More

    ರಾಜೀವ್ ಗಾಂಧಿ ಹತ್ಯೆ ಕೇಸ್​: ಹಂತಕಿ ನಳಿನಿ ಪೆರೋಲ್​ ಮೇಲೆ ಬಿಡುಗಡೆ

    ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಒಂದು ತಿಂಗಳು ಪೆರೋಲ್​ ಮೇಲೆ ಇಂದು(ಶಕ್ರವಾರ) ಬಿಡುಗಡೆಯಾಗಲಿದ್ದಾರೆ.

    ನಳಿನಿ ಅವರ ತಾಯಿ ಪದ್ಮಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತನ್ನ ಅನಾರೋಗ್ಯ ನಿಮ್ಮಿತ್ತ ಮಗಳನ್ನು ಪೆರೋಲ್​ ಮೇಲೆ ಬಿಡುಗಡೆ ಮಾಡಿ ಎಂದು ತಾಯಿ ಪದೇಪದೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು. ಈ ಬಗ್ಗೆ ಮದ್ರಾಸ್​ ಹೈಕೋರ್ಟ್​ ಗಮನಕ್ಕೂ ತಂದು ನಳಿನಿಯನ್ನು ಒಂದು ತಿಂಗಳು ಪೆರೋಲ್​ ಮೇಲೆ ಬಿಡುಗಡೆ ಮಾಡಲು ಸರ್ಕಾರ ಗುರುವಾರ ಒಪ್ಪಿಕೊಂಡಿತು. ಶ್ಯೂರಿಟಿ ಸೇರಿದಂತೆ ನಿಯಮ ಬದ್ಧ ಪ್ರಕ್ರಿಯೆ ಮುಗಿದ ಬಳಿಕ ಶುಕ್ರವಾರ ನಳಿನಿ ಜೈಲಿಂದ ಹೊರ ಬರಲಿದ್ದಾರೆ ಎಂದು ನಳಿನಿ ಪರ ವಕೀಲ ರಾಧಾಕೃಷ್ಣನ್ ಮಾಹಿತಿ ನೀಡಿದ್ದಾರೆ.

    1991ರ ಮೇ 21ರಂದು ತಮಿಳುನಾಡಿನ ಪೆರಂಬದೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಆತ್ಮಹತ್ಯಾ ಬಾಂಬರ್​ ಬಳಸಿ ರಾಜೀವ್​ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಶ್ರೀಹರನ್​ ಸೇರಿದಂತೆ 6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 30 ವರ್ಷದಿಂದ ನಳಿನಿ ಜೈಲಿನಲ್ಲೇ ಇದ್ದಾಳೆ. ಕಳೆದ ವರ್ಷ ಜೈಲಿನಲ್ಲೇ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಳು.

    ಜೆಡಿಎಸ್​ ಮುಖಂಡನ ಪುತ್ರನ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಲೇಡಿ ಎಸ್​ಐ ​ಜತೆಗಿನ ಲವ್ವಿಡವ್ವಿಯೇ ಮುಳುವಾಯ್ತಾ?

    ಊಟಕ್ಕೆಂದು ಹೋದವರು ವಾಪಸ್​ ಬಂದದ್ದು ಹೆಣವಾಗಿ… ಅಯ್ಯೋ ವಿಧಿಯೇ ನೀನೇಷ್ಟು ಕ್ರೂರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts