More

    ಯೋಗಿ ಆದಿತ್ಯನಾಥಗೆ ಪಟ್ಟಾಭಿಷೇಕ: ಜನಸಾಗರದ ನಡುವೆ ಪ್ರಮಾಣವಚನ ಸ್ವೀಕಾರ, ಮತ್ತೆ ಯೋಗಿ ಪರ್ವ ಶುರು

    ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ನಿರಂತರವಾಗಿ ಯಾರೊಬ್ಬರೂ 2 ಬಾರಿ ಸಿಎಂ ಆಗಿರಲಿಲ್ಲ. ಆದರೆ, ಯೋಗಿ ಅವರು ಸತತ 2ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದಾಖಲೆ ಬರೆದರು. ಈಶ್ವರ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ನೆರೆದಿದ್ದವರಿಂದ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

    ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಲಖನೌನ ಇಕಾನದಲ್ಲಿ ಆಯೋಜನೆಗೊಂಡ ಸಮಾರಂಭದಲ್ಲಿ 60 ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಶುಕ್ರವಾರ ಸಂಜೆ 4ರ ನಂತರ ಗೋಧೂಳಿ ಮುಹೂರ್ತದಲ್ಲಿ ಯೋಗಿ ಪಟ್ಟಾಭಿಷೇಕ ಅದ್ದೂರಿಯಾಗಿ ನೆರವೇರಿತು.

    ಯೋಗಿ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ರಾಜ್​ನಾಥ್​ ಸಿಂಗ್​, ಬಿಜೆಪಿ ಆಡಳಿತ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ಸಂತ ಸಮಾಜದ ಪ್ರಮುಖರು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸ್ಟೇಡಿಯಂನಲ್ಲಿ ಜನರು ಕಿಕ್ಕಿರಿದು ಸೇರಿದ್ದಾರೆ. ಇಬ್ಬರು ಡಿಸಿಎಂಗಳು, 52 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಪೈಕಿ ಐವರು ಮಹಿಳೆಯರಿಗೆ ಮಂತ್ರಿಗಿರಿ ಒಲಿದಿದೆ.

    ಕುಡಿದು ಸಿಟ್ಟಿನಿಂದ ಸಿಎಂಗೆ ಬೈದಿದ್ದೀನಿ… ದಯವಿಟ್ಟು ಕ್ಷಮಿಸಿ: ಶಾಬಾಜ್​ ಉಲ್ಲಾಖಾನ್​

    ಮುಂದಿನ ಚುನಾವಣೆಯೇ ನನಗೆ ಕೊನೇ… ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ: ಸಿದ್ದರಾಮಯ್ಯ

    ನಾನು ಸತ್ತ ನಂತ್ರ ಬೇರೆ ಮದ್ವೆ ಆಗಿ ಆಕೆಗೂ ಕಾಟ ಕೊಡ್ಬೇಡ… ಡೆತ್​ನೋಟ್ ಬರೆದು ಬೆಂಗ್ಳೂರಲ್ಲಿ ಪತ್ರಕರ್ತೆ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts