More

    ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕದ ಸಮರ್ಥನೆಗೆ ಸಜ್ಜಾಗಿ: ಶಾಸಕರಿಗೆ ಸಿಎಂ ಸೂಚನೆ

    ಬೆಂಗಳೂರು: ವಿಧೇಯಕಗಳ ಬಗ್ಗೆ ಸರಿಯಾಗಿ ಅಧ್ಯಯನ ಮಾಡಿಕೊಂಡು ಸದನದಲ್ಲಿ ಸಮರ್ಥವಾಗಿ ನಿಲುವು ಮಂಡಿಸಲು ಸಜ್ಜಾಗಿ ಬನ್ನಿ. ಅದರಲ್ಲೂ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕದ ವಿಷಯದಲ್ಲಿ ಪ್ರತಿಪಕ್ಷಗಳ ವಿರೋಧಕ್ಕೆ ಒಗ್ಗಟ್ಟಿನಿಂದ ಉತ್ತರಿಸಬೇಕು ಎಂದು ಶಾಸಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಸಿಎಂ, ಸದನಕ್ಕೆ ತಪ್ಪದೇ ಹಾಜರಾಗಿ ‌ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

    ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕದ ಸಮರ್ಥನೆಗೆ ಸಜ್ಜಾಗಿ: ಶಾಸಕರಿಗೆ ಸಿಎಂ ಸೂಚನೆ

    ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಷಯದಲ್ಲಿ ಮುಖ್ಯಮಂತ್ರಿಯ ದಿಟ್ಟ ನಿಲುವನ್ನು ಪ್ರಶಂಸಿಸಿದ ಶಾಸಕರು, ‌ವಿಧೇಯಕ ತಂದಿದ್ದಕ್ಕಾಗಿ ಒಕ್ಕೊರಲಿನಿಂದ ಅಭಿನಂದಿಸಿದರು.ಮುಂಬರುವ ಚುನಾವಣೆಗಳನ್ನು ಎದುರಿಸುವ ದೃಷ್ಟಿಯಿಂದ ಶಾಸಕರ ಕೈಬಲಪಡಿಸಬೇಕು ಎಂದು ವಿನಂತಿಸಿ, ವಸತಿ ಯೋಜನೆಯಡಿ ಮನೆಗಳು ಮಂಜೂರು, ಬಿಪಿಎಲ್ ಪಡಿತರ ಚೀಟಿ ವಿತರಣೆ, ಕೃಷ್ಣಾ ಮೂರನೇ ಹಂತದ ಯೋಜನೆಗೆ ಆದ್ಯತೆ, ಸಮುದ್ರ ಕೊರೆತಕ್ಕೆ ಪರಿಹಾರ, ಅಭಿವೃದ್ಧಿ ಅನುದಾನ ಬಿಡುಗಡೆ, ಶಾಸಕರ ವಿವೇಚನಾ ನಿಧಿಗೆ ನೆರವು ತ್ವರಿತ ಮಂಜೂರು ಸೇರಿದಂತೆ ಹಲವು ಅಹವಾಲುಗಳನ್ನು ಸಭೆಯ ಮುಂದಿಟ್ಟರು ಎಂದು ಮೂಲಗಳು ತಿಳಿಸಿವೆ.

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ಹಾವೇರಿ ಆಸ್ಪತ್ರೆಯಲ್ಲಿ ಧಗಧಗಿಸಿದ ಬೆಂಕಿ: ಹಸುಗೂಸನ್ನು ಬಿಗಿದಪ್ಪಿ ಚೀರಾಡುತ್ತಾ ಓಡಿದ ಬಾಣಂತಿಯರು

    ಬೆಂಗಳೂರಿನ ದುರಂತ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಮತ್ತೊಂದು ಕುಟುಂಬ ಆತ್ಮಹತ್ಯೆ!

    ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts