More

    ಬೆಂಗಳೂರಲ್ಲಿ ವಾಯುವಿಹಾರ ಮಾಡುತ್ತಲೇ ತಲೆಗೆ ಗುಂಡು ಹಾರಿಸಿಕೊಂಡು ಪ್ರಾಣಬಿಟ್ಟ ವಿದ್ಯಾರ್ಥಿ

    ಬೆಂಗಳೂರು: ಪರೀಕ್ಷೆಗೆ ಹಾಜರಾಗಬೇಕಿದ್ದ ದಿನವೇ ಮಿಲಿಟರಿ ಶಾಲಾ ವಿದ್ಯಾರ್ಥಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ಸಂಜಯನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.

    ಉತ್ತರಾಖಂಡ್ ಮೂಲದ ಭಗತ್​ ಸಿಂಗ್​ ಮತ್ತು ಬಾಬ್ನಾ ದಂಪತಿಯ ಪುತ್ರ ರಾಹುಲ್​ ಭಂಡಾರಿ(17) ಮೃತ ದುರ್ದೈವಿ. ರಾಹುಲ್​ ತಂದೆ ಸೇನೆಯ ನಿವೃತ್ತ ಹವಾಲ್ದಾರ್​. 20 ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿರುವ ಕುಟುಂಬ, ಆರ್​.ಟಿ. ನಗರದಲ್ಲಿ ಮನೆ ಮಾಡಿಕೊಂಡು ವಾಸವಿದೆ. ಓದಿನಲ್ಲಿ ಮುಂದಿದ್ದ ರಾಹುಲ್​ ಎಸ್ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ.90 ಅಂಕ ಪಡೆದಿದ್ದ. ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಇತ್ತು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ರಾಹುಲ್​, ಮಾನಸಿಕ ಒತ್ತಡ ನಿವಾರಣೆಗಾಗಿ ಬೆಳಗಿನ ಜಾವ ವಾಕಿಂಗ್​ ಮಾಡುವ ಹವ್ಯಾಸ ಇಟ್ಟುಕೊಂಡಿದ್ದ.

    ನಿನ್ನೆ ರಾತ್ರಿ ಊಟ ಮಾಡಿ ಮನೆಯಲ್ಲೇ ಮಲಗಿದ್ದ ರಾಹುಲ್​, ಬೆಳಗಿನ ಜಾವ 4ರ ಸಮಯದಲ್ಲಿ ಎಂದಿನಂತೆ ಮನೆಯಿಂದ ಹೊರ ಬಂದಿದ್ದ. ಸಮಯ 6 ಆದರೂ ಮಗ ವಾಪಸ್​ ಮನೆಗೆ ಬಂದಿರಲಿಲ್ಲ. ಅವನ ಮೊಬೈಲ್​ಗೆ ಪಾಲಕರು ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಅಷ್ಟೊತ್ತಿಗೆ ಸಂಜಯನಗರ ಮುಖ್ಯರಸ್ತೆಯ ಬಸ್ ನಿಲ್ದಾಣ ಬಳಿ ತಲೆಗೆ ಗುಂಡೇಟು ಬಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಇರುವ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು.

    ರಾಹುಲ್​ ಜೇಬಿನಲ್ಲಿದ್ದ ಮೊಬೈಲ್​ ರಿಂಗಣಿಸುತ್ತಲೇ ಇತ್ತು. ಪೊಲೀಸರು ಕರೆ ಸ್ವೀಕರಿಸುತ್ತಿದ್ದಂತೆ, ಎಲ್ಲಿದ್ದೀಯ ಮಗನೇ? ಇಷ್ಟೊತ್ತಾದರೂ ಏಕೆ ಮನೆಗೆ ಬಂದಿಲ್ಲ? ಎಂದು ಪಾಲಕರು ಕೇಳಿದ್ದು, ಅದಕ್ಕುತ್ತರಿಸಿದ ಪೊಲೀಸರು ಮಗನ ಸಾವಿನ ಬಗ್ಗೆ ಹೇಳಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ರಾಹುಲ್​ನ ಅಕ್ಕ, ನನ್ನ ತಮ್ಮನಿಗೆ ಏನೂ ಆಗಿಲ್ಲ. ಎದ್ದೇಳು ರಾಹುಲ್​… ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ತಂದೆಯ ಪಿಸ್ತೂಲ್​ನಿಂದಲೇ ಗುಂಡು ಹಾರಿಸಿಕೊಂಡು ರಾಹುಲ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮಹಿಳೆಯನ್ನ ನಗ್ನಗೊಳಿಸಿ ಹಿಂಸಿಸಿದ್ದ ಕೇಸ್​ಗೆ ಬಿಗ್​ ಟ್ವಿಸ್ಟ್​! ಆಕೆಯ ಕಾಟ ತಡೆಯಲಾಗದೆ ಹಾಗೇ ಮಾಡಿದ್ವಿ…

    ಕರೊನಾ ಎಂಬುದು ಕೇವಲ 1 ಗ್ರಾಂ ಅಷ್ಟೆ, ಇನ್ನೂ 8 ವರ್ಷ ಸಾವು-ನೋವು ಕಾಡುತ್ತೆ: ಭವಿಷ್ಯ ನುಡಿದ ಕೋಡಿಶ್ರೀಗಳು

    ಮಗುವಿಗೆ ಜನ್ಮ ನೀಡಿ ಅವಿವಾಹಿತೆ ಸಾವು: ಆ ಇಬ್ಬರಲ್ಲಿ ಮಗುವಿನ ತಂದೆ ಯಾರು? ಶಿವಮೊಗ್ಗದಲ್ಲೊಂದು ವಿಚಿತ್ರ ಲವ್ ಕೇಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts