More

    ‘ಅಪ್ಪು’ ಸಮಾಧಿ ದರ್ಶನ ಪಡೆಯಲು ಸಾರ್ವಜನಿಕರಿಗೆ ಮುಕ್ತ ಅವಕಾಶ

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಮಂದಿ ಕಂಠೀರ ಸ್ಟೇಡಿಯಂ ಬಳಿ 2 ದಿನ ಬೀಡುಬಿಟ್ಟಿದ್ದರು. ಅಪ್ಪು ಅವರ ಅಂತಿಮ ದರ್ಶನ ಸಿಕ್ಕರೆ ಸಾಕು ಎಂದು ಮಕ್ಕಳು, ವೃದ್ಧರ ಹಾದಿಯಾಗಿ ಯುವಜನತೆಯೂ ಕಣ್ಣೀರು ಹಾಕುತ್ತಿದ್ದ ದೃಶ್ಯ ನೆನಸಿಕೊಂಡರೆ ಕಣ್ಣಂಚಲ್ಲಿ ನೀರು ಜಿನುಗುತ್ತೆ.

    ಇನ್ನು ಕಂಠೀರವ ಸ್ಟುಡಿಯೋದಲ್ಲಿ ಭಾನುವಾರ ಬೆಳಗ್ಗೆ ಅಪ್ಪು ಭೂತಾಯಿಯ ಮಡಿಲು ಸೇರುವಾಗಲೂ ಅವರ ಅಸಂಖ್ಯಾತ ಅಭಿಮಾನಿಗಳು ಸ್ಟೇಡಿಯಂನ ಹೊರಗೆ ಊಟ-ತಿಂಡಿಯ ಪರಿವೇ ಇಲ್ಲದೆ ನಿಂತಿದ್ದರು. ಸಮಾಧಿ ದರ್ಶನಕ್ಕೆ ಅವಕಾಶ ಕೊಡಿ ಎಂದು ಸೋಮವಾರ ಮತ್ತು ಮಂಗಳವಾರವೂ ಸಾವಿರಾರು ಮಂದಿ ಕಣ್ಣೀರಿಟ್ಟಿದ್ದರು. ಕೊನೆಗೂ ಅಪ್ಪು ಸಮಾಧಿ ದರ್ಶನ ಪಡೆಯಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.

    'ಅಪ್ಪು' ಸಮಾಧಿ ದರ್ಶನ ಪಡೆಯಲು ಸಾರ್ವಜನಿಕರಿಗೆ ಮುಕ್ತ ಅವಕಾಶ

    ದೀಪಾವಳಿ ಹಬ್ಬದ ದಿನವೂ ಸಾವಿರಾರು ಅಭಿಮಾನಿಗಳು ಬೆಳ್ಳಂಬೆಳಗ್ಗೆಯೇ ಪುನೀತ್​ ಅವರ ಸಮಾಧಿ ಬಳಿ ಭೇಟಿ ನೀಡಿ ಕಂಬನಿ ಮಿಡಿದಿದ್ದಾರೆ. ಸಮಾಧಿ ಸ್ಥಳದಲ್ಲಿ ನಿಂತು ಸಂತಾಪ ಸೂಚಿಸುತ್ತಾ… ಅಪ್ಪು ಸರ್​ ನೀವಿಷ್ಟು ಬೇಗ ಹೋಗಬಾರದಿತ್ತು. ನೀವಿಲ್ಲ ಎಂಬ ನೋವು ಅತೀವವಾಗಿ ಕಾಡುತ್ತಲೇ ಇದೆ ಎಂದು ಕಣ್ಣೀರಿಡುತ್ತಿದ್ದಾರೆ.

    ಮಂತ್ರಾಲಯದಲ್ಲಿ ಪುನೀತ್​ ಮಾತನಾಡುತ್ತಿರುವಾಗಲೇ ಅಲುಗಾಡಿದ್ದ ವೀಣೆ: ಸ್ಪಷ್ಟನೆ ನೀಡಿದ ಸುಬುಧೇಂದ್ರ ಶ್ರೀಗಳು

    ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ: ಸುದೀಪ್​ ಮಗಳು ಸಾನ್ವಿಯಿಂದ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts