More

    ಶಿಕ್ಷಕಿ ಸೇರಿ ಒಂದೇ ಕುಟುಂಬದ ನಾಲ್ವರು ಕರೊನಾಗೆ ಬಲಿ! ಅಪ್ಪ-ಅಮ್ಮ, ಅಜ್ಜಿ-ತಾತನ ಸಾವಿಂದ ಕಂಗೆಟ್ಟ ಬಾಲಕ

    ಬಾಗಲಕೋಟೆ: ಮಹಾಮಾರಿ ಕರೊನಾ ತಂದೊಡ್ಡುತ್ತಿರುವ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಕೋಟ್ಯಂತರ ಜನರ ಬದುಕನ್ನ ಮೂರಾಬಟ್ಟೆ ಮಾಡಿರುವ ಈ ಸೋಂಕು ಹಲವರನ್ನು ತಬ್ಬಲಿ ಮಾಡಿದೆ. ಇಂತಹದ್ದೇ ಕರುಣಾಜಕನ ಘಟನೆ ಜಿಲ್ಲೆಯಲ್ಲಿ ಸಂಭವಿಸಿದ್ದು. ಒಂದೇ ಮನೆಗೆ ನಾಲ್ವರು ಮಹಾಮಾರಿ ಕರೊನಾಗೆ ಬಲಿಯಾಗಿದ್ದಾರೆ. ಅಪ್ಪ-ಅಮ್ಮ, ಅಜ್ಜಿ-ತಾತನನ್ನು ಕಳೆದುಕೊಂಡ ಬಾಲಕನೀಗ ಅನಾಥವಾಗಿದ್ದಾನೆ.

    ಬಾಗಲಕೋಟೆ ತಾಲೂಕಿನ ದೇವಿನಾಳ ಗ್ರಾಮದ ವೆಂಕಟೇಶ್ ಒಂಟಗೋಡಿ (45), ಇವರ ಪತ್ನಿ ರಾಜೇಶ್ವರಿ (40), ರಾಜೇಶ್ವರಿಯ ತಂದೆ ರಾಮನಗೌಡ ಉದಪುಡಿ(74), ತಾಯಿ ಲಕ್ಷ್ಮೀಬಾಯಿ (68) ಕೋವಿಡ್​ಗೆ ಬಲಿಯಾಗಿದ್ದಾರೆ. ಈ ನಾಲ್ವರು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ವಾಸವಿದ್ದರು. ಶಿಕ್ಷಕಿಯಾಗಿದ್ದ ರಾಜೇಶ್ವರಿ ಸಾಲಹಳ್ಳಿಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಪತಿ ವೆಂಕಟೇಶ್ ರಾಮದುರ್ಗದಲ್ಲಿ ಹಾಸ್ಟೆಲ್​ ಸೂಪರಿಡೆಂಟ್​ ಆಗಿದ್ದರು. ರಾಜೇಶ್ವರಿ ಬೆಳಗಾವಿ ಉಪಚುನಾವಣೆ ಕೆಲಸ ಮುಗಿಸಿ ಗ್ರಾಮಕ್ಕೆ ಬಂದ ಬಳಿಕ ಅವರಿಗೆ ಕರೊನಾ ಲಕ್ಷಣ ಕಾಣಿಸಿತ್ತು. ಇದನ್ನೂ ಓದಿರಿ ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

    ನಂತರ ಮನೆಯಲ್ಲಿದ್ದ ರಾಜೇಶ್ವರಿ ತಂದೆ, ತಾಯಿ, ಪತಿ ಸೇರಿ ನಾಲ್ವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಎಲ್ಲರೂ ಎರಡ್ಮೂರು ದಿನದ ಅಂತರದಲ್ಲಿ ಕೊನೆಯುಸಿಳೆದಿದ್ದಾರೆ. ಮೇ 3ರಂದು ರಾಜೇಶ್ವರಿ, ಮೇ 5ರಂದು ಇವರ ತಂದೆ ರಾಮನಗೌಡ, ಮೇ 12ರಂದು ತಾಯಿ ಲಕ್ಷ್ಮೀಬಾಯಿ ಸಾವಿಗೀಡಾಗಿದ್ದರು. ಪತಿ ವೆಂಕಟೇಶ್​ ಮೇ 15ರಂದು ಕೊನೆಯುಸಿರೆಳೆದಿದ್ದಾರೆ. ರಾಜೇಶ್ವರಿ ಮತ್ತು ವೆಂಕಟೇಶ್​ಗೆ ಒರ್ವ ಪುತ್ರನಿದ್ದು, ಇದೀಗ ಕುಟುಂಬದ ನಾಲ್ವರನ್ನ ಕಳೆದುಕೊಂಡು ಅನಾಥವಾಗಿದ್ದಾನೆ.

    ಕರೊನಾದಿಂದ ಶಿಕ್ಷಕ ಸಾವು, ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನೇರವೇರಿಸಿದ ವಿದ್ಯಾರ್ಥಿಗಳು!

    ತಾಯಿ ಗರ್ಭದಿಂದ ಮಗುವಿನ ಕಾಲು ಹೊರ ಬಂದಿದೆ.. ಯಾರಾದರೂ ಹೆರಿಗೆ ಮಾಡಿ… ಆಸ್ಪತ್ರೆ ಬಾಗಿಲಲ್ಲಿ ಕುಟುಂಬಸ್ಥರ ಆಕ್ರಂದನ

    ವಿವಾಹಿತೆ ಜತೆ ಪರಪುರುಷನ ಕಾಮದಾಟ! 5 ವರ್ಷದ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

    ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts