More

    ರೋಹಿಣಿ ಸಿಂಧೂರಿ ಮನೆಯ ವಿದ್ಯುತ್​ ಬಿಲ್​ ತಿಂಗಳಿಗೆ 50 ಸಾವಿರ ರೂ., ಈಜುಕೊಳಕ್ಕೆ ಕುಡಿವ ನೀರು ಬಳಕೆ…

    ಮೈಸೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಶಾಸಕ ಸಾ.ರಾ.ಮಹೇಶ್ ಪತ್ರ ಬರೆದಿದ್ದು, 10 ಅಂಶಗಳನ್ನು ಉಲ್ಲೇಖಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮಹೇಶ್​, ದಿ ಗ್ರೇಟ್ ಸಿಂಗಂ, ದಕ್ಷ ಅಧಿಕಾರಿಯಂತೆ ರೋಹಿಣಿ ಸಿಂಧೂರಿ. ಅದೇನ್ ಸಿಂಗಂವೋ, ಸಿಂಗಳೀಕನೋ… ಅವರ ಮನೆಯ ಕರೆಂಟ್​ ಬಿಲ್​ ಒಂದು ತಿಂಗಳಿಗೆ 50 ಸಾವಿರ ರೂಪಾಯಿ! ಯಾವ ಮಂತ್ರಿ ಮನೆಗೂ ಇಷ್ಟು ಬಿಲ್ ಬರಲ್ಲ. 50 ಸಾವಿರ ರೂಪಾಯಿ ಒಬ್ಬ ಸೆಕೆಂಡ್ ಕ್ಲಾಸ್ ಅಧಿಕಾರಿಯ ವೇತನ ಎಂದು ಹರಿಹಾಯ್ದರು. ಇದನ್ನೂ ಓದಿರಿ ಹರಕೆ ಮುಡಿ ಕೂದಲು ಪ್ರಕರಣ: ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಪರ ಐತಿಹಾಸಿಕ ತೀರ್ಪು!

    ನಾನು ರೋಹಿಣಿ ಸಿಂಧೂರಿ ವಿರುದ್ಧ ಮಾಡಿದ ಆರೋಪಗಳನ್ನು ಒಳಗೊಂಡಂತೆ ಸಿಎಂಗೆ ಪತ್ರ ಬರೆದಿದ್ದೇನೆ. ಪಾರಂಪರಿಕ ಕಟ್ಟಡದ ಆವರಣದಲ್ಲಿ 16 ಲಕ್ಷ ರೂ. ಬಳಸಿ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ. ಈಜುಕೊಳಕ್ಕೆ ಕುಡಿಯುವ ನೀರನ್ನು ಬಳಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಇವೆ. ಬೇರೆಯವರಿಗೆ 3- 4 ಸಾವಿರ ರೂ. ಬಿಲ್ ಬರುತ್ತೆ, ಹೆಚ್ಚೆಂದರೆ 7 ಸಾವಿರ ಬರಬಹುದು. ಆದರೆ ಇವರ ಮನೆಯ ವಿದ್ಯುತ್​ ಬಿಲ್​ ಮಾತ್ರ 50 ಸಾವಿರ ರೂಪಾಯಿ. ಪಂಪ್ ಸೆಟ್‌ಗೆ ಎಷ್ಟು ಗಂಟೆ ಕರೆಂಟ್ ಕೊಡುತ್ತಿದ್ದೀರಿ ಹೇಳಿ? ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ? ಎಂದು ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದರು.

    ರೋಹಿಣಿ ಸಿಂಧೂರಿ ಬಗ್ಗೆ ಸಿನಿಮಾ ಮಾಡುತ್ತಿದ್ದಾರಂತೆ. ಅವರ ಬಗ್ಗೆ ಸಿನಿಮಾ ಮಾಡಲಿ. ಐಎಎಸ್ ಅಧಿಕಾರಿಯೊಬ್ಬರ ಸಾವಿನ ವಿಚಾರ ಸಿಬಿಐ ವರದಿ ಆಧರಿಸಿ ನಾವೂ ಸಿನಿಮಾ ತೆಗೆಯುತ್ತೇವೆ ಎಂದು ಸಾ.ರಾ. ಮಹೇಶ್​ ಹೇಳಿದರು.

    ಈಜುಕೊಳ ಪೈಲೆಟ್ ಪ್ರಾಜೆಕ್ಟ್ ಎಂದು ರೋಹಿಣಿ ಸಿಂಧೂರಿ ಸಮರ್ಥನೆ ಮಾಡಿಕೊಂಡಿದ್ದರ ಬಗ್ಗೆ ಕಿಡಿಕಾರಿದ ಸಾರಾ ಮಹೇಶ್​, ಈಜುಕೊಳವನ್ನು ಹಿಂದುಳಿದ ತಾಲೂಕಿನಲ್ಲಿ ಮಾಡಿ. ನಿಮ್ಮ ಮನೆಗೆ ಏಕೆ ಮಾಡಿಸಿಕೊಂಡಿರಿ? ಆಶ್ರಯ ಮನೆ ಕಟ್ಟಿಸಿಕೊಂಡು ವಾಸ ಮಾಡಿ. ಮಾದರಿ ಶೌಚಗೃಹ ಕಟ್ಟಿಸಿಕೊಂಡು ಬಳಸಿ ಎಂದರು. ರೈತರಿಗೇ ವಿದ್ಯುತ್ ಸಿಗುತ್ತಿಲ್ಲ. ಅಂತಹದ್ದರಲ್ಲಿ ಇವರು ಮಾತ್ರ ಇಷ್ಟೊಂದು ಬಳಸುತ್ತಿದ್ದಾರೆ ಎಂದು ಕಿಡಿಕಾರಿದರು.

    ಎಲ್ಲ ಸಿನಿಮಾದಲ್ಲೂ ರಾಜಕಾರಣಿಗಳನ್ನು ಕೆಟ್ಟದಾಗಿ ತೋರಿಸಿ ಹೀಗಾಗಿದೆ. ಮೈಸೂರು ರಾಜಕಾರಣಿಗಳ್ಯಾರು ಮನುಷ್ಯರಲ್ಲವಾ? ಮೈಸೂರಿನಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಪ್ರಾಮಾಣಿಕರಲ್ಲವಾ? ಮೈಸೂರು ರಾಜಕಾರಣಿಗಳ ಕಳಂಕದ ಬಗ್ಗೆ ತನಿಖೆ ಮಾಡಬೇಕು. ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ವಿಧಾನಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಲಿ. ರಾಜಕಾರಣಿಗಳಿಗೆ ಬಂದಿರುವ ಕಳಂಕ ನಿವಾರಣೆಗೆ ವಿಧಾನಸಭೆಯಲ್ಲಿ ಹೋರಾಟ ಮಾಡುವೆ ಎಂದರು. (ದಿಗ್ವಿಜಯ ನ್ಯೂಸ್)

    ನನ್ಗೆ ತೊಂದ್ರೆ ಕೊಟ್ರು, ಕೆಲ್ಸ ಮಾಡೋಕೆ ಬಿಡ್ಲಿಲ್ಲ… ಎನ್ನುತ್ತಲೇ ಭೂಮಾಫಿಯಾ ಬಗ್ಗೆ ಬಿಚ್ಚಿಟ್ಟ ಸಿಂಧೂರಿ

    ಗಂಡನ ಕೊಂದು ಪ್ರಿಯಕರನ ಮನೆಯ ಹೋಮಕುಂಡದಲ್ಲಿ ಶವ ಸುಟ್ಟಿದ್ದ ಪತ್ನಿ: ಭಾಸ್ಕರ್​ ಶೆಟ್ಟಿ ಹಂತಕರಿಗೆ ಶಿಕ್ಷೆ ಪ್ರಕಟ

    ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts