More

    ಸಿಎಂ ಬರ್ತಾರೆ ಎಂದು ಗಿಡ-ಮರಗಳಿಗೆ ಕೊಡಲಿ ಹಾಕಿದ ಕೆಇಬಿ ಸಿಬ್ಬಂದಿ

    ಚಾಮರಾಜನಗರ: ಗಣ್ಯರು ಜಿಲ್ಲೆಗೆ ಭೇಟಿ ಕೊಟ್ಟ ಸವಿ ನೆನಪಿಗಾಗಿ ಸಸಿ ನೆಡುವುದು ಸಾಮಾನ್ಯ. ಆದರೆ ಅ‌‌.7ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ ಹಿನ್ನೆಲೆ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರೋ ಕಾರಣಕ್ಕೆ ನಗರದ ರಸ್ತೆ ಬದಿಯಲ್ಲಿ ಸೊಂಪಾಗಿ ಬೆಳೆದಿದ್ದ ಗಿಡ-ಮರಗಳನ್ನು ಕೆಇಬಿ ಸಿಬ್ಬಂದಿ ನೆಲಕ್ಕುರುಳಿಸಿದೆ.

    ಚಾಮರಾಜನಗರ- ನಂಜನಗೂಡು ರಸ್ತೆ ಬದಿಯಲ್ಲಿ ಬೆಳೆದಿರುವ ಸುಮಾರು 7ಕ್ಕೂ ಹೆಚ್ಚು ಗಿಡ-ಮರಗಳ ರೆಂಬೆ ಕೊಂಬೆ ಕಡಿಯಲಾಗಿದೆ. ವಿದ್ಯುತ್ ತಂತಿ ಹಾದು ಹೋಗಿರುವ ಕಡೆ ರೆಂಬೆ ಕತ್ತರಿಸಲಾಗಿದೆ ಎಂದು ಸಿಬ್ಬಂದಿ ಸ್ಥಳೀಯರಿಗೆ ತಿಳಿಸಿದ್ದಾರೆ. ಆದರೆ, ವಿದ್ಯುತ್ ತಂತಿ ಇಲ್ಲದ ಕಡೆ ಮತ್ತು ಒಂದು ಮರದ ಬುಡಕ್ಕೆ ಕೊಡಲಿ ಇಟ್ಟಿರುವುದು ಕೆಇಬಿ ದುರಾಡಳಿತಕ್ಕೆ ಸಾಕ್ಷಿಯಾಗಿದೆ.

    ನಗರದ ನಿವಾಸಿ, ಪರಿಸರ ಪ್ರೇಮಿ ವೆಂಕಟೇಶ್ ತನ್ನ ಸ್ವಂತ ಹಣ ಖರ್ಚು ಮಾಡಿ  ಹೊಂಗೆ ಗಿಡಗಳನ್ನು ನೆಟ್ಟು ಕಳೆದ 5 ವರ್ಷಗಳಿಂದ ಬೆಳೆಸುತ್ತಿದ್ದಾರೆ. ನೆರಳು ನೀಡುತ್ತಿದ್ದ ಮರಗಳನ್ನು ಕಡಿದು ಹಾಕಿರೋದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ನೆಲಕ್ಕುರುಳಿದ್ದ ರೆಂಬೆ ಕೊಂಬೆಗಳನ್ನು ರಸ್ತೆಗೆ ಹಾಕಿದ್ದಾರೆ.

    ಸಾರಿಗೆ ಬಸ್​ ಡ್ರೈವರ್​-ಕಂಡಕ್ಟರ್​ ಮೇಲೆ ಡಿಪೋ ಮ್ಯಾನೇಜರ್​ ದಬ್ಬಾಳಿಕೆ: ವಿಡಿಯೋ ವೈರಲ್​

    ಇಂದಿನಿಂದ ಗುರುವಾರ ಮಧ್ಯಾಹ್ನದ ವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ಬಂದ್​

    ಗಂಡನಿಗೆ ಹುಡುಗೀರ ಶೋಕಿ, ನನ್ನನ್ನು ಜೀವಂತ ಶವ ಮಾಡಿದ್ದಾನೆ, ಕಿರುಕುಳ ಸಹಿಸಲಾಗ್ತಿಲ್ಲ… ಕಣ್ಣೀರು ತರಿಸುತ್ತೆ ಈ ಸ್ಟೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts