More

    ಉಕ್ಕಿನ ನಗರಿಯಲ್ಲಿ ಕರಸೇವಕರಿಗೆ ಸನ್ಮಾನ

    ಭದ್ರಾವತಿ: ತಾಲೂಕಿನೆಲ್ಲೆಡೆ ದೇವಾಲಯಗಳಲ್ಲಿ ರಾಮತಾರಕ ಹೋಮ, ಮಂತ್ರ ಪಠಣ, ಜಪ, ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

    ವಿವಿಧ ಸಂಘ-ಸಂಸ್ಥೆಗಳು ರಸ್ತೆಗಳಲ್ಲಿ ಬೃಹದಾಕಾರದ ರಾಮನ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಸಾರ್ವಜನಿಕರಿಗೆ ಲಾಡು, ಪುಳಿಯೋಗರೆ, ಪಲಾವು, ಚಿತ್ರನ್ನ, ಅನ್ನ-ಸಾಂಬಾರು ವಿತರಿಸಿದರು.
    ವಿಶ್ವ ಹಿಂದು ಪರಿಷತ್ ಹಾಗೂ ವಿಶ್ವ ಭಾರತಿ ವಿಶ್ವಸ್ಥ ಮಂಡಳಿಯಿಂದ ಸಿದ್ಧಾರೂಢ ನಗರದಲ್ಲಿರುವ ಧರ್ಮಶ್ರೀ ಸಭಾ ಭವನದಲ್ಲಿ 20ಕ್ಕೂ ಹೆಚ್ಚು ಕರಸೇವಕರನ್ನು ಸನ್ಮಾನಿಸಲಾಯಿತು. ಅರಕೆರೆ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಮತಾರಕ ಹೋಮ, ಜಪ, ಭಜನೆ ನಡೆಸಲಾಯಿತು.
    ಆಶೀರ್ವಚನ ನೀಡಿದ ಶ್ರೀಗಳು, ಹಲವು ದಶಕದ ಹೋರಾಟದಿಂದ ಇಂದು ರಾಮಮಂದಿರ ಪ್ರತಿಷ್ಠಾಪನೆ ನಡೆದಿದೆ. ಇದು ಸಂಘಟಿತ ಹೋರಾಟದ ಲವಾಗಿದೆ ಎಂದರೆ ತಪ್ಪಾಗಲಾರದು. ನಮ್ಮಲ್ಲಿನ ಒಡಕಿನ ಕಾರಣಕ್ಕಾಗಿ ಅನೇಕ ವಿದೇಶಿ ಮತೀಯ ಶಕ್ತಿಗಳು ನಮ್ಮ ಮಠ-ಮಂದಿರಗಳನ್ನು ಹಾಳುಗೆಡವಿದ್ದವು. ಅದರಿಂದ ಮುಕ್ತಿ ದೊರೆಯುವ ಕಾರ್ಯ ಈಗ ನಡೆದಿದೆ. ಅದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಧ್ಯವಾಗಿದೆ. ಪ್ರಸ್ತುತ ಹಿಂದು ಸಂಘಟನೆಗಳ ಶಕ್ತಿ ಹೆಚ್ಚಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
    ವಿಎಚ್‌ಪಿ ಪ್ರಾಂತೀಯ ಉಪಾಧ್ಯಕ್ಷ ಹಾ.ರಾಮಪ್ಪ ಮಾತನಾಡಿ, ಸಮಸ್ತ ಭಾರತೀಯರು ನೆನಪಿನಲ್ಲಿಟ್ಟುಕೊಳ್ಳುವಂತ ಕಾರ್ಯ ಇಂದು ನಡೆದಿದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶ್ರಮಿಸಿದ್ದಾರೆ ಎಂದರು.
    ಕರಸೇವಕ ಕೆ.ಎನ್.ಶ್ರೀಹರ್ಷ ಮಾತನಾಡಿ, 500 ವರ್ಷಗಳ ಕನಸು ಇಂದು ನನಸಾಗಿದೆ. ಅಂದು ಅಯೋಧ್ಯೆಗೆ ಕರೆಸೇವಕರಾಗಿ ತೆರಳಿದ್ದ ತಾಲೂಕಿನ 108 ರಾಮಭಕ್ತರಲ್ಲಿ ಇಂದು 56 ಜನ ಮಾತ್ರ ಬದುಕುಳಿದಿದ್ದಾರೆ ಎಂದರು.
    ಬೃಹತ್ ಎಲ್‌ಇಡಿ ಪರದೆ ಅಳವಡಿಸಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
    ಹೊಸಮನೆ ಸುಭಾಷ್ ನಗರದಲ್ಲಿರುವ ಕರುಮಾರಿಯಮ್ಮ ದೇವಾಲಯದ ಆವರಣದಲ್ಲಿ ನೂರಾರು ಮಹಿಳೆಯರಿಂದ ಕಳಸ ಪ್ರತಿಷ್ಠಾಪನೆ ಹಾಗೂ ಶ್ರೀರಾಮ ಮೂರ್ತಿಯ ಪಲ್ಲಕ್ಕಿ ಉತ್ಸವ ನೆರವೇರಿತು. ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಸುರೇಶಪ್ಪ, ನಗರಸಭೆ ಸದಸ್ಯರಾದ ಮಣಿ, ಸುದೀಪ್ ಇತರರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಗರದ ಕೇಸರಿ ಯುವಪಡೆ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts