More

    ಕ್ಯೂಆರ್​ ಕೋಡ್​ ಬಳಸಿ ಹಣ ಪಾವತಿ ನೆಪದಲ್ಲಿ ಲಕ್ಷಾಂತರ ರೂ. ವಂಚಿಸಿದ ಯುವಕ! ಮೊಬೈಲ್​ ಅನ್ನೂ ಕದ್ದೊಯ್ದ…

    ಆನೇಕಲ್​: ಇತ್ತೀಚೆಗೆ ಆನ್​ಲೈನ್​ ವಹಿವಾಟು ಹೆಚ್ಚಾಗುತ್ತಿರುವಂತೆ ಹಣ ಪಾವತಿ ನೆಪದಲ್ಲಿ ವಂಚಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಗೂಗಲ್​ಪೇ ಮೂಲಕ ಹಣ ಪಾವತಿ ನೆಪದಲ್ಲಿ ವಂಚಕನೊಬ್ಬ ಬಟ್ಟೆ ಅಂಗಡಿ ಹಾಗೂ ಹಾರ್ಡ್​ವೇರ್​ ಅಂಗಡಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ. ಜತೆಗೆ ಅಂಗಡಿ ಮಾಲೀಕರ ಮೊಬೈಲ್​ ಫೋನ್​ಗಳನ್ನೂ ಕದ್ದೊಯ್ದಿದ್ದಾನೆ. ಈತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಆನೇಕಲ್​ನ ಅಂಬೇಡ್ಕರ್​ ವೃತ್ತದ ಬಳಿಯ ತುಳಸಿ ಕಲೆಕ್ಷನ್​ ಎಂಬ ಬಟ್ಟೆ ಅಂಗಡಿಗೆ ನಾಲ್ಕು ದಿನಗಳ ಹಿಂದೆ ಕರೆ ಮಾಡಿದ್ದ ವಂಚಕನೊಬ್ಬ, ಕ್ಯೂಆರ್​ ಕೋಡ್​ ಬಳಸಿ ಭಾರತ್​ಪೇ ಆ್ಯಪ್​ ಮೂಲಕ ಹಣ ಪಡೆಯುವ ವ್ಯವಸ್ಥೆ ಅಳವಡಿಸಿಕೊಡುವುದಾಗಿ ಹೇಳಿದ್ದ. ಅದರಂತೆ ಸ್ಥಳಕ್ಕೆ ಬಂದ ಯುವಕನೊಬ್ಬ ಕ್ಯೂಆರ್​ ಕೋಡ್​ ಮತ್ತು ಫೋನ್​ಪೇ ಆ್ಯಪ್​ ಅಪ್​ಡೇಟ್​ ಮಾಡಿಕೊಡುವುದಾಗಿ ನಂಬಿಸಿ, ಮಾಲೀಕರ ಅಕೌಂಟ್​ನಲ್ಲಿದ್ದ 56 ಸಾವಿರ ರೂ. ಎಗರಿಸಿದ್ದಾನೆ. ಬಳಿಕ ಇದೇ ರಸ್ತೆಯಲ್ಲಿರುವ ಸೂರ್ಯ ಹಾರ್ಡ್​ವೇರ್​ ಎಂಬ ಅಂಗಡಿ ಮಾಲೀಕರ ಬಳಿಗೆ ಹೋಗಿ ಅವರ ಮೊಬೈಲ್​ಫೋನ್​ ಪಡೆದು 36 ಸಾವಿರ ರೂ. ಎಗರಿಸಿದ್ದಾನೆ. ಜತೆಗೆ ಮೊಬೈಲ್ ಅನ್ನೂ ದೋಚಿದ್ದಾನೆ.

    ವಂಚನೆ ಕುರಿತು ದೂರು ಕೊಡಲು ಎರಡೂ ಅಂಗಡಿಗಳ ಮಾಲೀಕರು ಆನೇಕಲ್​ ಠಾಣೆಗೆ ಹೋದಾಗ ಸಿಬ್ಬಂದಿ ಉಡಾಫೆ ಉತ್ತರ ಕೊಟ್ಟಿದ್ದಾರೆ. ಇದರಿಂದಾಗಿ ಮಾಲೀಕರು ಹಣ ಕಳೆದುಕೊಂಡು ಅಸಹಾಯಕರಾಗಿದ್ದಾರೆ.

    ಇಂದಿನಿಂದ 3 ದಿನ ಕರ್ನಾಟಕದ ಹಲವೆಡೆ ಮಳೆ! ತಮಿಳುನಾಡು, ಕೇರಳದಲ್ಲೂ ಮಳೆ

    ಇಂದಿನಿಂದ 5 ದಿನ ವಿವಿಧ ರೈಲುಗಳ ಸಂಚಾರ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts