More

    VIDEO| ಶ್ವೇತ ಭವನದಲ್ಲಿ ಭಾರತದ ಪತ್ರಕರ್ತನಿಗೆ ಅವಮಾನಿಸಿದ ನ್ಯೂಯಾರ್ಕ್​ ಪತ್ರಕರ್ತೆ: ವೈರಲ್​ ಆಯ್ತು ವಿಡಿಯೋ

    ವಾಷಿಂಗ್ಟನ್​: ಅಮೆರಿಕದ ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಭಾರತೀಯ ಪತ್ರಕರ್ತನೊಬ್ಬ ಪ್ರಶ್ನೆ ಕೇಳುತ್ತಿದ್ದಾಗ ಆತನ ಬಗ್ಗೆ ನ್ಯೂಯಾರ್ಕ್​ನ ಪತ್ರಕರ್ತೆಯೊಬ್ಬಳು ಅವಮಾನೀಯವಾಗಿ ನಡೆದುಕೊಂಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

    ಫೆ.26ರಂದು ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ದೇಶದಲ್ಲಿನ ಕೊರೊನಾ ವೈರಸ್​ ಸ್ಥಿತಿಗತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಆ ಸಮಯದಲ್ಲಿ ಶ್ವೇತಭವನದ ಭಾರತೀಯ ಪತ್ರಕರ್ತರೊಬ್ಬರು ಇಂಡೋ-ಯುಎಸ್​ ಸಂಬಂಧದ ಬಗ್ಗೆ ಟ್ರಂಪ್​ಗೆ ಪ್ರಶ್ನೆಯನ್ನು ಕೇಳುತ್ತಿದ್ದರು. ಅದನ್ನು ಕಂಡ ನ್ಯೂಯಾರ್ಕ್​ ಮೂಲದ ಪತ್ರಕರ್ತೆ ತನ್ನ ಪಕ್ಕಕ್ಕೆ ಕುಳಿತ ಪತ್ರಕರ್ತನೊಡನೆ ಯಾರು ಈತ ಎಂದು ಕೇಳಿಕೊಂಡು ಅವಮಾನೀಯವಾಗಿ ನಕ್ಕಿದ್ದಾಳೆ.

    ನಿನ್ನೆ(ಫೆ.27) ಟ್ವಿಟ್ಟರ್​ನಲ್ಲಿ ಈ ವಿಡಿಯೋ ಹರಿದಾಡಲಾರಂಭಿಸಿದ್ದು ಸಕತ್​ ವೈರಲ್​ ಆಗಿದೆ. ಅವಮಾನಿಸಿದ ಪತ್ರಕರ್ತೆಯನ್ನು ನ್ಯೂಯಾರ್ಕ್​ನ ಎಬೊನಿ ಬೌಡೆನ್​ ಎಂದು ಗುರುತಿಸಲಾಗಿದೆ. ಜನಾಂಗೀಯ ನಿಂದನೆ ಮಾಡುತ್ತಿದ್ದಾಳೆ ಎಂದು ಆಕೆಯ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts