More

    ಸಾರಿಗೆ ಬಸ್​ ಚಾಲಕನ ಹತ್ಯೆ ಪಕ್ಕಾ ಪ್ಲಾನ್ಡ್! ಇದೇ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ… ಬೆಚ್ಚಿಬೀಳಿಸುತ್ತೆ ನಿನ್ನೆ ನಡೆದ ಘಟನೆ

    ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಕೆಲಸಕ್ಕೆ ಹಾಜರಾದ ಕೆಎಸ್​ಆರ್​ಟಿಸಿ ಬಸ್​ ಚಾಲಕನಿಗೆ ಕಿಡಿಗೇಡಿಗಳು ಮನಸೋಇಚ್ಛೆ ಕಲ್ಲು ಬೀಸಿ ಹತ್ಯೆ ಮಾಡಿದ್ದ ಪಕ್ರರಣ ಸಂಬಂಧ ಸ್ಫೋಟಕ ರಹಸ್ಯ ಬಯಲಾಗಿದೆ.

    ಶುಕ್ರವಾರ ವಿಜಯಪುರದಿಂದ ಜಮಖಂಡಿ ನಗರಕ್ಕೆ ಬಸ್ ಚಲಾಯಿಸಿಕೊಂಡು ಜಮಖಂಡಿ ಸಾರಿಗೆ ಘಟಕದ ಬಸ್​ ಚಾಲಕ ಎನ್.ಕೆ. ಅವಟಿ (55) ಬರುತ್ತಿದ್ದರು. ಜಮಖಂಡಿಯ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬಸ್​ ಅನ್ನು ಅಡ್ಡಗಟ್ಟಿದ ಕಿಡಿಗೇಡಿಗಳು ಬಸ್​ನತ್ತ ಕಲ್ಲು ತೂರಿದ್ದರು. ಬಸ್​ ಮುಂಭಾಗದ ಗಾಜನ್ನು ಒಡೆದುಕೊಂಡು ಒಳ ತೂರಿದ ಕಲ್ಲು ಚಾಲಕನ ಮೇಲೆ ಬಿದ್ದಿದ್ದು, ಕಲ್ಲಿನೇಟಿಗೆ ಚಾಲಕ ಬಲಿಯಾದರು, ಇದೆಲ್ಲವೂ ಪ್ರಯಾಣಿಕರ ಕಣ್ಣೆದುರು ಕ್ಷಣಾರ್ಧದಲ್ಲೇ ನಡೆದ ಘಟನೆ. ಆದರೆ ಈ ಘಟನೆ ಇದು ಆಕಸ್ಮಿಕ ಅಲ್ಲ, ಕಲ್ಲು ಹೊಡೆಯಲು ಮೊದಲೇ ಪ್ಲಾನ್ ಆಗಿತ್ತು! ಅದರಂತೆ ಇದೇ ಬಸ್​ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಆರೋಪಿಯೊಬ್ಬ ತನ್ನ ಗ್ಯಾಂಗ್​ಗೆ ಬಸ್ ಸಂಚಾರದ ಬಗ್ಗೆ ಮಾಹಿತಿ ಕೊಡ್ತಾನೇ ಇದ್ದ!

    ಕಲ್ಲು ಹೊಡೆದು ಚಾಲಕನನ್ನು ಕೊಂದ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಾಗಲಕೋಟೆ ಎಸ್​ಪಿ ಲೋಕೇಶ್ ಜಗಲಾಸರ್, ಅವಟಿ ಅವರು ಚಲಾಯಿಸುತ್ತಿದ್ದ ಬಸ್​ಗೆ ಕಲ್ಲು ತೂರಲು ಪಕ್ಕಾ ಪ್ಲಾನ್ ಆಗಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಬಸ್ ಸಂಚಾರ ತಡೆಯಲು ಕೆಎಸ್ಆರ್​ಟಿಸಿ ಐವರು ಸಿಬ್ಬಂದಿ ಸಂಚು ರೂಪಿಸಿದ್ದರು. ಇದರ ಮಾಸ್ಟರ್ ಮೈಂಡ್​ ಅರುಣ ಅರಕೇರಿ. ಈತ ಅವಟಿ ಚಾಲನೆ ಮಾಡುತ್ತಿದ್ದ ಬಸ್​ನಲ್ಲಿ ವಿಜಯಪುರ ನಗರದಿಂದ ಪ್ರಯಾಣಿಸುತ್ತಿದ್ದ. ಬಸ್​ನಲ್ಲೇ ಕೂತು ಕಲ್ಲು ತೂರಲು ಸ್ಕೆಚ್ ರೂಪಿಸಿದ್ದ. ಬಸ್ ಇಂತಹ ಸ್ಥಳಕ್ಕೆ ರೀಚ್ ಆಗಿದೆ ಎಂದು‌ ಇನ್ನುಳಿದ ನಾಲ್ವರಿಗೆ ಮಾಹಿತಿ ನೀಡುತ್ತಿದ್ದ ಎಂದು ವಿವರಿಸಿದರು.

    ಅರುಣ್ ಅರಕೇರಿ ಡೈರೆಕ್ಷನ್ ಪ್ರಕಾರ ಮಲ್ಲಪ್ಪ ತಳವಾರ, ಚೇತನ್ ಕರ್ವೆ, ಸದಾಶಿವ ಕಂಕಣವಾಡಿ, ರೋಹಿತ್ ದಾಸ ಕಲ್ಲು ತೂರಲು ಕಾಯುತ್ತಿದ್ದರು. ಬಸ್​, ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆ ಅಡ್ಡ ಬಂದು ಕಲ್ಲು ತೂರಿ ಎಸ್ಕೇಪ್ ಆಗಿದ್ದರು ಎಂದು ಎಸ್​ಪಿ ವಿವರಿಸಿದರು.

    ಈ ಘಟನೆಯಲ್ಲಿ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಚಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕರ್ತವ್ಯಕ್ಕೆ ಹಾಜರಾಗಿ ಸಾವಿಗೀಡಾದ ಚಾಲಕನ ಬಗ್ಗೆ ಪ್ರಯಾಣಿಕರು ಮರುಕ ವ್ಯಕ್ತಪಡಿಸಿದರು. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಮುಷ್ಕರದಲ್ಲಿ ಪಾಲ್ಗೊಂಡವರ ಮೇಲೆ ಮೇಲಧಿಕಾರಿಗಳು ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದಕ್ಕೆ ಸಿಟ್ಟಿಗೆದ್ದ ಐವರು ಆರೋಪಿಗಳು ಬಸ್​ ಸಂಚಾರ ತೆಡೆಗೆ ಪಣ ತೊಟ್ಟಿದ್ದರು. ಅರುಣ ಅರಕೇರಿಯನ್ನೂ ಬೇರಡೆಗೆ ವರ್ಗಾವಣೆ ‌ಮಾಡಲಾಗಿತ್ತು. ಅಥಣಿಯಲ್ಲಿನ ಬಸ್​ಗೆ ಕಲ್ಲೆಸೆತದಲ್ಲೂ ಅರುಣ ಶಾಮೀಲಾಗಿದ್ದ ಎನ್ನಲಾಗಿದೆ.

    ಅಪ್ರಾಪ್ತರ ಲವ್​ ಕೇಸ್​: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಿಂದ ಬಿತ್ತು ಬಾಲಕನ ಹೆಣ, ಊರಲ್ಲಿ ಪ್ರಕ್ಷುಬ್ಧ ವಾತಾವರಣ

    ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ​ ನಿಧನ

    ವಾಟ್ಸ್​ಆ್ಯಪ್ ಬಳಕೆದಾರರೇ ಎಚ್ಚರ! ನಿಮ್ಮ ಮೊಬೈಲ್​ಗೆ ಬಂದೀತು ಪಿಂಕ್​ ವಾಟ್ಸ್​ಆ್ಯಪ್ ಲಿಂಕ್​…

    ಕಾಡ್ಗಿಚ್ಚಿನಲ್ಲಿ ಸುಟ್ಟುಕರಕಲಾಗಿದ್ದ ವ್ಯಕ್ತಿ ಪ್ರಕರಣ: ಬ್ಯಾನರ್​ ಕೊಟ್ಟ ಸುಳಿವಿಂದ ಬಯಲಾಯ್ತು ನಿಗೂಢ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts