More

    ಕಬಿನಿ ಜಲಾಶಯದಲ್ಲಿ ಮೀನುಗಾರನ ಬಲೆಗೆ ಬಿದ್ದ ಭಾರಿ ಗಾತ್ರದ ಸಿಗಡಿ

    ಎಚ್​.ಡಿ.ಕೋಟೆ: ಕಬಿನಿ ಜಲಾಶಯದಲ್ಲಿ ಮೀನುಗಾರರು ಹಾಕಿದ ಬಲೆಗೆ ಸಿಗಡಿ ಬಿದ್ದಿದೆ. ಇದನ್ನು ನೋಡಿ ಮೀನುಗಾರರು ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ ಸಿಗಡಿಯ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಅರೇ, ಇದ್ಹೇನಿದು? ಇವರು ಯಾವತ್ತೂ ಸಿಗಡಿ ನೋಡಿಲ್ಲವೇ ಅಂದುಕೊಳ್ಳಬೇಡಿ. ಸಣ್ಣ-ಸಣ್ಣ ಸಿಗಡಿಯನ್ನ ಸಾಮಾನ್ಯವಾಗಿ ನೊಡಿರ್ತೀವಿ. ಆದ್ರೆ ಇದು ಭಾರಿ ಗ್ರಾತದ ಸಿಗಡಿ.

    ಕಬಿನಿ ಜಲಾಶಯದಲ್ಲಿ ಭಾನುವಾರ ಬೆಳಗ್ಗೆ ಅರಲ ಎಂಬ ಮೀನುಗಾರ ಮೀನು ಹಿಡಿಯಲು ಕಬಿನಿ ಹಿನ್ನೀರಿನಲ್ಲಿ ಬಲೆ ಹಾಕಿದ್ದರು. ಮಧ್ಯಾಹ್ನ ನೀರಿನಿಂದ ಬಲೆ ತೆಗೆಯುವ ಸಂದರ್ಭದಲ್ಲಿ 550 ಗ್ರಾಂ ತೂಕದ ಸಿಗಡಿ ಸಿಕ್ಕಿತ್ತು.

    ಹಲವಾರು ವರ್ಷಗಳಿಂದ ನಾವು ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯುತ್ತಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ನಮಗೆ ದೊಡ್ಡ ಸಿಗಡಿ ಸಿಕ್ಕಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

    ಮಂಡ್ಯದಲ್ಲಿ ಸಂಚಲನ ಮೂಡಿಸಿದ ಆಡಿಯೋ! ಜೆಡಿಎಸ್​ ಮಹಿಳಾ ಕಾರ್ಯಕರ್ತೆ ಜತೆ ಶಿವರಾಮೇಗೌಡ ಮಾತನಾಡಿದ್ದೇನು?

    ತಂದೆ-ತಾಯಿ ಮೇಲಿನ ಕೋಪಕ್ಕೆ ರೇಷ್ಮೆಗೂಡಿಗೆ ವಿಷ ಹಾಕಿದ ಮಗಳು! ಕೋಲಾರದಲ್ಲಿ ಅಮಾನವೀಯ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts