More

    SSLC ಫಲಿತಾಂಶ: 32 ಶೈಕ್ಷಣಿಕ ಜಿಲ್ಲೆಗೆ A ಗ್ರೇಡ್, ಬೆಂಗಳೂರು ದಕ್ಷಿಣಕ್ಕೆ ಕೊನೆಯ ಸ್ಥಾನ!

    ಬೆಂಗಳೂರು: 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ತಮ್ಮ ಜಿಲ್ಲೆ ಯಾವ ಸ್ಥಾನ ಪಡೆದಿದೆ? ಟಾಪ್​ 3 ನಲ್ಲಿ ನಮ್ಮ ಜಿಲ್ಲೆ ಇದ್ಯಾ? ಎಂದು ನೋಡುವ ಆಗಿಲ್ಲ. ಯಾಕಂದ್ರೆ ಈ ಬಾರಿ ಜಿಲ್ಲಾವಾರು ರ್ಯಾಂಕಿಂಗ್​ ಕೈಬಿಡಲಾಗಿದೆ. ಬದಲಾಗಿ ಶ್ರೇಣಿ ಆಧರಿಸಿ ಜಿಲ್ಲೆಗಳ ಗುಣಾತ್ಮಕ ಫಲಿತಾಂಶ ವಿಶ್ಲೇಷಿಸಲಾಗಿದೆ.

    ಒಟ್ಟಾರೆ 34 ಶೈಕ್ಷಣಿಕ ಜಿಲ್ಲೆಗಳಲ್ಲಿ 32 ಜಿಲ್ಲೆಗಳು ಎ ಶ್ರೇಣಿ ಪಡೆದಿವೆ. ಬಿ ಶ್ರೇಣಿಗೆ ಸೇರಿರುವ ಜಿಲ್ಲೆಗಳು ಬೆಂಗಳೂರು ದಕ್ಷಿಣ ಹಾಗೂ ಯಾದಗಿರಿ ಮಾತ್ರ. ಅಲ್ಲಿಗೆ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಬೆಂಗಳೂರು ದಕ್ಷಿಣ ಜಿಲ್ಲೆಯು ಯಾದಗಿರಿಯೊಂದಿಗೆ ಕೊನೆಯ ಸ್ಥಾನ ಹಂಚಿಕೊಂಡಿದೆ ಎನ್ನಬಹುದು. ಸಿ ಶ್ರೇಣಿಯಲ್ಲಿ ಯಾವುದೇ ಜಿಲ್ಲೆಗಳಿಲ್ಲ. ಉಳಿದ 32 ಜಿಲ್ಲೆಗಳು ಎ ಗ್ರೇಡ್​ ಪಡೆದಿವೆ.

    ಶೇ.75-100ರ ವರೆಗಿನ ಫಲಿತಾಂಶಕ್ಕೆ ಎ ಶ್ರೇಣಿ, ಶೇ.60-75ರವರೆಗೆ ಪಾಸಾಗಿದ್ದರೆ ಬಿ ಶ್ರೇಣಿ ಹಾಗೂ ಶೇ.60ಕ್ಕಿಂತ ಕಡಿಮೆ ಉತ್ತೀರ್ಣತೆ ಹೊಂದಿರುವ ಜಿಲ್ಲೆಗಳಿಗೆ ಸಿ ಶ್ರೇಣಿ ನಿಗದಿಪಡಿಸಲಾಗಿದೆ.

    ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,73,859 ವಿದ್ಯಾರ್ಥಿಗಳ ಪೈಕಿ 8,53,436 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ.85.63 ಫಲಿತಾಂಶ ದಾಖಲಾಗಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಫಲಿತಾಂಶ ಬಂದಿದೆ. 145 ವಿದ್ಯಾರ್ಥಿಗಳು ಪೂರ್ಣಾಂಕ ಪಡೆಯುವ ಮೂಲಕ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

    ಕೂಲಿಕಾರಳ ಮಗ SSLC ಪರೀಕ್ಷೆಯಲ್ಲಿ ಟಾಪರ್​! ತಂದೆ ಇಲ್ಲದ ನೋವು, ಕಡುಬಡತನ ಇದ್ದರೂ ಓದಿನಲ್ಲಿ ಶ್ರೀಮಂತ

    ಎಸ್ಸೆಸ್ಸೆಲ್ಸಿ ಪರೀಕ್ಷೆ: 40 ಸಾವಿರ ವಿದ್ಯಾರ್ಥಿಗಳನ್ನ ಪಾಸ್​ ಮಾಡಿದ ಕೃಪಾಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts