More

    ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳಲು ತಾತ್ಕಾಲಿಕ ಅವಕಾಶ

    ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳಲು ಅರಣ್ಯ ಇಲಾಖೆ ತಾತ್ಕಾಲಿಕ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಭಾನುವಾರ ನೂರಾರು ಭಕ್ತರು ಕಾಲ್ನಡಿಗೆ ಮೂಲಕ ನಾಗಮಲೆಗೆ ಪ್ರಯಾಣ ಬೆಳೆಸಿದರು.

    ಕಳೆದ ಜ.26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಮಾರ ಪರ್ವತಕ್ಕೆ ಸಾವಿರಾರು ಚಾರಣಿಗರು ಬಂದು, ಟೆಂಟ್ ಹಾಕಿಕೊಂಡು ತಂಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಾಗಾಗಿ ಚಾರಣಿಗರ ಟ್ರಕ್ಕಿಂಗ್‌ನಿಂದ ಪರಿಸರದ ಹಾನಿಯ ಜತೆಗೆ ಜಲ ಮೂಲಗಳು ಕಲುಷಿತಗೊಳ್ಳುತ್ತವೆ ಎಂಬುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದನ್ನು ಮನಗಂಡು ರಾಜ್ಯದ ಎಲ್ಲ ಚಾರಣ ತಾಣಗಳಲ್ಲೂ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಹಾಗೂ ಟ್ರಕ್ಕಿಂಗ್ ಹೋಗುವ ಚಾರಣಿಗರನ್ನು ಸೀಮಿತಗೊಳಿಸುವ ಉದ್ದೇಶದಿಂದ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಎಲ್ಲ ಚಾರಣ ತಾಣಗಳಲ್ಲಿ ಚಾರಣಿಗರ ಪ್ರವೇಶವನ್ನು ನಿಬರ್ಂಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿಗೆ ಸೂಚಿಸಿದ್ದರು.

    ಈ ದಿಸೆಯಲ್ಲಿ ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪಾಲಾರ್ ವನ್ಯಜೀವಿ ವ್ಯಾಪ್ತಿಯಲ್ಲಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುವ ಚಾರಣಿಗರ ಪ್ರವೇಶವನ್ನು ೆ.17 ರಿಂದ ನಿಷೇಸಲಾಗಿತ್ತು. ಈ ಬಗ್ಗೆ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

    ಇತ್ತ ಮ.ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರೆಯು ಮಾ.7 ರಿಂದ 5 ದಿನಗಳವರೆಗೆ ಜರುಗಲಿದ್ದು, ಈ ವೇಳೆ ಹೆಚ್ಚಿನ ಭಕ್ತರು ನಾಗಮಲೆಗೂ ತೆರಳುವ ಮುನ್ಸೂಚನೆ ಇತ್ತು. ಇದರಿಂದ ಭಕ್ತರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಇದನ್ನು ಮನಗಂಡ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎ್ ಡಾ. ಸಂತೋಷ್‌ಕುಮಾರ್ ಅವರು ಹಿರಿಯ ಅಕಾರಿಗಳ ಗಮನಕ್ಕೆ ತಂದು ಮ.ಬೆಟ್ಟದಿಂದ ನಾಗಮಲೆಗೆ ತೆರಳುವ ಕಾಲ್ನಡಿಗೆಯ ಭಕ್ತರಿಗೆ ಮಾ.3 ರಿಂದ 10ರವರೆಗೆ ಬೆಳಗ್ಗೆ 6.30 ರಿಂದ 10.30 ರೊಳಗೆ ತಾತ್ಕಾಲಿಕವಾಗಿ ಅವಕಾಶ ಕಲ್ಪಿಸಲಾಗಿತ್ತು.

    ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10.30 ರೊಳಗೆ ನೂರಾರು ಭಕ್ತರು ಮ.ಬೆಟ್ಟದಿಂದ ನಾಗಮಲೆಗೆ ಕಾಲ್ನಡಿಗೆಯ ಮೂಲಕ ಪ್ರಯಾಣ ಬೆಳೆಸಿದರು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಭಕ್ತರಿಗೆ ಸಂಜೆ 5.30ರೊಳಗೆ ಕಡ್ಡಾಯವಾಗಿ ಮ.ಬೆಟ್ಟಕ್ಕೆ ಹಿಂತಿರುಗುವಂತೆ ಸೂಚನೆ ನೀಡಿದರಲ್ಲದೆ ಅರಣ್ಯ ಪ್ರದೇಶದೊಳಗೆ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡದಂತೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts