More

    PSI ಹುದ್ದೆ ನೇಮಕಾತಿ ಅಕ್ರಮ: ಇಡೀ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ಆದೇಶಿಸಿದ ಸರ್ಕಾರ

    ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಯಾರು ಪರೀಕ್ಷೆ ಬರೆದಿದ್ದರೋ ಅವರಿಗೆ ಮರು ಪರೀಕ್ಷೆ ನಡೆಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಘೋಷಿಸಿದ್ದಾರೆ.

    ಯಾರು ಪಿಎಸ್​ಐ ಪರೀಕ್ಷೆ ಬರೆದಿದ್ದರೋ ಅವರಿಗೆ ಮರು ಪರೀಕ್ಷೆ ನಡೆಯುತ್ತೆ. ಆದರೆ, ಆಪಾದಿತರಿಗೆ ಮರು ಪರೀಕ್ಷೆಗೆ ಅವಕಾಶ ಕೊಡಲ್ಲ. ಹಣಕ್ಕಾಗಿ ಹುದ್ದೆ ಎಂಬುದನ್ನು ಮರೆಯಬೇಕು. ತಪ್ಪಿತಸ್ಥರ ವಿರುದ್ಧ ‌ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ಪಿಎಸ್​ಐ ಪರೀಕ್ಷೆ ಅಕ್ರಮ ಬೆಂಗಳೂರಿನಲ್ಲೂ ಆಗಿದೆ. ಕಳೆದ ಬಾರಿ ನಡೆದ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಲಾಗುವುದು. ಕಟ್ಟುನಿಟ್ಟಾಗಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವರು ಹೇಳಿದರು.

    ಗುರುವಾರ ರಾತ್ರಿ ಪೂನಾದಲ್ಲಿ ದಿವ್ಯಾ ಹಾಗರಗಿ ಅವರನ್ನ ಬಂಧಿಸಿ ಪೊಲೀಸರು ಕರೆತರುತ್ತಿದ್ದಾರೆ. ಕಷ್ಟಪಟ್ಟು ಓದಿದವರ ಬಾಯಿಗೆ ಇವರು ಮಣ್ಣು ಹಾಕಿದ್ರು. ಹಲವು ವರ್ಷಗಳಿಂದ ಈ ರೀತಿಯ ಅಕ್ರಮ ನಡೆಯುತ್ತಿದೆ, ಇದಕ್ಕೆ ಇತಿಶ್ರೀ ಹಾಕಲು ಸರ್ಕಾರ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದೆ. ಯಾರೂ ಇದರಲ್ಲಿ ಮಧ್ಯ ಪ್ರವೇಶ ಮಾಡೋದಿಲ್ಲ. ಇನ್ಮುಂದೆ ಪರೀಕ್ಷೆಯನ್ನ ಯಾವ ರೀತಿ ನಡೆಸಬೇಕೆಂಬ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಕಷ್ಟಪಟ್ಟು ಓದಿದವರಿಗೆ ವಂಚನೆ ಆಗಬಾರದರು. ಯಾರು ಬೇಕಾದರು ಇರಲಿ, ಎಷ್ಟು ಪ್ರಭಾವಿಗಳೇ ಇರಲಿ. ನಾವು ಮಧ್ಯ ಪ್ರವೇಶ ಮಾಡೋದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದರು.

    ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

    ಜೆಡಿಎಸ್​ ಪಕ್ಷವನ್ನೇ ವಿಸರ್ಜನೆ ಮಾಡ್ತೀವಿ, ಮತ್ತೆ ಮತ ಕೇಳಲು ಬರಲ್ಲ: ಸವಾಲು ಸ್ವೀಕರಿಸುತ್ತಲೇ ಎಚ್​ಡಿಕೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts