More

    ಧಾರಾಕಾರ ಮಳೆ, ರಸ್ತೆ ಮೇಲೆ ಬಿದ್ದ ಮರಗಳು: ಕರ್ನಾಟಕ-ಗೋವಾ ರಸ್ತೆಯಲ್ಲಿ 6 ತಾಸು ಸಂಚಾರ ಬಂದ್​

    ಬೆಳಗಾವಿ: ಭೀಮಗಡ ಅರಣ್ಯ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಜಾಂಬೋಟಿ- ಚೋರಲಾ ಮುಖ್ಯರಸ್ತೆಯ‌ ಮೇಲೆ ಮರಗಳು ಬಿದ್ದ ಪರಿಣಾಮ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೂ ಕರ್ನಾಟಕ–ಗೋವಾ ರಾಜ್ಯ ಹೆದ್ದಾರಿ ಬಂದ್ ಆಗಿತ್ತು.

    ಖಾನಾಪುರ ತಾಲೂಕಿನ ಕಲಮನಿ ಗ್ರಾಮದ ಬಳಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಜಾಂಬೋಟಿ ಮುಖ್ಯ ರಸ್ತೆಯಲ್ಲಿ ಮೂರು ಮರಗಳು ಬಿದ್ದಿದ್ದವು. ಇದರಿಂದಾಗಿ ಎರಡು ರಾಜ್ಯಗಳ ನಡುವೆ ವಾಹನ ಸಂಚಾರ ಸುಮಾರು 6 ಗಂಟೆ ಕಾಲ ಬಂದ್ ಆಗಿದ್ದರಿಂದ, ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡಿದರು.

    ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಮರಗಳನ್ನು ತೆರವುಗೊಳಿಸಿದರು. ಬಳಿಕ ವಾಹನಗಳ ಸಂಚಾರ ಆರಂಭವಾಯಿತು.

    ಆಷಾಢ ಹಿನ್ನೆಲೆ ತವರಿಗೆ ಬಂದಾಕೆ ದುರಂತ ಅಂತ್ಯ: ಆ ಒಂದು ತಿಂಗಳಲ್ಲಿ ಆಗಬಾರದ್ದೆಲ್ಲಾ ಆಗಿ ಹೋಯ್ತು…

    ನೀಟ್​ ಸೀಟು ಹಂಚಿಕೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts