More

    ನಿಜವಾದ ಬೊಂಬೆ ಭವಿಷ್ಯ

    ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಯ ಹನುಮನಕೊಪ್ಪ ಗ್ರಾಮದ ತುಪ್ಪರಿಹಳ್ಳದ ದಂಡೆಯ ಮೇಲೆ ಯುಗಾದಿ ಅಮಾವಾಸ್ಯೆ ದಿನ ಗ್ರಾಮಸ್ಥರು ನಿರ್ಮಿಸಿದ್ದ ಯುಗಾದಿ ಫಲದ ಬೊಂಬೆ ಭವಿಷ್ಯ ನಿಜವಾಗಿದೆ.


    ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಜತೆಗೆ ಮಹತ್ವದ ಬದಲಾವಣೆಯಾಗಲಿದೆ ಎಂದು ನುಡಿದಿದ್ದ ಭವಿಷ್ಯ ನಿಜವಾಗಿದೆ.


    ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿಯಂದು ಗ್ರಾಮದ ಪಕ್ಕದ ತುಪ್ಪರಿ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಸ್ಥಳದಲ್ಲಿ ಮಣ್ಣಿನಲ್ಲಿ ಚೌಕಾಕಾರದ ಆಕೃತಿ ಮಾಡಿ, ಅದರ ಮೇಲೆ ನಾಲ್ಕೂ ದಿಕ್ಕಿಗೆ ರಾಜಕಾರಣಿಗಳ ಬೊಂಬೆಗಳನ್ನು ಮಾಡುತ್ತಾರೆ. (ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಿಗಳು) ಮಧ್ಯದಲ್ಲಿ ಶಿವ, ಪಾರ್ವತಿ, ಗಣಪತಿ, ಎತ್ತು, ರೈತರು, ಸೈನಿಕರ ಮಣ್ಣಿನ ಆಕೃತಿ ಮಾಡಿ ಅವುಗಳ ಮುಂದೆ ವರ್ಷದ ಮಳೆ ಮತ್ತು ಬೆಳೆಗಳನ್ನು ತಿಳಿಸಲು ಎಕ್ಕಿ ಎಲೆಗಳಲ್ಲಿ ಎಲ್ಲ ಬಗೆಯ ಕಾಳುಗಳನ್ನು ಮುಚ್ಚಿಡುತ್ತಾರೆ.

    ಮಾರನೆ ದಿನ ಯುಗಾದಿ ಪಾಡ್ಯಮಿಯ ಸೂರ್ಯೋದಯಕ್ಕಿಂತ ಮೊದಲು ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯಲ್ಲಿ ಮಾಡಿಟ್ಟಿದ್ದ ಮಣ್ಣಿನ ಬೊಂಬೆಗಳಿಗೆ ಪೆಟ್ಟಾಗಿದ್ದರೆ, ಅದರ ಮೇಲೆ ಭವಿಷ್ಯವನ್ನು ಇವರು ನಿರ್ಧರಿಸುತ್ತಾರೆ.

    ಪ್ರಸಕ್ತ ವರ್ಷ ಕರ್ನಾಟಕ ದಿಕ್ಕಿನ ರಾಜಕೀಯ ಬೊಂಬೆಯ ಬಲ ತೊಡೆಯ ಭಾಗಕ್ಕೆ ಪೆಟ್ಟಾಗಿತ್ತು. ಹೀಗಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬಹುದು ಎಂದು ಊಹಿಸಲಾಗಿತ್ತು. ಅದರಂತೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವ ಜತೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಮೇ 13ರಂದು ರಾಜೀನಾಮೆ ಕೂಡ ಸಲ್ಲಿಸಿದ್ದಾರೆ. ಹೀಗಾಗಿ ಈ ವರ್ಷದ ಯುಗಾದಿಯ ಭವಿಷ್ಯ ನಿಜವಾಗಿದೆ.

    ನಿಜವಾದ ಬೊಂಬೆ ಭವಿಷ್ಯ

    ಯಡಿಯೂರಪ್ಪನವರು ಸಿಎಂ ಆಗಿದ್ದ ಸಂದರ್ಭದಲ್ಲಿ ನಮ್ಮ ರಾಜ್ಯದ ರಾಜಕಾರಣಿಯ ನಾಯಕತ್ವ ಬದಲಾಗುತ್ತದೆ ಎಂದು ಈ ಬೊಂಬೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಯಡಿಯೂರಪ್ಪನವರು ಕೆಳಗಿಳಿದ ಪ್ರಸಂಗ ಎಲ್ಲರಿಗೂ ಗೊತ್ತೇ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts