More

    ಶೀಘ್ರವೇ ರಾಜ್ಯದಲ್ಲಿ ‘ಉದ್ಯೋಗ ನೀತಿ’ ಜಾರಿ: ಸಿಎಂ ಘೋಷಣೆ

    ಬೆಳಗಾವಿ: ರಾಜ್ಯದಲ್ಲಿ ಶೀಘ್ರವೇ ಅತ್ಯಂತ ರಚನಾತ್ಮಕ ‘ಉದ್ಯೋಗ ನೀತಿ’ ಜಾರಿಗೆ ತರಲಾಗುವುದು. ಉದ್ಯೋಗ ಸೃಷ್ಟಿಗೆ ಒತ್ತು ನೀಡಿ, ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

    ಗೋಗಟೆ ಇಂಜಿನಿಯರಿಂಗ್​ ಮಹಾವಿದ್ಯಾಲಯ ಆವರಣದಲ್ಲಿ ಕೌಶಲಾಭಿವೃದ್ಧಿ ನಿಗಮವು ಗುರುವಾರ ಹಮ್ಮಿಕೊಂಡಿದ್ದ ‘ಸರ್ವರಿಗೂ ಉದ್ಯೋಗ’ ಕಾರ್ಯಕ್ರಮ ಲೋಕಾರ್ಪಣೆ ಮತ್ತು ‘ಬೃಹತ್​ ಉದ್ಯೋಗ ಮೇಳ’ ಉದ್ಘಾಟಿಸಿ ಸಿಎಂ ಮಾತನಾಡಿದರು.

    ಐಟಿ, ಬಿಟಿ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್​. ಅಶ್ವತ್ಥನಾರಾಯಣ ಮಾತನಾಡಿ, ಪ್ರತಿ ವಿದ್ಯಾವಂತರಿಗೂ ಅವರ ಆಸಕ್ತಿಗನುಸಾರ ಉದ್ಯೋಗಗಳೇ ದೊರಕುವಂತಾಗಬೇಕು ಎನ್ನುವುದು ಸರ್ಕಾರದ ಸಂಕಲ್ಪ. ಈ ಮಹತ್ವಾಕ್ಷಾಂಕ್ಷಿಯಿಂದಲೇ ‘ಸಕಲರಿಗೂ ಉದ್ಯೋಗ’ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

    ಬೆಳಗಾವಿಯಲ್ಲಿ ಈಗಾಗಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕೇಂದ್ರ ಕಚೇರಿ ಇದೆ. ರಾಜ್ಯದ ಒಟ್ಟು 6 ವಿವಿಗಳನ್ನು ಯೂನಿವರ್ಸಿಟಿ ಆಫ್​ ಎಮಿನೆನ್ಸ್​ ಮಟ್ಟಕ್ಕೆ ಮತ್ತು 7 ಸರ್ಕಾರಿ ಇಂಜಿನಿಯರಿಂಗ್​ ಕಾಲೇಜ್​ಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ವಿಟಿಯು ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ಕೇವಲ ಒಂದೇ ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ತಿಳಿಸಿದರು.

    ಉದ್ಯೋಗ ಮೇಳದಲ್ಲಿ ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲೆಗಳ 5 ಸಾವಿರಕ್ಕೂ ಹೆಚ್ಚು ಬಿಇ, ಡಿಪ್ಲೊಮಾ ಮತ್ತು ಐಟಿಐ ಪದವೀಧರರು ಪಾಲ್ಗೊಂಡಿದ್ದರು.

    57 ಕಂಪನಿಗಳು ನೇರವಾಗಿ ಪಾಲ್ಗೊಂಡಿದ್ದವು. ಟಾಟಾ ಕಮ್ಯುನಿಕೇಶನ್ಸ್​, ಹಿಮಾಲಯ ವೆಲ್​ನೆಸ್​ ಕಂಪನಿ, ಎಲ್​.ಡಿ.ಸ್ಕವೇರ್​ ಇಂಡಿಯಾ, 3ಡಿಎಂ ಏಜನ್ಸಿ, ಎನರ್ಕಾ ಇಂಡಿಯಾ, ಯುನೈಟೆಡ್​ ಟೆಲಿಕಾಂ, ಎಚ್​ಪಿ., ಓಲಾ, ಎಚ್​ಸಿಎಲ್​, ವಿಪ್ರೋ, ಬೈಜೂಸ್​, ನಾರಾಯಣ ಗ್ರೂಪ್​, ಟಾಟಾ ಬಿಜಿನೆಸ್​ ಹಬ್​ ಲಿ., ಟೊಯೊಟಾ ಹಾಗೂ ಗೆಸ್​ ಕಾಪ್ರೋರೇಶನ್​ ಲಿಮಿಟೆಡ್​ ಸೇರಿದಂತೆ ಅನೇಕ ಹೆಸರಾಂತ ಕಂಪನಿಗಳು ಪಾಲ್ಗೊಂಡಿದ್ದವು. 14 ಕಂಪನಿಗಳು ವರ್ಚುಯಲ್​ ಆಗಿ ಪಾಲ್ಗೊಂಡಿದ್ದವು.

    25 ಸಾವಿರ ಉದ್ಯೋಗ:31 ಸಾವಿರ ನಿರುದ್ಯೋಗಿಗಳಿಗೆ ಡಿಜಟಲ್​ ಸ್ಕಿಲ್​ ಟ್ರೇನಿಂಗ್​ ನೀಡುವ ಒಡಂಬಡಿಕೆಯನ್ನು ಸರ್ಕಾರದೊಂದಿಗೆ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ನಂದಿ ಫೌಂಡೇಶನ್​ ಮಾಡಿಕೊಂಡಿತು. ಜತೆಗೆ ಕ್ವೆಸ್​ ಕಾರ್ಪ್​ ಲಿಮಿಟೆಡ್​ ಸಂಸ್ಥೆಯು 25 ಸಾವಿರ ಅಭ್ಯರ್ಥಿಗಳಿಗೆ ಇದೇ ವರ್ಷದಲ್ಲಿ ಉದ್ಯೋಗ ನೀಡುವ ಒಡಂಬಡಿಕೆ ಮಾಡಿಕೊಂಡಿತು.

    29 ವರ್ಷದ ಬಳಿಕ ಕಪ್ಪುಕೋಟ್​ ಧರಿಸಿ ವಾದ ಮಂಡಿಸಿದ ಎಸ್ಪಿಎಂ! ಕಿಕ್ಕಿರಿದು ತುಂಬಿದ್ದ ಕೋರ್ಟ್​ ಹಾಲ್​

    ನಂಜನಗೂಡಲ್ಲಿ ಅಪ್ರಾಪ್ತನ ಜತೆ 3 ಮಕ್ಕಳ ತಾಯಿ ಲವ್ವಿಡವ್ವಿ! ಇವಳ ಆಸೆ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts