More

    ನಾನು ಕಬ್ಬನ್ ಪಾರ್ಕ್-ಲಾಲ್​ಬಾಗ್ ಸುತ್ತೋಕೆ ಬಂದಿಲ್ಲ! ನನ್ನ ಬಗ್ಗೆ ಎಚ್ಚರದಿಂದ ಮಾತಾಡಿ: ಸಚಿವರಿಗೆ ಪ್ರೀತಂ ಖಡಕ್​ ವಾರ್ನಿಂಗ್​

    ಬೆಂಗಳೂರು: ನಾನು ರಾಜಕಾರಣ ಮಾಡೋಕೆ ಬಂದವನು. ಕಬ್ಬನ್ ಪಾರ್ಕ್, ಲಾಲ್​ಬಾಗ್ ನೋಡೋಕೆ ಬಂದಿಲ್ಲ. ನನ್ನ ನಿಲುವು ಬದಲಾಗಿಲ್ಲ. ನಾನು ಪ್ರಶ್ನೆ ಮಾಡಿದ್ದು ನೂರಕ್ಕೆ‌ ನೂರು‌ ಸತ್ಯ. ಒಂದು ಸಾರಿ‌ ಗೆದ್ದರೇ ಐದು ಬಾರಿ ‌ಗೆಲ್ಲೋದು. ಮೊದಲು ಗೆದ್ದವರಿಗೂ ಒಂದೇ ವೋಟು, ಆರು ಬಾರಿ ಗೆದ್ದವರಿಗೂ ಒಂದೇ ವೋಟು. ನನ್ನ ಬಗ್ಗೆ ಮಾತನಾಡುವಾಗ ಹಿರಿಯರೇ ಆಗಲಿ, ಯಾರೇ ಆಗಲಿ ಎಚ್ಚರದಿಂದ ಇರಬೇಕು ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ದೇವೇಗೌಡರ ಮನೆಗೆ ಹೋಗುವ ಅಗತ್ಯವೇನಿತ್ತು? ಎಂಬ ಕಾರ್ಯಕರ್ತರ ಕೇಳುತ್ತಿದ್ದಾರೆ. ಅದನ್ನೇ ನಾನು ಕೇಳಿದ್ದೇನೆ. ಹಿರಿಯರು ಮಾರ್ಗದರ್ಶನ ಮಾಡಲಿ. ಅದು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುವುದು ಬೇಡ. ನಾನು ಮಂತ್ರಿ ಸ್ಥಾನ ಕೇಳೇ ಇಲ್ಲ. ನೆಲ, ಜಲ, ಭಾಷೆ ಬಗ್ಗೆ ಬೇಕಾದರೆ ಮಾತನಾಡಲಿ. ನನ್ನ ಬಗ್ಗೆ ಹಗುರವಾಗಿ ಮಾತಾಡುವುದನ್ನು ನಾನು ಸಹಿಸಲ್ಲ ಎನ್ನುತ್ತಲೇ ಸಚಿವರಾದ ವಿ.ಸೋಮಣ್, ಗೋವಿಂದ ಕಾರಜೋಳ ಅವರಿಗೆ ಟಾಂಗ್​ ಕೊಟ್ಟರು. ಇದನ್ನೂ ಓದಿರಿ  ಒಂದು ಸಾರಿ ಎಂಎಲ್ಎ ಆದತಕ್ಷಣಕ್ಕೆ ದೇವರಲ್ಲ, ನಾನು ಸಚಿವನಾಗಿದ್ದಾಗ ಆತ ಹುಟ್ಟೇ ಇರಲಿಲ್ಲ: ಸಚಿವ ವಿ. ಸೋಮಣ್ಣ ಗರಂ

    ಪಕ್ಷವನು ಇಲ್ಲಿವರೆಗೆ ಅಭಿವೃದ್ಧಿ ಮಾಡಿದ್ದೇನೆ. ಸಂಘಟನೆ ಮುಂದುವರಿಸಿಕೊಂಡು ಹೋಗುತ್ತೇನೆ. ನಾನು ಸಿಎಂ ಅವರನ್ನು ಭೇಟಿ‌ ಮಾಡಿದ್ದೆ. ಕಾರ್ಯಕರ್ತರ ನೋವನ್ನು ತಿಳಿಸಿದ್ದೇನೆ. ಸಮಸ್ಯೆಗಳ ಬಗ್ಗೆ ವಿವರಿಸಿದ್ದೇನೆ. ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ತೇನೆ ಎಂದಿದ್ದಾರೆ. 120 ಶಾಸಕರೂ ಸಿಎಂ ಬೆನ್ನಿಗಿದ್ದೇವೆ. ವೈಯುಕ್ತಿಕ ಅಧಿಕಾರದ ಬಗ್ಗೆ ಮಾತನಾಡಲ್ಲ ಎಂದು ಪ್ರೀತಂಗೌಡ ಹೇಳಿದರು.

    ಬೊಮ್ಮಾಯಿ ವಿರುದ್ಧ ಬಿಎಸ್​ವೈಗೆ ದೂರು! ಪ್ರೀತಂಗೌಡಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಹಾಲಿ-ಮಾಜಿ ಸಿಎಂ

    ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

    ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts