More

    ಇವ್ರ ಒತ್ತಡಕ್ಕೆ ಮಣಿದರೆ ಮುಂದೊಂದು ದಿನ ದೇಶವನ್ನೇ ತುಂಡು ಮಾಡಿ ಅಂತಾರೆ: ಖಾದರ್​ ವಿರುದ್ಧ ಪ್ರತಾಪ್​ ಸಿಂಹ ಕಿಡಿ

    ಮೈಸೂರು: ಯು.ಟಿ.ಖಾದರ್ ನಿಜವಾದ ಮೂರ್ಖ. ಉಳ್ಳಾಲದ ಮುಲ್ಲಾ ಖಾದರ್‌ಗೆ ಮೈಸೂರು ಇತಿಹಾಸದ ಬಗ್ಗೆ ಗೊತ್ತಿಲ್ಲ. ಮಹಾರಾಜರ ವಂಶಕ್ಕೆ ದ್ರೋಹ ಬಗೆದದ್ದು ಹೈದರಾಲಿಯ ಮಗ ಟಿಪ್ಪು ಅಂತ ಖಾದರ್​ಗೆ ಗೊತ್ತಿಲ್ವಾ? ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ.

    ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರನ್ನ ಬದಲಾವಣೆ ಮಾಡ್ತೀವಿ. ಮೈಸೂರಿಗೆ ರೈಲು ತಂದದ್ದು ಮೈಸೂರು ಅರಸರು. ಮೈಸೂರು ಮಹಾರಾಜರ ವೈಯಕ್ತಿಕ ಯೋಜನೆಯಾಗಿತ್ತು. ಕ್ರೆಡಿಟ್ ಕೂಡ ಸೂಕ್ತ ವ್ಯಕ್ತಿಗೆ ನೀಡಬೇಕು ಎಂದು ಭಾನುವಾರ ಪ್ರತಾಪ್​ ಸಿಂಹ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಯು.ಟಿ.ಖಾದರ್​, ಮೂರ್ಖರ ಪ್ರಶ್ನೆಗೆ ಉತ್ತರ ಸಿಗುತ್ತಾ? ಎಂದು ತಿರುಗೇಟು ನೀಡಿದ್ದರು. ಈ ಮಾತಿಗೆ ಗರಂ ಆದ ಪ್ರತಾಪ್​ ಸಿಂಹ, ಸೋಮವಾರ ಸುದ್ದಿಗಾರರ ಜತೆ ಮಾತನಾಡುತ್ತಾ, ನಿಜವಾದ ಮೂರ್ಖತನ ಪ್ರದರ್ಶನ ಮಾಡ್ತಿರೋದು ಖಾದರ್. ಉಳ್ಳಾಲದ‌ ಮುಲ್ಲಾ ಖಾದರ್‌ಗೆ ಮೈಸೂರು ಇತಿಹಾಸದ ಬಗ್ಗೆ ಗೊತ್ತಿಲ್ಲ ಎಂದರು.

    ಕೋರ್ಟ್ ತೀರ್ಪು ಬರುವವರೆಗೂ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯವಾರದು. ಇವತ್ತು ಹಿಜಾಬ್ ಕೇಳ್ತಾರೆ, ನಾಳೆ ಬುರ್ಕಾ ಹಾಕೊಂಡು ಬರ್ತಾರೆ. ಶುಕ್ರವಾರ ಬಂದ್ರೆ ಶಾಲೆಯಲ್ಲೇ ನಮಾಜ್ ಮಾಡ್ತೀವಿ ಅಂತಾರೆ. ಕ್ಲಾಸ್ ರೂಮ್​ನಲ್ಲಿ ಪ್ರಾರ್ಥನಾ ಹಾಲ್ ಕಟ್ಟಿಸಿಕೊಡಿ ಅಂತಾರೆ. ಮುಂದೊಂದು ದಿನ ದೇಶ ತುಂಡು ಮಾಡಿ ಅಂತಾರೆ. ಎಪ್ಪತ್ತು ವರ್ಷಗಳ ಹಿಂದೆ ಇವರೆಲ್ಲಾ ಇದನ್ನೇ ಮಾಡಿದ್ದು ಎಂದು ಪ್ರತಾಪ್​ ಸಿಂಹ ಕಿಡಿಕಾರಿದರು.

    ಇವರ ಒತ್ತಡಕ್ಕೆ ಮಣಿಯುತ್ತಾ ಹೋದರೆ ದೇಶವನ್ನ ತುಂಡರಿಸುತ್ತಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಮವಸ್ತ್ರ ಇದೆಯೊ ಇಲ್ಲವೋ. ಜಗತ್ತಿನ ಎಲ್ಲಾ ದೇಶಗಳಲ್ಲೂ ಸಮವಸ್ತ್ರ ಇದೆ. ಆ ಜಾತಿ, ಈ ಜಾತಿ, ಆ ಧರ್ಮ ಈ ಧರ್ಮ ಅಂತ ಭೇದಭಾವ ಇಲ್ಲದೆ ಸಮಾನವಾಗಿ ಜ್ಞಾನಾರ್ಜಾನೆ ಮಾಡಲು ಸಮವಸ್ತ್ರ ಜಾರಿಗೊಳಿಸಿವೆ. ಇದನ್ನ ಅರ್ಥ ಮಾಡಿಕೊಳ್ಳುವ ಕನಿಷ್ಡ ಜ್ಞಾನ ಇಲ್ಲ ಅಂದ್ರೆ ಅದು ಖಾದರ್ ಮತ್ತು ಕಾಂಗ್ರೆಸ್ ಸಮಸ್ಯೆ. ಅದು‌ ನಮ್ಮ ಸಮಸ್ಯೆ ಅಲ್ಲ ಎಂದು ಪ್ರತಾಪ್​ ಸಿಂಹ ವಾಗ್ದಾಳಿ ನಡಿಸಿದರು.

    ಹಿಜಾಬ್​ ಧರಿಸಿಯೇ ಪಾಠ ಮಾಡಿದ ಶಿಕ್ಷಕಿಯರು! ವಿದ್ಯಾರ್ಥಿನಿಯರು ಮಾತ್ರ ಹೈಕೋರ್ಟ್​ ಆದೇಶ ಪಾಲಿಸಿ ಮಾದರಿ ಆದ್ರು

    ಶಾಲೆಗಳಿಗೆ ಶಿಕ್ಷಕಿಯರೇ ಹಿಜಾಬ್​ ಧರಿಸಿ ಬಂದ್ರು! ಮಂಡ್ಯ, ಕಲಬುರಗಿ, ರಾಯಚೂರು, ವಿಜಯಪುರದಲ್ಲಿ ಘಟನೆ

    ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts