More

    ವೀರರಿಗೆ ಗೌರವ ನಮನ : ಗ್ರಾಪಂಗೆ ಒಂದು ಶಿಲಾಫಲಕ

    ಬೆಂಗಳೂರು: ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರರಿಗೆ ಗೌರವ ಸಲ್ಲಿಸಲು ಗ್ರಾಮ ಪಂಚಾಯಿತಿಗೆ ಒಂದು ಶಿಲಾಫಲಕ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶಿಲಾಫಲಕಂ ಯೋಜನೆಯಡಿ ಈ ಲಕ ಅಳವಿಡಸಲಾಗುತ್ತದೆ.

    ನಮ್ಮ ನೆಲ, ನಮ್ಮ ದೇಶ ಎಂಬ ಪ್ರಚಾರ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದ್ದು, ಇದರ ಅಂಗವಾಗಿ ಸರ್ವೋಚ್ಚ ತ್ಯಾಗ ಮಾಡಿದ ಎಲ್ಲ ಧೈರ್ಯಶಾಲಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಭಾಗವಾಗಿ ಈ ಕಾಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೋಲಿಸ್ ಪಡೆಗಳ ಅಧಿಕಾರಿಗಳು/ಸಿಬ್ಬಂದಿ/ರಾಜ್ಯ ಪೋಲಿಸರು ಸೇರಿದಂತೆ ಕರ್ತವ್ಯದ ಸಾಲಿನಲ್ಲಿ ಪ್ರಾಣ ತ್ಯಾಗ ಮಾಡಿದ ವೀರರ ಹಸರನ್ನ ಶಿಲಾಫಲಕದಲ್ಲಿ ಬರೆದು ಅಮೃತ ಸರೋವರಗಳ ಸ್ಥಳಗಳಲ್ಲಿ ಅಥವಾ ಅಮ್ಮತ ಸರೋವರದ ಅನುಪಸ್ಥಿತಿಯಲ್ಲಿ ಇತರ ಸೂಕ್ತವಾದ ಜಲಮೂಲಗಳಲ್ಲಿ ಸ್ಥಾಪಿಸಲು ನಿರ್ದೇಶನ ನೀಡಲಾಗಿದೆ.

    ಯಾವುದೇ ಜಲಮೂಲಗಳು ಲಭ್ಯವಿಲ್ಲದಿದ್ದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಅಥವಾ ಸ್ಥಳೀಯ ಶಾಲೆ- ಕಾಲೇಜುಗಳಲ್ಲಿ ಅಥವಾ ಪುಮುಖ ಸ್ಥಳಗಳಲ್ಲಿ, ನಿರ್ಮಿಸುವ ಮೂಲಕ ಶಿಲಾಫಲಕಂ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts