಮತ ಹಾಕಿ ಎಂದು ಆಮಿಷ ಒಡ್ಡಿ ಮತ ಸೆಳೆಯುವ ಅಭ್ಯರ್ಥಿಗಳು ಮತ್ತೊಂದೆಡೆ.

    ಒಟ್ಟಿನಲ್ಲಿ ಇಡೀ ಚುನಾವಣೆ ಹಣದ ಥೈಲಿಯಲ್ಲಿ ಮಿಂದೇಳುತ್ತಿದೆ. ಒಂದು ಮತಕ್ಕೆ ಅತಿ ಹೆಚ್ಚು ಬೆಲೆ ಕಟ್ಟಿರುವುದು ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಒಬ್ಬೊಬ್ಬರಿಗೆ ಒಂದೊಂದು ಲಕ್ಷ ನೀಡಿ ಮತ ಸೆಳೆಯುತ್ತಿದ್ದಾರೆ ಎನ್ನುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

    ಅಪ್ಪು ಸರ್ ‘ಗಂಧದ ಗುಡಿ’ ಟೀಸರ್ ನೋಡಿ, ಅದನ್ನು ತೆಗೆದು ಬಿಡಿ ಅಂದ್ರು: ಮಹತ್ವದ ವಿಚಾರ ಹಂಚಿಕೊಂಡ ನಿರ್ದೇಶಕ

    ಎಸ್​ಐ ಹರೀಶ್​ನ ಕರ್ಮಕಾಂಡ ಬಿಚ್ಚಿಟ್ಟ ಮುಖ್ಯಪೇದೆ: ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಸಬ್​ಇನ್​ಸ್ಪೆಕ್ಟರ್​

    ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ

    ಕಾವೇರಿ ನದಿಗೆ ಹಾರಿ ಪ್ರಾಣಬಿಟ್ಟ ಭಗ್ನಪ್ರೇಮಿಗಳು! ಮಗಳು ಸತ್ತ ನೋವಿನಲ್ಲಿದ್ದ ಪಾಲಕರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts