More

    ಅಪ್ಪುವಿನ ‘ಗಂಧದ ಗುಡಿ’ ಟೀಸರ್ ನೋಡಿ ಶಾಕ್​ ಆಯ್ತು, ಬೇಜಾರೂ ಆಯ್ತು: ಶಿವಣ್ಣ ಭಾವುಕ

    ಬೆಂಗಳೂರು: ಗಂಧದಗುಡಿ ಟೀಸರ್ ನೋಡಿ ಖುಷಿನೂ ಆಗ್ತಿದೆ, ದುಃಖನೂ ಆಗ್ತಿದೆ. ಅರಣ್ಯ ಹಾಗೂ ವನ್ಯಜೀವಿಗಳನ್ನ ಕಾಪಾಡಿ ಕೊಳ್ಳದಿದ್ದರೆ ಪೃಕೃತಿ ವಿಕೋಪ ಸಂಭವಿಸುತ್ತೆ. ಇದು ಈ ಸಂದರ್ಭಕ್ಕೆ ತಕ್ಕಂತಿದೆ. ಆದರೆ, ಇಂತಹದ್ದು ತೆಗೆದ ಮನುಷ್ಯ ಇಲ್ಲ ಅಂದ್ರೆ ಬೇಜಾರು-ನೋವು ಆಗುತ್ತೆ. ಅಪ್ಪು ಇಲ್ಲ ಅನ್ನೋ ಕೊರಗು ಕಾಡ್ತಿದೆ ಎಂದು ನಟ ಶಿವರಾಜ್​ಕುಮಾರ್​ ಭಾವುಕರಾದರು.

    ಪಿಆರ್​ಕೆ ಪ್ರೊಡಕ್ಷನ್​ ನಿರ್ಮಾಣ ಮಾಡುತ್ತಿರುವ, ನಟ ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಕೂಸು ‘ಗಂಧದ ಗುಡಿ’ಯ ಟೀಸರ್​ ಅಪ್ಪು ಅನುಪಸ್ಥಿತಿಯಲ್ಲೇ ಇಂದು ರಿಲೀಸ್​ ಆಯ್ತು. ಎಲ್ಲವೂ ಅಂದುಕೊಂಡಂತೆ ಇದ್ದಿದ್ದರೆ ನ.1ರಂದದೇ ಈ ಟೀಸರ್​ ರಿಲೀಸ್​ ಆಗಬೇಕಿತ್ತು. ಆದರೆ ಅಪ್ಪು ಅವರ ಅಕಾಲಿಕ ಸಾವಿನಿಂದಾಗಿ ರದ್ದಾಗಿತ್ತು. ಪುನೀತ್​ರ ಕನಸನ್ನು ಪತ್ನಿ ಅಶ್ವಿನಿ ಅವರು ನನಸು ಮಾಡುತ್ತಿದ್ದಾರೆ. ‘ಗಂದಧ ಗುಡಿ’ಯಲ್ಲಿ ”ಪವರ್ ಸ್ಟಾರ್” ಎಂದು ಹಾಕಬೇಡಿ ಎಂದು ಅಪ್ಪು ಕೇಳಿಕೊಂಡಿದ್ದು ಅದು ಅವನ ದೊಡ್ಡತನ. ಅಶ್ವಿನಿಗೆ ಪವರ್ ಇದೆ. ಯಾಕಂದ್ರೆ ಅಶ್ವಿನಿ ಮದುವೆಯಾಗಿದ್ದೇ ‘ಪವರ್ ಸ್ಟಾರ್’ನ. ನಾನ್ಯಾವತ್ತೂ ಅಪ್ಪು-ಅಶ್ವಿನಿ ಅವರನ್ನ ಗಂಡ-ಹೆಂಡತಿ ಥರ ನೋಡಿಲ್ಲ. ಫ್ರೆಂಡ್ಸ್ ಥರ ಇದ್ರು. ಅಶ್ವಿನಿ ಎಲ್ಲವನ್ನೂ ನಿಭಾಯಿಸುತ್ತಾರೆ. ನಾನು ಯಾವತ್ತಿದ್ದರೂ ಅವರ ಜತೆಗೆ ಇರ್ತೀವಿ. ನಾನು ನನ್ನ ತಮ್ಮನನ್ನು ಬಿಟ್ಟುಕೊಡಲ್ಲ. ನಾನು ಅಶ್ವಿನಿಯವರ ಜೊತೆ ಸದಾ ಇರುತ್ತೇನೆ. ಅವರ ಕೆಲಸಕ್ಕೆ ಬೆಂಗಾವಲಾಗುತ್ತೇನೆ ಎಂದರು.

    ಟೀಸರ್​ನಲ್ಲಿ ಅಪ್ಪಾಜಿ ಅವರ ಮುಖ ಕಾಣಿಸದಿದ್ದರೂ ಅವರ ವಾಯ್ಸ್​ ಕೇಳಿಸುತ್ತೆ. ಪುನೀತ್​ ಮತ್ತು ಅಪ್ಪಾಜಿ ಎರಡೂ ಕಣ್ಣಿದ್ದಂತೆ. ನಾನು ಕಾತರದಿಂದ ಕಾಯುತ್ತಿರುವೆ ಗಂಧದಗುಡಿ ನೋಡಲು. ಅಪ್ಪುಗೆ ಅಪ್ಪ-ಅಮ್ಮನ ಎರಡೂ ಕಲೆ ಒಲಿದು ಬಂದಿದೆ. ನಾವು ಬರೀ ಆ್ಯಕ್ಟಿಂಗ್ ಕಡೆ ಹೋದ್ವಿ. ಅಪ್ಪು ಈ ಡಾಕ್ಯುಮೆಂಟರಿ ಬಗ್ಗೆ ನನ್ನ ಜೊತೆ ಮಾತಾಡಿದ್ದ. ಆದ್ರೆ ತೋರಿಸಿರಲಿಲ್ಲ. ನ.1ರಂದು ರಿಲೀಸ್ ಮಾಡೋದಾಗಿ ಹೇಳಿದ್ರು. ಆಮೇಲೆ ನಾನು-ಅವನು ಮೀಟ್​ ಆಗಿದ್ದು ಭಜರಂಗಿ ಸಿನಿಮಾ ಫಂಕ್ಷನ್​ನಲ್ಲಿ ಎಂದರು.

    ವೈಲ್ಡ್ ಕಾರ್ಡ್ ಲೈಫ್ ಡಾಕ್ಯುಮೆಂಟರಿ ಮಾಡೋದು ಬಹಳ ವಿಶೇವಾಗಿರುತ್ತದೆ. ಸಿನಿಮಾಕ್ಕಾದರೆ ಸೆನ್ಸಾರ್ ಪ್ರಾಬ್ಲಂ ಎಲ್ಲವೂ ಎದುರಾಗುತ್ತದೆ. ಭಜರಂಗಿಯಲ್ಲೂ ಈ ಸಂದೇಶ ಇತ್ತು. ನಾವು ಗ್ರಾಫಿಕ್ಸ್ ಮೂಲಕ ಮಾಡಬೇಕಾಗುತ್ತೆ ಎಂದು ಶಿವಣ್ಣ ಹೇಳಿದರು.

    ಅಪ್ಪು ಸರ್ ‘ಗಂಧದ ಗುಡಿ’ ಟೀಸರ್ ನೋಡಿ, ಅದನ್ನು ತೆಗೆದು ಬಿಡಿ ಅಂದ್ರು: ಮಹತ್ವದ ವಿಚಾರ ಹಂಚಿಕೊಂಡ ನಿರ್ದೇಶಕ

    ಎಸ್​ಐ ಹರೀಶ್​ನ ಕರ್ಮಕಾಂಡ ಬಿಚ್ಚಿಟ್ಟ ಮುಖ್ಯಪೇದೆ: ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಸಬ್​ಇನ್​ಸ್ಪೆಕ್ಟರ್​

    ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts