More

    ಮಹಿಳಾ ಪ್ರಾಬಲ್ಯವೇ ದಸರೆಯ ವಿಶೇಷ: ಮೈಸೂರಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಹೇಳಿಕೆ

    ಮೈಸೂರು: ಮೈಸೂರು ದಸರಾ ಭಾರತದ ಸಂಸ್ಕೃತಿಯ ಪ್ರತೀಕ. ಈ ಹಬ್ಬ ಹಲವು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಮಹಿಳಾ ಪ್ರಾಬಲ್ಯವೇ ದಸರೆಯ ವಿಶೇಷ ಎಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಬಣ್ಣಿಸಿದರು.

    ನಾಡಹಬ್ಬ ದಸರಾಗೆ ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ದ್ರೌಪದಿ ಮುರ್ಮು, ಬಸವಣ್ಣ, ಅಲ್ಲಮಪ್ರಭು ಆದರ್ಶ ವ್ಯಕ್ತಿಗಳಾಗಿದ್ದರು. ಅವರ ವಚನ ಜನತಂತ್ರ ವ್ಯವಸ್ಥೆ ಮಾದರಿಯಾಗಿದೆ. ಈಗಲೂ ವಚನವನ್ನು ಭಕ್ತಿಪೂರ್ವಕವಾಗಿ ಕೇಳಲಾಗುತ್ತದೆ. ಕರ್ನಾಟಕ ಭಕ್ತಿ ಸಮಾನತೆಯನ್ನು ಎಲ್ಲೆಡೆ ಪಸರಿಸಲಾಗಿದೆ. ಮಹಿಷಾಸುರ ಮರ್ಧನದ ಮೂಲಕ ಮಹಿಳೆಯ ಸಾಮರ್ಥ್ಯದ ಪರಿಚಯ ಮಾಡಿಕೊಡಲಾಗಿದೆ. ಮಹಿಳೆ ಶಾಂತಿ- ಶಕ್ತಿ- ಶೌರ್ಯದ ಸಂಕೇತ ಎಂಬುದನ್ನು ಬಿಂಬಿಸಲಾಗಿದೆ. ಮಹಿಳಾ ಪ್ರಾಬಲ್ಯವೇ ದಸರೆಯ ವಿಶೇಷ ಎಂದರು.

    ಮಹಿಳಾ ಪ್ರಾಬಲ್ಯವೇ ದಸರೆಯ ವಿಶೇಷ: ಮೈಸೂರಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಹೇಳಿಕೆ

    ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಒನಕೆ‌ ಓಬವ್ವ ಅವರುಗಳು ಎಲ್ಲ ಮಹಿಳೆಯರಿಗೆ ಪ್ರೇರಣೆ. ವಿದೇಶಿಗರನ್ನು ಧೈರ್ಯದಿಂದ ಎದುರಿಸಿದ ವೀರ ವನಿತೆಯರು. ಮೈಸೂರು ದಸರಾ ಮುಂದುವರಿದಿರುವುದು ಹೆಮ್ಮೆಯ ವಿಷಯ. ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ನನಗೆ ಅವಕಾಶ ನೀಡಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಎಂದು ರಾಷ್ಟ್ರಪತಿಗಳು ಹೇಳಿದರು.

    ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಹೊಗಳಿದ ರಾಷ್ಟ್ರಪತಿಗಳು, ಹಲವು ಕಾರ್ಯಕ್ರಮದಲ್ಲಿ ಕರ್ನಾಟಕ ಉತ್ತಮ ಸ್ಥಾನದಲ್ಲಿದೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ. ಜೈ ಹಿಂದ್ ಜೈ ಭಾರತ್ ಜೈ ಕರ್ನಾಟಕ… ಎನ್ನುತ್ತಾ ಭಾಷಣ ಮುಗಿಸಿದರು.

    ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ವ ಜನರನ್ನೂ ಕಲ್ಯಾಣದತ್ತ ಕೊಂಡೊಯ್ಯುವ ಶಕ್ತಿ ನೀಡಲಿ. ನಾಡು ಸುಭಿಕ್ಷೆಯಿಂದ ಕೂಡಿರಲಿ ಎಂದು ನಾಡಿನ ಅಧಿದೇವತೆ ಚಾಮುಂಡಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರಾರ್ಥಿಸಿದರು.

    ಕನ್ನಡ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳು. ನಾಡು ಸುಭಿಕ್ಷಾವಾಗಿ ಇರುವಂತೆ ಪ್ರಾರ್ಥನೆ ಮಾಡುತ್ತೇವೆ. ಅದಕ್ಕೆ ತಾಯಿ ಒಲಿದು ಉತ್ತಮ‌ ಮಳೆ ಆಗುತ್ತಿದೆ. ಈ ಬಾರಿ ಮೈಸೂರು ದಸರಾ ಹಲವು ವಿಶೇಷತೆಗಳಿಂದ ಕೂಡಿದೆ. ಅರ್ಥ ಪೂರ್ಣವಾಗಿ ಗತವೈಭವವನ್ನ ನೆನಪು‌ ಮಾಡಿಕೊಳ್ಳುವ ರೀತಿ ನಡೆಯುತ್ತಿದೆ. ನಾಡಿನ ರೈತರು, ಸಾಮಾನ್ಯ ವರ್ಗದ ಜನರು ಮನೆ-ಮನೆಯಲ್ಲೂ ದಸರಾ ಆಚರಣೆ ನಡೆಯುತ್ತಿದೆ. ತಾಯಿ ಚಾಮುಂಡಿ ದೇವತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶಕ್ತಿ ಕೊಟ್ಟಿದ್ದಾಳೆ ಎಂದರು.

    ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬಂದಿರೋದು ಅಪರೂಪದ ಘಟನೆ. ರಾಷ್ಟ್ರಪತಿಯಾದ ಮೇಲೆ ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಅದುವೆ ನಾಡದೇವತೆಗೆ ಪೂಜೆ ಸಲ್ಲಿಸುವ ಮೂಲಕ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ತಾಯಿ ಚಾಮುಂಡೇಶ್ವರಿಗೆ ಹಂಸ ವಾಹಿನಿ ಅಲಂಕಾರ ಮಾಡಲಾಗಿದೆ. ದುಷ್ಟರ ಸಂಹಾರ, ಶಿಷ್ಟರ ಪರಿಪಾಲನೆ ಇದೆ. ಮಹಿಷಾಸುರ ಈಗ ಇಲ್ಲ. ನಮ್ಮೊಳಗಿನ ಅವಗುಣಗಳನ್ನು ನಿಗ್ರಹಿಸಿಕೊಳ್ಳಬೇಕು. ಪ್ರತಿ ಬಾರಿ ದಸರಾ ಮಹೋತ್ಸವ ಸಂಕಲ್ಪ ಮಾಡುವ ದಿನ. ಹಂಸ ಶುದ್ಧತೆಗೆ ಪ್ರತೀಕ. ಅತಿ ಎತ್ತರಕ್ಕೆ ಹಾರುವ ಪಕ್ಷಿಯೂ ಹಂಸ. ಶುದ್ಧತೆ ಇದ್ದರೆ ಎತ್ತರಕ್ಕೆ ಹಾರಬಹುದು ಎಂಬುದನ್ನು ಅರ್ಥೈಸಿಕೊಳ್ಳಬಹುದು. ಸರ್ವ ಜನರನ್ನೂ ಕಲ್ಯಾಣದತ್ತ ಕೊಂಡೊಯ್ಯುವ ಶಕ್ತಿಯನ್ನು ತಾಯಿ ಚಾಮುಂಡಿ ನೀಡಲಿ ಎಂದು ಸಿಎಂ ಪ್ರಾರ್ಥಿಸಿದರು.

    ಅಧಿದೇವತೆ ಚಾಮುಂಡಿಗೆ ಪುಷ್ಪಾರ್ಚನೆ ಮಾಡಿ ನಾಡಹಬ್ಬ ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ

    ದಸರಾಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರು: ಸಾಂಸ್ಕೃತಿಕ ಸಿರಿ- ಧಾರ್ಮಿಕ ಐಸಿರಿಯ ಸಮ್ಮಿಲನ… ಕಳೆಗಟ್ಟಲಿದೆ ನವೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts