More

    ಹೊರ ಜಗ್ಗತ್ತಿಗೆ ‘ಶಾಸಕ’ ಕೊಳ್ಳೇಗಾಲದಲ್ಲಿ ‘ಜನ ಸೇವಕ’

    ಕೊಳ್ಳೇಗಾಲ : ಹೊರ ಜಗ್ಗತ್ತಿಗೆ ನಾನು ಶಾಸಕ, ಆದರೆ ಕೊಳ್ಳೇಗಾಲದಲ್ಲಿ ಜನ ಸೇವಕ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

    ಪಟ್ಟಣದ ಶ್ರೀ ವಾಸವಿ ಮಹಲ್‌ನಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಏರ್ಪಡಿಸಿದ್ದ ತಮ್ಮ 63ನೇ ವರ್ಷದ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

    1989 ರಲ್ಲಿ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದೆ. ಅಂದಿನಿಂದ ಇಲ್ಲಿಯವರೆಗೂ ಜನರ ನಡುವೆಯೇ ಜೀವನ ನಡೆಸಿದ್ದೇನೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಜನರ ಕಷ್ಟ, ಸುಖ, ಸಾವು, ನೋವುಗಳಿಗೆ ಸ್ಪಂದಿಸಿದ್ದೇನೆ. ಕೊಳ್ಳೇಗಾಲ ಜನತೆ 19 ವರ್ಷಗಳ ವನವಾಸಕ್ಕೆ ಅಂತ್ಯ ಹಾಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೆಂಬಲ ನೀಡಿ 2023ರ ಅವಧಿಗೆ ಶಾಸಕನಾಗಿ ಮಾಡಿದ್ದಾರೆ ಎಂದರು.

    ಈ ಸಂಭ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಮಂತ್ರಿ ಮಂಡಲ ಸಚಿವರನ್ನು ನೆನೆಯುತ್ತೇನೆ. ಶಾಸಕನಾಗಿ 10 ತಿಂಗಳಾಗಿದೆ. 100 ಕೋಟಿ ರೂ.ಗೂ ಹೆಚ್ಚು ಅನುದಾನ ತಂದು ಕ್ಷೇತ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಜನತೆ ಇಟ್ಟ ಭರವಸೆಯನ್ನು ಕ್ಷೇತ್ರದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈಡೇರಿಸುತ್ತೇನೆ.

    ನಗರಸಭಾ ಮಾಜಿ ಸದಸ್ಯ ರಮೇಶ್ ಮಾತನಾಡಿ, ಎ.ಆರ್.ಕೃಷ್ಣಮೂರ್ತಿ ಅವರಿಂದ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇನ್ನು ಹೆಚ್ಚಿನ ಶಕ್ತಿ ಅವರಿಗೆ ಸಿಗಲಿ ಎಂದರು.

    ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಎ.ಆರ್.ಕೃಷ್ಣಮೂರ್ತಿ ಮಾಲಾರ್ಪಣೆ ಮಾಡಿದರು. ಎಆರ್‌ಕೆ ಸಹೋದರ ಬಾಲರಾಜ್, ಮುಖಂಡ ಅನ್ಸರ್ ಬೇಗ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಚಾಮುಲ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ನಿಗಮದ ಅಧ್ಯಕ್ಷ ಶಿವಕುಮಾರ್, ಜಿ.ಪಂ ಮಾಜಿ ಸದಸ್ಯ ಯೋಗೇಶ್, ನಗರಸಭಾ ಸದಸ್ಯರಾದ ಮಂಜುನಾಥ್, ಸುರೇಶ್, ರಾಘವೇಂದ್ರ ರೇಖಾ, ಸುಮಸುಬ್ಬಣ್ಣ, ಬಾಗ್ಯ, ಮಾಜಿ ಸದಸ್ಯ ರಮೇಶ್ ಹಾಗೂ ಮುಖಂಡರು ಹಾಗೂ ಕಾರ್ಯಕರ್ತರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts