ಬೆಂಗಳೂರು: ರಾಜ್ಯದಲ್ಲಿ ಮತ್ತೆ ತರಕಾರಿ ಬೆಲೆ ಗಗನಕ್ಕೇರಿದ್ದು, ಟೊಮ್ಯಾಟೊ ಬೆಲೆ 100ರ ಗಡಿ ದಾಟಿದೆ.
ಇತ್ತೀಚಿಗೆ 100ರ ಗಡಿದಾಟಿದ್ದ ಟೊಮ್ಯಾಟೊ ದರ ಕಳೆದ ವಾರ ಇಳಿದಿತ್ತು. ವಾರದ ಹಿಂದೆ 50- 60 ರೂಪಾಯಿ ಇದ್ದ ಬೆಲೆ ಇದೀಗ ದುಪ್ಪಟ್ಟಾಗಿದೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮ್ಯಾಟೊ ಬೆಲೆ 120 ರೂಪಾಯಿ ಇದೆ. ಬೆಂಗಳೂರಿನ ಹಾಪ್ಕಾಮ್ಸ್ನಲ್ಲಿಯೇ ಈ ಬೆಲೆ ಇದೆ. ಇನ್ನು ಚಿಲ್ಲರೆ ಅಂಗಡಿಗಳಲ್ಲಿ ಇದರ ಬೆಲೆ ಮತ್ತಷ್ಟು ಹೆಚ್ಚಿದೆ. ಟೊಮ್ಯಾಟೊ ಮಾತ್ರವಲ್ಲ, ಒಟ್ಟಾರೆ ಎಲ್ಲ ತರಕಾರಿ ಬೆಲೆಯೂ ಗ್ರಾಹಕರ ಕೈಸುಡುತ್ತಿದೆ.
ಬೆಂಗಳೂರಲ್ಲಿ ತರಕಾರಿ ದರ
ಕ್ಯಾಪ್ಸಿಕಂ- 120 ರೂ.
ಬೀನ್ಸ್- 99 ರೂಪಾಯಿ
ಬಿಳಿ ಬದನೆಕಾಯಿ- 114 ರೂಪಾಯಿ
ತೊಂಡೆಕಾಯಿ- 170 ರೂಪಾಯಿ
ನವಿಲುಕೋಸು- 84 ರೂಪಾಯಿ
ಮೂಲಂಗಿ- 84 ರೂಪಾಯಿ
ಬೀಟ್ರೋಟ್-64 ರೂಪಾಯಿ
ಟೊಮ್ಯಾಟೊ-120 ರೂಪಾಯಿ
ಧಾರಾಕಾರ ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿದ್ದು, ಆಹಾರ ಉತ್ಪಾದನೆಕ್ಕೆ ಭಾರೀ ಪೆಟ್ಟು ಕೊಟ್ಟಿದೆ. ಫಸಲು ಗಿಡದಲ್ಲೇ ಕೊಳೆಯುತ್ತಿದೆ. ಇಳುವರಿ ಕಡಿಮೆಯಾಗಿದ್ದು, ಸಹಜವಾಗಿ ಬೆಲೆ ಏರಿಕೆ ಆಗುತ್ತಿದೆ. ಚಿಲ್ಲರೆ ಅಂಗಡಿಗಳಲ್ಲಿ ತರಕಾರಿ ಬೆಲೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿದೆ.
ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ