More

    ಅಭಿಮಾನಿಗಳು ಕೊಟ್ಟ ಹಣದಿಂದಲೇ ಅನ್ನಸಂತರ್ಪಣೆ ನಡೆಯುತ್ತಿದೆ.. ಎನ್ನುತ್ತಲೇ ಭಾವುಕರಾದ ಶಿವಣ್ಣ-ರಾಘಣ್ಣ

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ನಮ್ಮನ್ನು ಅಗಲಿ ಇಂದಿಗೆ(ನ.9) 12 ದಿನ. ಅಪ್ಪು ಪುಣ್ಯಸ್ಮರಣೆ ಹಿನ್ನೆಲೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ದೊಡ್ಮನೆ’ ಕುಟುಂಬಸ್ಥರಿಂದ ‘ಅಭಿ’ಮಾನದ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದ್ದು, ಜನಸಾಗರವೇ ಹರಿದು ಬರುತ್ತಿದೆ. ಪುನೀತ್​ ಪತ್ನಿ ಅಶ್ವಿನಿ, ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಆರಂಭದಲ್ಲಿ ಊಟ ಬಡಿಸಿದ್ದು, ಪುನೀತ್​ ಅಗಲಿಕೆಯ ನೋವಿನಲ್ಲೇ ಅಭಿಮಾನಿಗಳು ಊಟ ಮಾಡುತ್ತಿದ್ದಾರೆ. ಅರಮನೆ ಮೈದಾನದಲ್ಲಿ ಅಪ್ಪು ಹೆಸರಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ನಡೆಯುತ್ತಿದೆ.

    ಇಂತಹ ಸಂದರ್ಭ ಬಂದು ಊಟ ಹಾಕುವುದು ಅಂದ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ. ಅಪ್ಪು ಬದುಕಿದ್ದಾಗಲೇ ಊಟ ಹಾಕಬೇಕಿತ್ತು ಎಂಬುದು ಅವನ ಆಸೆಯಾಗಿತ್ತು, ಆದರೆ ಅಪ್ಪು ಬೇಗ ಹೋಗಿಬಿಟ್ಟ. ಅಭಿಮಾನಿಗಳೇ ನಮಗೆ ದೇವರು. ಅವರು ಕೊಟ್ಟದ್ದನ್ನು ಅವರಿಗೆ ಕೊಡ್ತಿದ್ದೀವಿ ಅಷ್ಟೆ. ನಮ್ಮದೇನೂ ಇಲ್ಲ. ಅಪ್ಪು ಮಾಡುತ್ತಿದ್ದ ಸಾಮಾಜಿಕ ಸೇವೆಗಳ ಬಗ್ಗೆ ಯಾವುದೂ ನಮ್ಮ ಕುಟುಂಬಕ್ಕೆ ಗೊತ್ತಿರಲಿಲ್ಲ. ಇಂತಹ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ಎಡಗೈಲಿ ಮಾಡಿದ್ದು ಬಲಗೈಗೆ ಗೊತ್ತಾಗಬಾರದು ಎಂಬ ಅಪ್ಪಾಜಿ ಮಾತನ್ನ ಅಪ್ಪು ಪಾಲಿಸಿದ್ದ. ಅಭಿಮಾನಿಗಳೇ ದೇವರು. ಎಷ್ಟು ಸಾಧ್ಯನೋ ಅಷ್ಟು ಮಂದಿಗೂ ಇವತ್ತು ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ ಎಂದು ಶಿವರಾಜ್​ಕುಮಾರ್​ ಹೇಳಿದರು.

    ಅಭಿಮಾನಿಗಳು ಕೊಟ್ಟ ಹಣದಿಂದಲೇ ಅನ್ನಸಂತರ್ಪಣೆ ನಡೆಯುತ್ತಿದೆ.. ಎನ್ನುತ್ತಲೇ ಭಾವುಕರಾದ ಶಿವಣ್ಣ-ರಾಘಣ್ಣ

    ಇದೇ ವೇಳೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್​, ಅಭಿಮಾನಿಗಳೇ ನಮಗೆ ಆಸ್ತಿ. ಅವರ ಪ್ರೀತಿಗೆ ಸಾಷ್ಟಾಂಗ ನಮಸ್ಕಾರ ಹಾಕುವುದನ್ನ ಬಿಟ್ಟರೆ ನಮ್ಮಿಂದ ಬೇರೇನೋ ಮಾಡೋಕೆ ಸಾಧ್ಯವಿಲ್ಲ. ನಾವಿರೋದೇ ಅಭಿಮಾನಿಗಳಿಂದ. ಅವರ ದುಡ್ಡಿಂದಲೇ ಅವರಿಗೆ ನಾವು ಊಟ ಬಡಿಸುತ್ತಿದ್ದೇವೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ… ಎನ್ನುತ್ತಲೇ ಭಾವುಕರಾದರು.

    ಅಭಿಮಾನಿಗಳು ಕೊಟ್ಟ ಹಣದಿಂದಲೇ ಅನ್ನಸಂತರ್ಪಣೆ ನಡೆಯುತ್ತಿದೆ.. ಎನ್ನುತ್ತಲೇ ಭಾವುಕರಾದ ಶಿವಣ್ಣ-ರಾಘಣ್ಣ

    ‘ಅಭಿ’ಮಾನದ ಅನ್ನಸಂತರ್ಪಣೆ: ಊಟ ಬಡಿಸಿದ ಅಶ್ವಿನಿ, ನೋವಿನಲ್ಲೇ ಊಟ ಮಾಡುತ್ತಿರುವ ಅಭಿಮಾನಿಗಳು

    ಪುನೀತ್​ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು…

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts