More

    ಟಿಕೆಟ್ ರಹಿತ ಪ್ರಯಾಣಿಕರಿಂದ ಈ ರೈಲ್ವೆ ಟಿಕೆಟ್ ಚೆಕ್ಕರ್ ಸಂಗ್ರಹಿಸಿದ ದಂಡ ಬರೋಬ್ಬರಿ 1.5 ಕೋಟಿ ರೂಪಾಯಿ!

    ಮುಂಬೈ: ರೈಲಿನಲ್ಲಿ ಟಿಕೆಟ್​ ರಹಿತ ಪ್ರಯಾಣ ಮಾಡುವವರಿಂದ ದಂಡ ವಸೂಲಿ ಮಾಡುವುದನ್ನು ರೈಲ್ವೆಯ ಟಿಕೆಟ್​ ಚೆಕ್ಕರ್​ಗಳು ಮಾಡುತ್ತಲೇ ಇರುತ್ತಾರೆ. ಪ್ರಯಾಣಿಕರು ಸ್ಥಳೀಯ ಪ್ರಯಾಣ, ದೂರ ಪ್ರಯಾಣವನ್ನೂ ಕೆಲವೊಮ್ಮೆ ಟಿಕೆಟ್ ರಹಿತವಾಗಿ ಮಾಡುತ್ತಾರೆ. ಇಂತಹವರ ಸಂಖ್ಯೆ ಕಡಿಮೆಯೇನಲ್ಲ!

    ರೈಲ್ವೆಯ ಟಿಕೆಟ್ ಚೆಕ್ಕರ್ ಒಬ್ಬರು ಕಳೆದ ಒಂದೇ ವರ್ಷದ ಅವಧಿಯಲ್ಲಿ (2019) ಈ ರೀತಿ ಟಿಕೆಟ್ ರಹಿತ ಪ್ರಯಾಣ ಮಾಡಿದ 22, 680 ಪ್ರಯಾಣಿಕರಿಂದ ಸಂಗ್ರಹಿಸಿದ ದಂಡದ ಪ್ರಮಾಣ ಬರೋಬ್ಬರಿ 1.51 ಕೋಟಿ ರೂಪಾಯಿ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

    ಈ ಸಾಧನೆ ಮಾಡಿದ ಟಿಕೆಟ್ ಚೆಕ್ಕರ್ ಹೆಸರು ಎಸ್.ಬಿ.ಗಲಾಂಡೆ. ಕೇಂದ್ರೀಯ ರೈಲ್ವೆಯ ಫ್ಲೈಯಿಂಗ್ ಸ್ಕ್ವಾಡ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಕೇಂದ್ರೀಯ ರೈಲ್ವೆಗೆ ದಂಡದ ಮೂಲಕ ಗರಿಷ್ಠ ಆದಾಯ ಒದಗಿಸಿದ ಕೀರ್ತಿಗೆ ಗಲಾಂಡೆ ಭಾಜನರಾಗಿದ್ದಾರೆ.

    ಇವರಲ್ಲದೆ, ಕೇಂದ್ರೀಯ ರೈಲ್ವೆಯಲ್ಲಿ ಇನ್ನೂ ಮೂವರು ಟಿಕೆಟ್ ಚೆಕ್ಕರ್​ಗಳು ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದವರಿಂದ ಸಂಗ್ರಹಿಸಿದ ದಂಡದ ಮೊತ್ತ 1 ಕೋಟಿ ರೂಪಾಯಿಗೂ ಅಧಿಕ ಇದೆ. ಎಂ.ಎಂ.ಶಿಂಧೆ 16,035 ಪ್ರಯಾಣಿಕರಿಂದ 1.07 ಕೋಟಿ ರೂಪಾಯಿ, ಡಿ.ಕುಮಾರ್ 15,234 ಪ್ರಯಾಣಿಕರಿಂದ 1.02 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದರೆ, ಮುಂಬೈ ಡಿವಿಷನ್​ನ ಚೀಫ್ ಟಿಕೆಟ್ ಇನ್​ಸ್ಪೆಕ್ಟರ್​ ರವಿ ಕುಮಾರ್ ಜಿ 20,657 ಪ್ರಯಾಣಿಕರಿಂದ 1.45 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

    2019ರಲ್ಲಿ ಸೆಂಟ್ರಲ್ ರೈಲ್ವೆ ಟಿಕೆಟ್​ಲೆಸ್​ ಮತ್ತು ಇರ್ರೆಗ್ಯುಲರ್ ಪ್ರಯಾಣದ 37.64 ಲಕ್ಷ ಕೇಸ್​ಗಳನ್ನು ದಾಖಲಿಸಿದ್ದು, 192.51 ಕೋಟಿ ರೂಪಾಯಿ ಗಳಿಸಿದೆ. 2018ರಲ್ಲಿ 34.09 ಲಕ್ಷ ಕೇಸ್​ಗಳ ಮೂಲಕ 168.30 ಕೋಟಿ ರೂಪಾಯಿ ಸಂಗ್ರಹಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts