More

    VIDEO| ‘ಬಿಗ್ ಬಾಸ್ ಓಟಿಟಿ’ ಮನೆಗೆ ಬಂದ ಸುದೀಪ್​: ಬಹಿರಂಗವಾಯ್ತು ಮೊದಲ ಸ್ಪರ್ಧಿ ಯಾರೆಂದು… ದೊಡ್ಮನೆ ಹೇಗಿದೆ ಗೊತ್ತಾ?

    ಬೆಂಗಳೂರು: ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದೊಡ್ಮನೆಗೆ ಯಾರೆಲ್ಲಾ ಬರ್ತಾರೆ, ಬಿಗ್​ ಬಾಸ್​ ಮನೆ ಹೇಗಿದೆ? ಎಂಬ ಕುತೂಹಲ ಕೋಟ್ಯಂತರ ಅಭಿಮಾನಿಗಳ ಮನದಲ್ಲಿದೆ. ಬಿಗ್​ ಬಾಸ್​ ಮನೆಗೆ ಕಿಚ್ಚ ಸುದೀಪ್​ ಆಗಮಿಸಿದ್ದು, ದೊಡ್ಮನೆಯಲ್ಲಿ ವಾಸುಕಿ ವೈಭವ್​ ಜತೆ ಒಂದು ಸುತ್ತು ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋ ಬಿಡುಗಡೆಯಾಗಿದ್ದು, ದೊಡ್ಮನೆ ನೋಡಿದ್ರೆ ವ್ಹಾವ್​… ಅನ್ನೋದು ಗ್ಯಾರಂಟಿ. ಇನ್ನು ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್​ ಗುರೂಜಿ ಎಂಟ್ರಿಯಾಗಿದ್ದಾರೆ.

    ಇಂದು(ಆ.6) ಸಂಜೆ 7ಕ್ಕೆ ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್​ ಕಾರ್ಯಕ್ರಮ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಸುದೀಪ್ ಸ್ಪರ್ಧಿಗಳನ್ನು ಪರಿಚಯಿಸಿ ಮನೆಗೆ ಕಳುಹಿಸಲಿದ್ದಾರೆ. ಈ ಕಾರ್ಯಕ್ರಮವು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ನೇರ ಪ್ರಸಾರವಾಗಲಿದ್ದು, 42 ದಿನಗಳ ಕಾಲ ಲೈವ್ ಆಗಿ ನೋಡಬಹುದು.

    ‘ಬಿಗ್ ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್​ನಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ? ಎಂಬ ವಿಷಯ ಇನ್ನೂ ಬಹಿರಂಗವಾಗದಿದ್ದರೂ, ಒಂದಷ್ಟು ಹೆಸರುಗಳು ಕೇಳಿಬರುತ್ತಿತ್ತು. ಸೋನು ಗೌಡ, ಮುಖ್ಯಮಂತ್ರಿ ಚಂದ್ರು, ರೇಖಾ ದಾಸ್, ಸಾನ್ಯ ಅಯ್ಯರ್, ರಾಕೇಶ್ ಅಡಿಗ, ಟಿವಿ ನಿರೂಪಕ ಸೋಮಣ್ಣ ಮಾಚಿಮಾಡ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಆರ್ಯವರ್ಧನ್​ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಉಳಿದ ಸ್ಪರ್ಧಿಗಳು ಯಾರೆಂದು ಕೆಲವೇ ಕ್ಷಣದಲ್ಲಿ ಬಹಿರಂಗವಾಗಲಿದೆ.

    ನಾಗಮಂಗಲ ಶಾಸಕ ಸುರೇಶ್‌ಗೌಡ ವಿರುದ್ಧ ಎಫ್​ಐಆರ್​! ಸಾಕ್ಷ್ಯವಾಗಿ ವಿಡಿಯೋ-ಫೋಟೋ ಸಲ್ಲಿಕೆ

    ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ತಂದೆಯ ಹೇಳಿಕೆ ಕೇಳಿದ್ರೆ ಮನಸ್ಸು ಭಾರ…

    ಮೃತಪಟ್ಟ 30 ವರ್ಷದ ಬಳಿಕ ವಿವಾಹ! ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ನಡೆಯಿತು ಪ್ರೇತಗಳ ಮದ್ವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts