More

    ಭಾರತ ಯಾತ್ರೆಗೆ ಶ್ರಮಿಸಿದ ಶಿಕ್ಷಕರಿಗೆ ಸನ್ಮಾನ

    ಧಾರವಾಡ: ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ನಡೆಸಿದ ಭಾರತ ಯಾತ್ರೆಗೆ ಶ್ರಮಿಸಿದ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಇಲ್ಲಿಯ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆಯಿತು.
    ಕಾರ್ಯಕ್ರಮ ಉದ್ಘಾಟಿಸಿದ ಎಐಪಿಟಿಎಫ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಭಾರತ ಯಾತ್ರೆ ಯಶ್ವಸಿಯಾಗಲು ಶಿಕ್ಷಕರ ಶ್ರಮ ಕಾರಣ. ಕನ್ಯಾಕುಮಾರಿಯಿಂದ ಆರಂಭವಾದ ಭಾರತ ಯಾತ್ರೆ ೧೫ ರಾಜ್ಯಗಳಲ್ಲಿ ೧೧ ಸಾವಿರ ಕಿ.ಮೀ. ಸಂಚರಿಸಿದೆ. ಹೋದೆಡೆಗೆಲ್ಲ ಅಪಾರ ಬೆಂಬಲ ದೊರಕಿದೆ. ಹಳೇ ಪಿಂಚಣಿ ಯೋಜನೆ ಜಾರಿಗಾಗಿ ಭಾರತ ಬಂದ್ ಜರುಗುವ ಸಂಭವವಿದೆ. ಈ ಕುರಿತು ರೂಪರೇಷೆಗಳನ್ನು ರಚಿಸಲಾಗುತ್ತಿದೆ ಎಂದರು.
    ಇದೇ ಸಂದರ್ಭದಲ್ಲಿ ಭಾರತ ಯಾತ್ರೆಗೆ ಶ್ರಮಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಎ.ಆರ್. ದೇಸಾಯಿ, ಎಸ್.ಬಿ. ಕೇಸರಿ, ಆರ್.ಬಿ. ಲಿಂಗದಾಳ, ಶಾಂತಾ ಶೀಲವಂತ, ಕಾಂಚನ್ ರಾಯ್ಕರ, ಮಂಜುನಾಥ ಜಂಗಲಿ, ಎಂ.ಆರ್. ಕಬ್ಬೇರ, ಎಸ್.ಕೆ. ರಾಮದುರ್ಗ, ದ್ರಾಕ್ಷಾಯಣಿ ಹಿರೇಮಠ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts